ದಾವಣಗೆರೆ: ಉಚ್ಚಂಗಿದುರ್ಗದಲ್ಲಿ ಬಾಡೂಟ ಇದೆ ಎಂದು ಸ್ನೇಹಿತರ ಜೊತೆಗೆ ಹೋಗಿದ್ದ ಯುವಕ ಬರ್ಬರವಾಗಿ ಕೊಲೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದ ಹೊರ ವಲಯದಲ್ಲಿ ನಡೆದಿದೆ.
ದಾವಣಗೆರೆಯ ನಿಟ್ಟುವಳ್ಳಿ ನಿವಾಸಿಯಾದ ಧನ್ಯಕುಮಾರ್ (31) ಮೃತ ದುರ್ದೈವಿಯಾಗಿದ್ದು, ಕನ್ನಡ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಯುವಕ ಕೆಲ ವರ್ಷಗಳಿಂದ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದನು. ಬುಧವಾರ ತಡರಾತ್ರಿ ಸ್ನೇಹಿತರ ಜೊತೆಗೆ ಹರಪ್ಪನಹಳ್ಳಿಯ ಉಚ್ಚಂಗಿದುರ್ಗಕ್ಕೆ ಊಟಕ್ಕೆ ಹೋಗಿದ್ದ ಧನ್ಯಕುಮಾರ್ ಇಂದು ಬೆಳಗ್ಗೆ ಗ್ರಾಮದ ಜಮೀನು ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಹೆಚ್ಚಾದ ಭಿಕ್ಷುಕರ ಹಾವಳಿ – ಹಸುಗೂಸು ಎತ್ತಿಕೊಂಡು ಸುಡುಬಿಸಿಲಲ್ಲೇ ಭಿಕ್ಷಾಟನೆ
ಸದ್ಯ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಜೊತೆಗಿದ್ದ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ಇದೀಗ ಅರಸಿಕೆರೆ ಪೊಲೀಸರು ಹಾಗೂ ವಿಜಯನಗರ ಎಸ್‍ಪಿ ಸ್ಥಳಕ್ಕೆ ಧಾವಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆ ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವರ, ಅತ್ತೆ ಮನೆಯವರನ್ನು ಕೂಡಿ ಹಾಕಿ ರಾತ್ರೋರಾತ್ರಿ ಚಿನ್ನಾಭರಣ ಜೊತೆ ವಧು ಎಸ್ಕೇಪ್