ಹಾಸನ: ಗಣೇಶ ವಿಸರ್ಜನೆ ವೇಳೆ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮೆರವಣಿಗೆ ವೇಳೆ ಮಸೀದಿಯಲ್ಲಿ ಆಜಾನ್ ಕೂಗಲಾಯಿತು. ಈ ವೇಳೆ, ಇತ್ತ ಹಿಂದೂಪರ ಜಯಘೋಷ ಕೇಳಿಬಂದಿದೆ.
ಮೆರವಣಿಗೆಯು ಪೆನ್‌ಷನ್‌ಮೊಹಲ್ಲಾ ಬಳಿ ಬಂದಾಗ ಬಾರ್ಲೈನ್ ಮಸೀದಿ ಬಳಿ ಹಿಂದೂ ಯುವಕರು ಕರ್ಪೂರ ಹಚ್ಚಿದರು. ಪೊಲೀಸರು ಆರಿಸಲು ಮುಂದಾದಾಗ ವಾಕ್ಸಮರ ನಡೆಸಿದರು. ಕರ್ಪೂರ ಹಚ್ಚಿದ ಕೆಲವೇ ನಿಮಿಷಗಳಲ್ಲಿ ಮಸೀದಿಯಲ್ಲಿ ಆಜಾನ್ ಕೂಗಲಾಯ್ತು. ಪ್ರತಿಯಾಗಿ ಹಿಂದೂ ಯುವಕರು ಶಂಖ ಊದಿದ್ದಾರೆ. ಇದನ್ನೂ ಓದಿ: ಮಡಿಕೇರಿ ದಸರಾ ಗೊಂದಲಕ್ಕೆ ತೆರೆ – ಅ.21ಕ್ಕೆ ದಸರಾ ಆಚರಣೆಗೆ ತೀರ್ಮಾನ
ಇನ್ನು, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎರಡೆರಡು ಎಫ್‌ಐಆರ್ ದಾಖಲಾಗಿವೆ. ಇನ್ಸ್ಪೆಕ್ಟರ್ ಧನಂಜಯ್ ಜಾತಿ ಬಗ್ಗೆ ಅವಹೇಳನ ಆರೋಪದಲ್ಲಿ ಟಿ.ನರಸೀಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಧು ಎಂಬವರ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಎಫ್‌ಐಆರ್‌ಗಳು ದುರುದ್ದೇಶಪೂರಿತ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಮಧ್ಯೆ, ಉತ್ತರಪ್ರದೇಶದ ಬಲರಾಮ್‌ಪುರದಲ್ಲಿ ಶಾಲೆಪಕ್ಕ ಮೆರವಣಿಗೆ ಹೋಗುವಾಗ ಡಿಜೆ ಸದ್ದಿಗೆ ಶಾಲೆ ಕಂಪಿಸಿದ್ದು, ಆಘಾತದಿಂದ 2ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದೆ. ಇದನ್ನೂ ಓದಿ: ನಟ ಅನಂತ್ ನಾಗ್‌ಗೆ ವಿಧಾನ ಪರಿಷತ್‌ನಲ್ಲಿ ಗೌರವ ಸಲ್ಲಿಕೆ

