ಶೋಭಾ ಕರಂದ್ಲಾಜೆಗೆ ಪ್ರಯಾಣ ಫ್ರೀ, ಸಿಟಿ ರವಿ ಮನೆಯವರಿಗೂ 2 ಸಾವಿರ ಫ್ರೀ: ಕಾಲೆಳೆದ ಕಾಂಗ್ರೆಸ್

Public TV
1 Min Read
SHOBA CT RAVI

ಬೆಂಗಳೂರು: ಪ್ರಣಾಳಿಕೆಯಲ್ಲಿ ಕೊಟ್ಟ 5 ಗ್ಯಾರಂಟಿಗಳನ್ನು ಇಂದು ಕಾಂಗ್ರೆಸ್ (Congress Guarantee) ಘೋಷಣೆ ಮಾಡಿದೆ. ಈ ಬೆನ್ನಲ್ಲೇ ನಳಿನ್ ಕುಮಾರ್ ಕಟೀಲ್, ಬಸವರಾಜ್ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಹಾಗೂ ಸಿ.ಟಿ ರವಿಯನ್ನು ಕಾಂಗ್ರೆಸ್ ಕಾಲೆಳೆದಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ!, ಬೊಮ್ಮಾಯಿ (Basavaraj Bommai) ಅವರೇ ನಿಮ್ಮ ಮನೆಗೂ ಫ್ರೀ!, ಶೋಭಾ ಕರಂದ್ಲಾಜೆ (Shobha Karandlaje) ಅವರೇ, ನಿಮಗೂ ಪ್ರಯಾಣ ಫ್ರೀ!, ಸಿ.ಟಿ ರವಿ (CT Ravi) ಅವರೇ, ನಿಮ್ಮ ಮನೆಯವರಿಗೂ 2,000 ಫ್ರೀ ಎಂದು ಟ್ವೀಟ್ ನಲ್ಲಿ ತಿಳಿಸುವ ಕಾಲೆಳೆದಿದೆ.

ಇಷ್ಟು ಮಾತ್ರವಲ್ಲದೆ ಪದವಿ ಪಡೆದ ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ. ಇದು ನಮ್ಮ ಗ್ಯಾರಂಟಿ ಎಂದು ಕಾಂಗ್ರೆಸ್ ಟ್ವೀಟ್‍ನಲ್ಲಿ ಬಿಜೆಪಿಯವರಿಗೆ ಟಾಂಗ್ ಕೊಟ್ಟಿದೆ.

ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು. ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಇದು ನಮ್ಮ ಬದ್ಧತೆ ಎಂದು ಕಾಂಗ್ರೆಸ್ ತಿಳಿಸಿದೆ. ಇದನ್ನೂ ಓದಿ: ಆಗಸ್ಟ್ 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ: ಯಾರು ಅರ್ಜಿ ಸಲ್ಲಿಕೆ ಮಾಡಬಹುದು?

Share This Article