ಅಬುಜಾ: ಉತ್ತರ ನೈಜೀರಿಯಾದಲ್ಲಿ (Nigeria) ಇಂಧನ ಟ್ಯಾಂಕರ್ ಸ್ಫೋಟಗೊಂಡು 147 ಜನರು ಸಾವನ್ನಪ್ಪಿದ್ದಾರೆ. 70 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಗಾವಾ ರಾಜ್ಯದ ಮಜಿಯಾ ಎಂಬ ಹಳ್ಳಿಯಲ್ಲಿ ತಡರಾತ್ರಿ ವಾಹನ ಅಪಘಾತಕ್ಕೀಡಾಗಿತ್ತು. ಸ್ಥಳೀಯರು ಇಂಧನವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ಸ್ಫೋಟವು ಸಂಭವಿಸಿದೆ. ಸ್ಫೋಟದಿಂದ ಮೃತಪಟ್ಟವರನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ.
Advertisement
Advertisement
ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿತ್ತು. ಒಳಚರಂಡಿ ಕಂದಕಕ್ಕೆ ಇಂಧನ ಚೆಲ್ಲಿತ್ತು. ಸ್ಥಳೀಯ ನಿವಾಸಿಗಳು ಇಂಧನ ತೆಗೆದುಕೊಳ್ಳುತ್ತಿದ್ದಾಗ ಟ್ಯಾಂಕರ್ ಸ್ಫೋಟಗೊಂಡಿದೆ ಎಂದು ಜಿಗಾವಾ ಪೊಲೀಸ್ ವಕ್ತಾರ ಶಿಸು ಲಾವನ್ ಆಡಮ್ ಹೇಳಿದ್ದಾರೆ.
Advertisement
ನೈಜೀರಿಯಾದ ಉಪಾಧ್ಯಕ್ಷ ಕಾಶಿಮ್ ಶೆಟ್ಟಿಮಾ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ. ಈ ದುರ್ಘಟನೆಯು ನಮ್ಮೆಲ್ಲರ ಹೃದಯ ಛಿದ್ರಗೊಳಿಸಿದೆ. ಫೆಡರಲ್ ಸರ್ಕಾರವು ಜಿಗವಾ ಜನರೊಂದಿಗೆ ನಿಂತಿದೆ. ಗಾಯಗೊಂಡವರಿಗೆ ನೆರವಾಗಲು ಮತ್ತು ಈ ವಿಪತ್ತಿನಿಂದ ಪೀಡಿತ ಕುಟುಂಬಗಳಿಗೆ ಸಹಾಯ ಮಾಡಲು ನಾವು ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Advertisement
ಇಂಧನ ಸಾಗಣೆ ಸುರಕ್ಷತಾ ಪ್ರೋಟೋಕಾಲ್ಗಳ ಸಮಗ್ರ ಪರಿಶೀಲನೆಗೆ ಶೆಟ್ಟಿಮಾ ಕರೆ ನೀಡಿದರು. ಉತ್ತರ-ಮಧ್ಯ ನೈಜರ್ ರಾಜ್ಯದಲ್ಲಿ ಇದೇ ರೀತಿಯ ಅಪಘಾತದಲ್ಲಿ ಕನಿಷ್ಠ 48 ಜನರು ಸಾವನ್ನಪ್ಪಿದ್ದರು. ಇದಾದ ಒಂದು ತಿಂಗಳಲ್ಲೇ ಸ್ಫೋಟ ಸಂಭವಿಸಿದೆ.
ಆಫ್ರಿಕಾದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗಳು ಸಾಮಾನ್ಯ. ಅಲ್ಲಿ ತೈಲ ಸರಬರಾಜನ್ನು ಆಗಾಗ್ಗೆ ರಸ್ತೆಯ ಮೂಲಕ ರವಾನಿಸಲಾಗುತ್ತದೆ.