ಬೆಂಗಳೂರು: ಬಿಜೆಪಿ (BJP) ಅಧಿಕಾರದಲ್ಲಿದ್ದಾಗ ಕೇಂದ್ರದ ನಾಯಕರು ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದರು. ಅವರು ಕಲೆಕ್ಷನ್ ಮಾಡೋಕೆ ಬರ್ತಿದ್ರಾ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G. Parameshwara) ಪ್ರಶ್ನಿಸಿದರು.
ಸುರ್ಜೇವಾಲ ಮತ್ತು ವೇಣುಗೋಪಾಲ್ (KC Venugopal) ಅವರು ಕಲೆಕ್ಷನ್ ಮಾಡಲು ಬಂದಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರ ತಿರುಗೇಟು ಕೊಟ್ಟ ಅವರು, ಬಿಜೆಪಿಯವರು ಅದನ್ನೇ ಹೇಳಬೇಕು. ಅದು ಬಿಟ್ಟು ಬೇರೇನು ಹೇಳಬೇಕು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅವರ ಕಾರ್ಯದರ್ಶಿಗಳು ರಾಜ್ಯಕ್ಕೆ ಬರ್ತಿದ್ದರು. ಹಾಗಾದ್ರೆ ಅವರೂ ಕಲೆಕ್ಷನ್ ಮಾಡೋಕೆ ಬರುತ್ತಿದ್ದರಾ? ಅವರು ಪದೇ ಪದೇ ಬರ್ತಿದ್ದರು. ಈಗ ನಾವು ಅವರೂ ಕೂಡ ಕಲೆಕ್ಷನ್‌ಗೆ ಬರ್ತಿದ್ದರು ಅಂತ ಹೇಳೋಣವಾ? ಅಂತ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಕ್ರಿಕೆಟ್ ದೇವರಿಗೆ ವಿಶೇಷ ಗೌರವ – ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ಪ್ರತಿಮೆ ಅನಾವರಣ
ಬುಧವಾರ (ನ.1) ಸುರ್ಜೇವಾಲ ಮತ್ತು ವೇಣುಗೋಪಾಲ್ ರಾಜ್ಯಕ್ಕೆ ಬಂದಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆಗೆ (Lok Sabha Elections) ಆದಷ್ಟು ಬೇಗ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡಬೇಕು ಅಂತ ಹೈಕಮಾಂಡ್ ಹೇಳಿರುವುದಾಗಿ ತಿಳಿಸಿದರು.
ಸುರ್ಜೇವಾಲ ಮತ್ತು ವೇಣುಗೋಪಾಲ್ ಯಾರೂ ನಮ್ಮನ್ನ ಭೇಟಿ ಮಾಡಿಲ್ಲ. ಅಧ್ಯಕ್ಷರು ಮತ್ತು ಸಿಎಂ ಅವರನ್ನ ಭೇಟಿಯಾಗಿ ಮಾತುಕತೆ ಮಾಡಿದ್ದಾರೆ. ಯಾವುದರ ಬಗ್ಗೆ ಅವರು ಚರ್ಚೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಲೋಕಸಭೆ ಸಂಭಾವ್ಯ ಅಭ್ಯರ್ಥಿ ಪಟ್ಟಿ ನೀಡಲು ವಿಳಂಬ ಆಗಿದೆ. ಆದಷ್ಟು ಬೇಗ ಸಂಭಾವ್ಯರ ಪಟ್ಟಿ ಕೊಡಬೇಕು ಅಂತ ನಿನ್ನೆ ಹೇಳಿದ್ದಾರೆ. ಅಧ್ಯಕ್ಷರು ಅದರ ಬಗ್ಗೆ ಗಮನ ಕೊಡ್ತಾರೆ ಎಂದರು. ಇದನ್ನೂ ಓದಿ: ರಾಜಕೀಯ ಪ್ರೇರಿತವಾಗಿ ನೀಡಿರುವ ನೋಟಿಸ್ ಹಿಂಪಡೆಯಿರಿ: EDಗೆ ಕೇಜ್ರಿವಾಲ್ ಪ್ರತಿಕ್ರಿಯೆ
ಶಾಸಕರು ಬಹಿರಂಗವಾಗಿ ಮಾತಾಡಬಾರದು ಅನ್ನೋ ಹೈಕಮಾಂಡ್ ಸಂದೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಯಾರು ಮಾತಾಡಬಾರದು ಅಂತ ಹೇಳಿದ್ದಾರೆ. ಸರ್ಕಾರದ ಪರ ಮಾತಾಡೋರು ಮಾತಾಡಬಹುದು. ಸರ್ಕಾರದ ವಿರುದ್ಧ, ಗೊಂದಲದ ಹೇಳಿಕೆ ಕೊಡಬಾರದು ಅಂತ ಹೇಳಿದ್ದಾರೆ. ಮಾಧ್ಯಮಗಳಲ್ಲಿ ನಾನು ಇದನ್ನ ನೋಡಿದ್ದೇನೆ. ನನಗೇನು ಅ ಬಗ್ಗೆ ಗೊತ್ತಿಲ್ಲ. ನಮ್ಮನ್ನ ಯಾರನ್ನು ಅವರು ಕರೆಸಿ ಮಾತಾಡಿಲ್ಲ ಅಂತ ತಿಳಿಸಿದರು.
Web Stories