ಬೆಂಗಳೂರು: ಸಾವಿರಾರು ಕೋಟಿ ರೂ. ಹಣದ ಆಸೆ ತೋರಿಸಿ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದ ಐನಾತಿ ಗ್ಯಾಂಗ್ ಸಿಸಿಬಿ ಪೊಲೀಸರ (CCB Polive) ಬಲೆಗೆ ಬಿದ್ದಿದ್ದೆ.
8 ಮಂದಿ ನಯವಂಚಕರ ದೊಡ್ಡ ಜಾಲವೊಂದನ್ನು ಸಿಸಿಬಿ ಅಧಿಕಾರಿಗಳು ಖೆಡ್ಡಕ್ಕೆ ಕೆಡವಿದ್ದಾರೆ. ವಂಚಕರಾದ ಅಶೋಕ್ ಕುಮಾರ್, ರಮೇಶ್ ಕುಮಾರ್, ಮಂಜುನಾಥ್, ರಾಜ್‌ಕುಮಾರ್, ಗಂಗರಾಜು, ಕುಮಾರೇಶ್, ಮೂರ್ತಿ ನಾಯಕ್, ಸಿದ್ದರಾಜು ನಾಯಕ್ ಬಂಧಿತ ಆರೋಪಿಗಳು.
Advertisement
Advertisement
ಇವರು ಆರ್‌ಬಿಐ (RBI) ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ವಂಚನೆ ಮಾಡುತ್ತಿದ್ದರು. ಸಾವಿರಾರು ಕೋಟಿ ರೂ. ಹಣದ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ ಮಾಡುತ್ತಿದ್ದರು. 26-40 ಲಕ್ಷ ರೂ. ಕೊಟ್ಟರೆ ಏಳುವರೆ ಕೋಟಿ ರೂ. ವಾಪಸ್ ನೀಡುವುದಾಗಿ ಆಮಿಷ ಒಡ್ಡುತ್ತಿದ್ದರು.
Advertisement
ವಿದೇಶದಿಂದ 75 ಸಾವಿರ ಕೋಟಿ ರೂ. ಹಣ ಬಂದಿದೆ. ಅದನ್ನು ಡ್ರಾ ಮಾಡಿಕೊಳ್ಳಬೇಕಿದೆ. ಡ್ರಾ ಮಾಡಿಕೊಳ್ಳಲು ಸುಮಾರು 150 ಕೋಟಿ ರೂ. ಹಣ ಬೇಕಾಗಿದೆ ಎಂದು ಹೇಳಿ ಜನರಿಗೆ ನಂಬಿಸುತ್ತಿದ್ದರು. ಬಳಿಕ ಜನರಿಂದ ಹಣ ಲಪಟಾಯಿಸಲು ಪ್ಲಾನ್ ಮಾಡಿದ್ದರು. ಮುಂದುವರಿದು ಮುಗ್ದ ಜನರನ್ನು ನಂಬಿಸಲು ಮುಂಬೈ ಮತ್ತು ದೆಹಲಿಯ ಆರ್‌ಬಿಐ ಕಚೇರಿಗೂ ಕರೆದುಕೊಂಡು ಹೋಗಿದ್ದಾರೆ. ದೆಹಲಿ, ಮುಂಬೈ ಆರ್‌ಬಿಐ ಬ್ರ್ಯಾಂಚ್‌ಗಳಲ್ಲಿ ಫೋಟೋ ತೆಗೆಸಿ ಹಣ ಅಕೌಂಟ್‌ನಲ್ಲಿ ಇರುವ ರೀತಿ ಬಿಂಬಿಸಿದ್ದಾರೆ. ಇದಕ್ಕಾಗಿ ನಕಲಿ ಆರ್‌ಬಿಐ ನೌಕರರನ್ನೂ ಸೃಷ್ಟಿ ಮಾಡಿದ್ದರು. ಇದನ್ನೂ ಓದಿ: Breaking- ಬಂಧಿತನಾಗಿದ್ದ ನಟ ಚೇತನ್ ಗೆ ಜಾಮೀನು
Advertisement
ಆರ್‌ಬಿಐ ಅಧಿಕಾರಿಗಳು ಹೇಳಿದ್ದಾರೆ ಎಂದು ಹಾಗೂ ಲ್ಯಾಪ್‌ಟಾಪ್‌ನಲ್ಲಿ ನಕಲಿ ಪತ್ರಗಳನ್ನು ತೋರಿಸಿ ಹಲವರಿಂದ ಹಣ ಪಡೆದು ವಂಚನೆ ಮಾಡಿದ್ದರು. ಈ ವಂಚಕರ ಬಗ್ಗೆ ಸಾಲು ಸಾಲು ದೂರು ಬಂದ ಹಿನ್ನೆಲೆ ಸಿಸಿಬಿ ಪೊಲೀಸರು 8 ಮಂದಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಪತ್ನಿಗೆ ಸೊಳ್ಳೆ ಕಚ್ಚಿದ್ದಕ್ಕೆ ಪೊಲೀಸರ ಸಹಾಯ ಕೇಳಿದ ವ್ಯಕ್ತಿ