ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆ ಬಂಧನದ ಬಳಿಕ ಹಲವು ಮಹತ್ವದ ವಿಚಾರಗಳನ್ನು ಎಸ್‍ಐಟಿ ತಂಡ ಸಂಗ್ರಹಿಸಿದ್ದು, ಸದ್ಯ ಗೌರಿ ಲಂಕೇಶ್ ಅವರ ಹತ್ಯೆಗೆ `ಅಪರೇಷನ್ ಅಮ್ಮ’ ಎಂದು ಹೆಸರಿಟ್ಟಿದ್ದರು ಎಂದು ಮೂಲಗಳು ತಿಳಿಸಿದೆ.
ಪ್ರಮುಖವಾಗಿ ಗೌರಿ ಅವರ ಹತ್ಯೆಗೂ ಮುನ್ನ ಆರೋಪಿಗಳಿಗೆ ಕುರಿತು ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಕೋರ್ಡ್ ವಾರ್ಡ್‍ಗಳನ್ನು ಬಳಕೆ ಮಾಡಲಾಗುತ್ತಿತ್ತು. ಅದ್ದರಿಂದಲೇ ಹತ್ಯೆಗೂ ಮುನ್ನ ಆರೋಪಿಗಳಿಗೆ ಗೌರಿ ಅವರ ಕುರಿತು ಮಾಹಿತಿ ನೀಡಿರಲಿಲ್ಲ. ಈ ಕುರಿತು ಎಸ್‍ಐಟಿ ಅಧಿಕಾರಿಗಳು ಆರೋಪಿಗಳಿಂದ ಜಪ್ತಿಯಾದ ಡೈರಿಯಲ್ಲಿ ಬಹುತೇಕ ಕೋಡ್‍ವರ್ಡ್ ಪತ್ತೆಯಾಗಿದೆ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ಸಂವಹನಕ್ಕೂ ಕೋಡ್‍ವರ್ಡ್: ಹತ್ಯೆ ಸಂಚು ರೂಪಿಸುವ ವೇಳೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳಿಗೂ ಸಂವಹನ ನಡೆಸಲು ಕೋಡ್ ವರ್ಡ್‍ಗಳನ್ನೇ ಬಳಕೆ ಮಾಡುತ್ತಿದ್ದರು. ಮೊಬೈಲ್ ನಂಬರ್, ಭೇಟಿಯಾಗುವ ಸ್ಥಳಕ್ಕೂ ಕೋಡ್‍ವರ್ಡ್ ನಿಗಧಿಯಾಗಿತ್ತು. ಎಲ್ಲಾ ಕೋಡ್‍ವರ್ಡ್‍ಗಳನ್ನು ಮರಾಠಿ ಮಿಶ್ರಿತ ಅಕ್ಷರಗಳಲ್ಲಿರುವ ಬಳಕೆ ಮಾಡಲಾಗುತ್ತಿತ್ತು. ಪ್ರಕರಣದಲ್ಲಿ ಯಾವುದೇ ಸುಳಿವು ಸಿಗಬಾರದು ಎಂಬ ಉದ್ದೇಶಕ್ಕೆ ಈ ಕೋಡ್‍ವರ್ಡ್ ಬಳಕೆ ಮಾಡಿದ್ದು, ಸದ್ಯ ಬಹುತೇಕ ಕೋಡ್‍ಗಳನ್ನು ಎಸ್‍ಐಟಿ ತಂಡ ಬಹುತೇಕ ಡಿಕೋಡ್ ಮಾಡಿದೆ ಎಂದು ತಿಳಿದು ಬಂದಿದೆ.
Advertisement
ಮತ್ತಿಬ್ಬರು ಸಾಹಿತಿಗಳ ಹತ್ಯೆಗೆ ಸಂಚು: ಗೌರಿ ಲಂಕೇಶ್ ಹತ್ಯೆ ಮಾಡಿರುವ ರೀತಿಯಲ್ಲೇ ಆರೋಪಿಗಳು ಇನ್ನಿಬ್ಬರ ಸಾಹಿತಿಗಳ ಹತ್ಯೆಗೂ ಸಂಚು ರೂಪಿಸಿದ್ದರು. ವಿಶೇಷವಾಗಿ ಇನ್ನಿಬ್ಬರು ಸಾಹಿತಿಗಳ ಹತ್ಯೆಗೂ ಎರಡಕ್ಷರದ ಕೋಡ್‍ವರ್ಡ್ ಬಳಕೆ ಮಾಡಲಾಗಿದ್ದು, ಈ ಕುರಿತ ಪಟ್ಟಿ ಸಹ ತಯಾರು ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನು ಓದಿ: ಗೌರಿ ಲಂಕೇಶ್ ಹತ್ಯೆ ಕೇಸ್ – ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!
Advertisement
https://www.youtube.com/watch?v=O-__JlcxgVc