ಬೆಂಗಳೂರು: ಸಂಪುಟದಲ್ಲಿ ತಮ್ಮ ಆಪ್ತರಿಗೆ ಮಣೆ ಹಾಕಿಲ್ಲವೆಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಜಿ ಪರಮೇಶ್ವರ್ ಅಸಮಾಧಾನಗೊಂಡಿದ್ದಾರೆ.
ಶುಕ್ರವಾರ ಪ್ರಮಾಣವಚನ ಸ್ವೀಕಾರ ಸಮಾರಂಭದಿಂದ ದೂರವೇ ಉಳಿದಿದ್ದ ಪರಮೇಶ್ವರ್, ಸಿಎಂ ವಿರುದ್ಧ ಮುನಿಸಿಕೊಂಡಿದ್ದರು. ಇವತ್ತು ಉಭಯ ನಾಯಕರು ಭೇಟಿಯಾಗೋ ಸಾಧ್ಯತೆ ಇದೆ. ಇಲ್ಲವಾದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಸಂಧಾನ ಮಾತುಕತೆ ನಡೆಸೋ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
ಪರಿಷತ್ ಚುನಾವಣೆ ವೇಳೆ ಹಾಗೂ ಸಂಪುಟ ವಿಸ್ತರಣೆ ವೇಳೆ ಪರಮೇಶ್ವರ್ ಮಾತಿಗೆ ಸಿಎಂ ಸೊಪ್ಪು ಹಾಕಿಲ್ಲ. ಎಂಎಲ್‍ಸಿ ಆಯ್ಕೆ ಸಂದರ್ಭದಲ್ಲಿ ತಮ್ಮ ಆಪ್ತ ಜಿಸಿ ಚಂದ್ರಶೇಖರ್ ಬದಲು ಸಿಎಂ ಆಪ್ತ ಸಿಎಂ ಇಬ್ರಾಹಿಂ ಅವರಿಗೆ ಅವಕಾಶ ನೀಡಲಾಯ್ತು. ಸಚಿವ ಸ್ಥಾನ ನೀಡಿಕೆಯಲ್ಲಿಯೂ ಸಹ ತಮ್ಮ ಮಾತಿಗೆ ಬೆಲೆ ಸಿಕ್ಕಿಲ್ಲ ಎಂಬುದು ಪರಮೇಶ್ವರ್ ಅವರ ಅಸಮಧಾನ ಎನ್ನಲಾಗಿದೆ.
Advertisement
ಇದನ್ನೂ ಓದಿ: ಇಂದು ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ – ಕೊನೇ ಕ್ಷಣದಲ್ಲಿ ಷಡಕ್ಷರಿಗೆ ಕೈ ತಪ್ಪಿದ ಮಂತ್ರಿಗಿರಿ
Advertisement
ಇದೇ ಕಾರಣಕ್ಕೆ ಮುನಿಸಿಕೊಂಡು ಶುಕ್ರವಾರ ನಡೆದ ರಾಜಭವನದ ಕಾರ್ಯಕ್ರಮಕ್ಕೆ ಪರಮೇಶ್ವರ್ ಗೈರಾಗಿದ್ದಾರೆ ಎಂದು ಹೇಳಲಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಮುಖಾಮುಖಿಯಾಗ್ತಾರಾ? ಮುನಿಸಿಗೆ ಬ್ರೇಕ್ ಬೀಳುತ್ತಾ ಎಂದು ಕಾದುನೋಡಬೇಕಿದೆ.
Advertisement
ಇದನ್ನೂ ಓದಿ: ಸಿದ್ದು ಸಂಪುಟಕ್ಕೆ ಫೈನಲ್ ಸರ್ಜರಿ: ಮೂವರಿಗೆ ಸಚಿವ ಸ್ಥಾನ ಸಿಗೋದರ ಹಿಂದೆ ಇರೋ ಲೆಕ್ಕಾಚಾರ ಏನು?
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ ಮತ್ತು ಗೀತಾ ಮಹದೇವಪ್ರಸಾದ್ ಅವರಿಗೆ ಅಭಿನಂದನೆಗಳು. pic.twitter.com/GFHvA3kP5j
— CM of Karnataka (@CMofKarnataka) September 1, 2017
ಸರ್ಕಾರದ ಸಚಿವ ಸಂಪುಟದ ನೂತನ ಸಂಪುಟ ದರ್ಜೆ ಸಚಿವರಾಗಿ ಹೆಚ್ ಎಂ ರೇವಣ್ಣ,ಆರ್ ಬಿ ತಿಮ್ಮಾಪುರ ಮತ್ತು ಗೀತಾ ಮಹದೇವಪ್ರಸಾದ್ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು pic.twitter.com/ZFrl0un48g
— DIPR Karnataka (@KarnatakaVarthe) September 1, 2017