ಗಾಂಧಿನಗರ: ಅಮುಲ್ ಬ್ರ್ಯಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಮತ್ತೆ ಹಾಲಿನ ಬೆಲೆ ಏರಿಕೆ ಮಾಡಿದೆ.
ಹಾಲಿನ ಬೆಲೆ ಪ್ರತಿ ಲೀಟರ್ಗೆ 3 ರೂ. ಹೆಚ್ಚಿಸಿದೆ. ದರ ಪರಿಕ್ಷರಣೆಯ ನಂತರ ಅಮುಲ್ ಗೋಲ್ಡ್ ಹಾಲಿನ ಬೆಲೆ ಪ್ರತಿ ಲೀಟರ್ಗೆ 66 ರೂ. ಆಗಿದೆ. ಅಮುಲ್ ತಾಜಾ 1 ಲೀಟರ್ಗೆ 54 ರೂ. ಹಾಗೂ ಅಮುಲ್ ಎ2 ಎಮ್ಮೆ ಹಾಲಿನ ದರ ಪ್ರತಿ ಲೀಟರ್ಗೆ 70 ರೂ.ಗಳಿಗೆ ಏರಿಕೆ ಕಂಡಿದೆ. ಈ ದರ ಫೆ.3ರಿಂದಲೇ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಿಸಿಎಂಎಂಎಫ್ 2022ರ ಅಕ್ಟೋಬರ್ನಲ್ಲಿ ಗೋಲ್ಡ್, ತಾಜಾ ಹಾಗೂ ಶಕ್ತಿ ಬ್ರ್ಯಾಂಡ್ಗಳ ಹಾಲಿನ ಬೆಲೆಯನ್ನು 2 ರೂ. ಹೆಚ್ಚಿಸಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿ20 ಶೃಂಗಸಭೆ – ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ No Fly Zone ಜಾರಿ
ಇದೀಗ ಫೆ.3ರಿಂದ ಜಾರಿಗೆ ಬರುವಂತೆ ಅಮುಲ್ ಪ್ಯಾಕೆಟ್ ಹಾಲಿನ ಬೆಲೆಯನ್ನು ಪರಿಷ್ಕರಿಸಿದೆ. ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಆಗಿರುವುದು ಹಾಗೂ ದನಗಳ ಮೇವಿನ ವೆಚ್ಚ ಏರಿಕೆಯಾಗಿರುವುದರಿಂದ ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಅಮಲ್ ಹೇಳಿದೆ. ಇದನ್ನೂ ಓದಿ: `ಕಲಾತಪಸ್ವಿ’ ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ವಿಶ್ವನಾಥ್ ನಿಧನ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k