ಖ್ಯಾತ ಕಿರುತೆರೆ ನಟಿ ರಜಿನಿ ಜಿಮ್ ಟ್ರೈನರ್ ಅರುಣ್ ಗೌಡ ಜೊತೆ ಸಪ್ತಪದಿ ತುಳಿದಿದ್ದಾರೆ. ಎರಡ್ಮೂರು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಲೇ ಗೆಳೆತನ ಬೆಳೆಸಿದ್ದ ಈ ಜೋಡಿ ಈಗ ಹೊಸ ಜೀವನ ಆರಂಭಿಸಿದೆ. ಈ ಮೊದಲು ಹಲವು ಬಾರಿ ಮದ್ವೆ ಆಗಿದ್ದೀರಾ..? ಮದ್ವೆ ಆಗ್ತೀರಾ..? ಎಂಬಿತ್ಯಾದಿ ಪ್ರಶ್ನೆಗಳು ಎದುರಾದಾಗ ನಾವಿಬ್ಬರು ಸ್ನೇಹಿತರು ಎಂದು ಉತ್ತರಿಸಿತ್ತು ಈ ಜೋಡಿ.
ಬಾಡಿ ಬಿಲ್ಡರ್ ಹಾಗೂ ಜಿಮ್ ಟ್ರೈನರ್ ಆಗಿರುವ ಅರುಣ್‍ಗೌಡ ಹಾಗೂ ರಜಿನಿ ನಡುವಿನ ಗಾಸಿಪ್‍ಗೆ ಫುಲ್‍ಸ್ಟಾಪ್ ಇಟ್ಟಿದ್ದಾರೆ. ಅಮೃತವರ್ಷಿಣಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿರುವ ನಟಿ ರಜಿನಿ ಹಾಗೂ ಅರುಣ್‍ಗೌಡ ದೇವಸ್ಥಾನ, ಪ್ರವಾಸ, ಪ್ರೇಕ್ಷಣೀಯ ಸ್ಥಳಗಳಿಗೆ ಒಟ್ಟೊಟ್ಟಿಗೆ ಭೇಟಿ ಕೊಡ್ತಿದ್ದರು. ಆ ಜಾಗದಲ್ಲೇ ರೀಲ್ಸ್ ಮಾಡಿ ಅಪ್‍ಲೋಡ್ ಮಾಡುತ್ತಿದ್ದರು. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಜಿಎಫ್, ಕಾಂತಾರ ಹಾಡುಗಳ ಗಾಯಕಿ ಅನನ್ಯ ಭಟ್
ಅರುಣ್‍ಗೌಡ ಹಾಗೂ ರಜಿನಿ ಇಬ್ಬರೂ ಹಾಕುವ ಪ್ರತಿಯೊಂದು ವಿಡಿಯೋಗೆ ಸಾಕಷ್ಟು ಪ್ರಶ್ನೆಗಳು ಕಮೆಂಟ್ ಮೂಲಕ ಬರುತ್ತಿದ್ದವು. ಇವೆಲ್ಲವನ್ನೂ ಅಲ್ಲಗಳೆಯುತ್ತಿದ್ದ ಈ ಜೋಡಿ ಈಗ ಹಸೆಮಣೆ ಏರಿದೆ. ಇಬ್ಬರ ಫೋಟೋ ನೋಡಿ ಈಗ ನೆಟ್ಟಿಗರು ತಹರೇವಾರಿ ಕಮೆಂಟ್ ಹಾಕುತ್ತಿದ್ದಾರೆ. ಇನ್ನು ರಜಿನಿ ಹಾಗೂ ಅರುಣ್ ಮದ್ವೆಗೆ ಶುಭ ಹಾರೈಸುತ್ತಿದ್ದಾರೆ. ಇದನ್ನೂ ಓದಿ: ತಿರುವೀರ್ ನಟನೆಯ ಹೊಸ ಚಿತ್ರಕ್ಕೆ ಚಾಲನೆ: ನಾಲ್ಕು ಭಾಷೆಯಲ್ಲಿ ನಿರ್ಮಾಣ

