ಹಣ್ಣುಗಳು ಆರೋಗ್ಯಕ್ಕೆ ಉತ್ತಮ. ಹೀಗಾಗಿ ಮನೆಯಲ್ಲಿ ಹಣ್ಣುಗಳು ಇದ್ದೇ ಇರುತ್ತವೆ. ಆದರೆ ಮಕ್ಕಳು ಸೇರಿದಂತೆ ಮನೆಯವರು ಕೂಡ ಒಂದೊಂದೆ ಹಣ್ಣುಗಳನ್ನು ತಿನ್ನಲು ಇಷ್ಟ ಪಡುವುದಿಲ್ಲ. ಆದ್ದರಿಂದ ಅವರಿಗಾಗಿ ಸಿಂಪಲ್ ಆಗಿ 5 ನಿಮಿಷದಲ್ಲೇ ಫ್ರುಟ್ಸ್ ಸಲಾಡ್ ಮಾಡುವ ವಿಧಾನ ಇಲ್ಲಿದೆ..
Advertisement
ಬೇಕಾಗುವ ಸಾಮಾಗ್ರಿಗಳು
1. ಬನಾನಾ – 1
2. ಸೇಬು – 1
3. ಕಿತ್ತಳೆ – 1
4. ಕಿವಿ ಫ್ರುಟ್ – 1
5. ಸಕ್ಕರೆ – 100 ಗ್ರಾಂ
6. ದ್ರಾಕ್ಷಿ ಮತ್ತು ಕಪ್ಪು ದ್ರಾಕ್ಷಿ- ಅರ್ಧ ಬೌಲ್
7. ಚೆರ್ರಿ – 4-5
Advertisement
Advertisement
ಮಾಡುವ ವಿಧಾನ
* ಕಾಲ್ ಲೋಟ ನೀರಿಗೆ 100 ಗ್ರಾಂ ಸಕ್ಕರೆ ಹಾಕಿ ಕಲಸಿ.
* ಸಕ್ಕರೆ ಕರಗಿದ ನಂತರ ಅದಕ್ಕೆ ದ್ರಾಕ್ಷಿಯನ್ನು ಸಣ್ಣಗೆ ಕಟ್ ಮಾಡಿ ಹಾಕಿ.
* ನಂತರ ಸೇಬು, ಚೆರ್ರಿ, ಬನಾನಾವನ್ನು ಸಣ್ಣಗೆ ಕಟ್ ಮಾಡಿ ಹಾಕಿ.
* ಈಗ ಕಿತ್ತಳೆ ಮತ್ತು ಕಿವಿ ಫ್ರುಟ್ ನ ಸಿಪ್ಪೆಯನ್ನು ತೆಗೆದು ಸಣ್ಣಗೆ ಕತ್ತರಿಸಿ ಹಾಕಿ.
* ಎಲ್ಲ ಹಣ್ಣನ್ನು ಸಕ್ಕರೆ ನೀರಿನಲ್ಲಿ ಮಿಕ್ಸ್ ಮಾಡಿದರೆ ಸ್ವೀಟ್ ಫ್ರುಟ್ಸ್ ಸಲಾಡ್ ಸವಿಯಲು ಸಿದ್ಧ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv