ಹುಬ್ಬಳ್ಳಿ: ನಿಮ್ಮ ಪುಂಗಿ ನಮ್ಮ ಕಡೆ ನಡಿಯೋದಿಲ್ಲ, ನೀವು ನಿಮ್ಮ ಪುಂಗಿ ಊದಿದ್ರೆ, ನಾವು ನಮ್ಮ ಪುಂಗಿ ಊದುತ್ತೇವೆ. ನಮ್ಮ ಪುಂಗಿ ಮುಂದೆ ನಿಮ್ಮ ಪುಂಗಿ ನಡಿಯೋದಿಲ್ಲ ಎಂದು ಹುಬ್ಬಳ್ಳಿ (Hubballi) ಪೊಲೀಸ್ ಇನ್ಸ್ಪೆಕ್ಟರ್ (Police Inspecter) ಒಬ್ಬರು ಗಣೇಶ ಮಂಡಳಿಗಳಿಗೆ ಎಚ್ಚರಿಕೆ ನೀಡಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
Advertisement
ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಜ್ಜನ್ ಅವರ ಪುಂಗಿ ಪುರಾಣದ ವೀಡಿಯೋ ವೈರಲ್ ಆಗಿದೆ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆ ಪೂರ್ವಭಾವಿ ಸಭೆ ನಡೆಸಿ ಡಿಜೆ (DJ) ಅನುಮತಿ ವಿಚಾರವಾಗಿ ಮಾತನಾಡಿರುವ ಇನ್ಸ್ಪೆಕ್ಟರ್ ಸಜ್ಜನ್, ಮೆರವಣಿಗೆಯಲ್ಲಿ ಡಿಜೆ ಅನುಮತಿಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ನೀವು ಇಲ್ಲ ಸಲ್ಲದ ಪುಂಗಿ ಬಿಟ್ಟರೇ ನಾವು ನಮ್ಮ ಪುಂಗಿ ಊದುತ್ತೇವೆ. ನಮ್ಮ ಪುಂಗಿ ಮುಂದೆ ನಿಮ್ಮ ಪುಂಗಿ ನಡಿಯೋದಿಲ್ಲ ಎಂದು ಅವಾಜ್ ಹಾಕಿದ್ದಾರೆ. ಇದನ್ನೂ ಓದಿ: ಒಂದು ವಾರದಿಂದ ಪೂಜೆ, ಅಭಿಷೇಕವಿಲ್ಲ- ಯಮಲೂರಲ್ಲಿ ಗ್ರಾಮ ದೇವರಿಗೆ ದಿಗ್ಬಂಧನ
Advertisement
Advertisement
ಇವಾಗ ನಮ್ಮ ಪುಂಗಿ ನಡೆಯದಿದ್ದರೂ ಗಣೇಶ ಉತ್ಸವ ಮುಗಿದ ಮೇಲಾದರು ಕೋರ್ಟ್ ಮೂಲಕ ಸಮನ್ಸ್ ಬರುತ್ತೆ ಆಗ ನಮ್ಮ ಪುಂಗಿನೇ ನಡಿಯುತ್ತೆ ಅಂದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಬಗ್ಗೆ ಪರ ಮತ್ತು ವಿರೋಧ ಚರ್ಚೆ ಜೋರಾಗಿ ಕೇಳಿ ಬರುತ್ತಿದೆ. ಇದನ್ನೂ ಓದಿ: ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಬಸ್ – 7 ಮಂದಿಗೆ ಗಾಯ, ತಪ್ಪಿದ ಭಾರೀ ಅನಾಹುತ