ಮುಂಬೈ: ಬಾಲಿವುಡ್ ಬಹುನಿರೀಕ್ಷಿತ ಚಿತ್ರ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಿಡುಗಡೆಗೆ ಒಂದೇ ದಿನ ಬಾಕಿ. ಜಗತ್ತಿನಾದ್ಯಂತ ಸಿನಿಮಾ ಬಿಡುಗಡೆ ಮಾಡಲು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಬ್ಯುಸಿಯಾಗಿದ್ದರೆ, ಇತ್ತ ಕಡೆ ಸುಪ್ರೀಂ ಕೋರ್ಟ್ ಸಲಹೆಯೊಂದನ್ನು ನೀಡಿ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಸಿನಿಮಾದ ಕುರಿತಾಗಿ ಸಾಕಷ್ಟು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಸಿನಿಮಾ ಹೆಸರನ್ನು ಬದಲಾಯಿಸಿಕೊಳ್ಳುವಂತೆ ಚಿತ್ರತಂಡಕ್ಕೆ ಸಲಹೆ ನೀಡಿದೆ.
ಹೆಸರು ಬದಲಾಯಿಸುವುದರ ಜತೆಗೆ ಸಿನಿಮಾದ ಕಥೆಯೇ ಬಗ್ಗೆಯೇ ಆಕ್ಷೇಪ ವ್ಯಕ್ತ ಪಡಿಸಿ, ಗಂಗೂಬಾಯಿ ಅವರ ದತ್ತು ಪುತ್ರ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಅಲ್ಲದೇ, ಸಿನಿಮಾ ಬಿಡುಗಡೆಯನ್ನು ತಡೆಹಿಡಿಯಲು ಕೋರಿ ನ್ಯಾಯಾಲಯಗಳ ಮುಂದೆ ಹಲವಾರು ಅರ್ಜಿಗಳು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಸಲಹೆಯನ್ನು ನೀಡಿದೆ. ಬನ್ಸಾಲಿ ಪ್ರೊಡಕ್ಷನ್ಸ್‍ನ ವಕೀಲ ಸಿದ್ಧಾರ್ಥ ದವೆ ಅವರು ಸಲಹೆಯ ಬಗ್ಗೆ ತಮ್ಮ ಕಕ್ಷಿದಾರ ಜೊತೆ ಮಾತನಾಡಿ ಸೂಚನೆಗಳನ್ನು ಪಡೆಯುವುದಾಗಿ ಇಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು. ಈ ವಿಚಾರವಾಗಿ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ಮುಂದುವರಿಯಲಿದೆ. ಇದನ್ನೂ ಓದಿ: ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್
Advertisement
Advertisement
‘ಗಂಗೂಬಾಯಿ ಕಾಠಿಯಾವಾಡಿ’ ಮುಂಬೈನ ಕಾಮಾಠಿಪುರ ಲೈಂಗಿಕ ಕಾರ್ಯಕರ್ತೆಯಾಗಿ ನಂತರ ರಾಜಕೀಯ ಪ್ರವೇಶ ಮಾಡಿದ್ದರು. ಉತ್ತಮ ಜೀವನ ನಡೆಸುತ್ತಿದ್ದರು. ಈ ನಿಜವಾದ ಘಟನೆಯನ್ನು ತೆಗದುಕೊಂಡು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾವನ್ನು ಮಾಡಲಾಗಿದೆ. ಈ ಹಿನ್ನೆಲೆ ಗಂಗೂಬಾಯಿಯ ದತ್ತುಪುತ್ರ ಬಾಬು ರಾವ್ಜಿ ಶಾ ಸಹ ಸಿನಿಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ದೂರಿನಲ್ಲಿ ಅವರು, ನನ್ನ ತಾಯಿಯನ್ನು ಈ ಸಿನಿಮಾದಲ್ಲಿ ಮಾನಹಾನಿ ಮಾಡಲಾಗಿದೆ. ಅದಕ್ಕೆ ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದ್ದರು.
Advertisement
Advertisement
ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ವಿರುದ್ಧ ಇದೀಗ ಮಹಾರಾಷ್ಟ್ರದ ಶಾಸಕ ಅಮೀನ್ ಪಟೇಲ್ ಕೂಡ ಮತ್ತೊಂದು ದೂರು ಕೊಟ್ಟಿದ್ದಾರೆ. ಕಾಠಿಯಾವಾಡಿ ಎನ್ನುವುದು ಪ್ರದೇಶದ ಹೆಸರು. ಈ ಹೆಸರನ್ನು ಚಿತ್ರದಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ
‘ಗಂಗೂಬಾಯಿ ಕಾಠಿಯಾವಾಡಿ’ ಕಥೆಯನ್ನು ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ನಿಂದ ತೆಗೆದುಕೊಳ್ಳಲಾಗಿದೆ. ಅಲಿಯಾ ಭಟ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ.