ಬಿಹಾರ್: ಸಿಂಘು ಗಡಿಯಲ್ಲಿ ವ್ಯಕ್ತಿಯೋರ್ವನನ್ನ ನಿಹಾಂಗ್ ಸಮುದಾಯದ ಮುಖಂಡರು ಭೀಕರವಾಗಿ ಹತ್ಯೆ ನಡೆಸಿದ ಆರೋಪದ ಬೆನ್ನಲ್ಲೇ ಇದೀಗ ಮತ್ತೊಮ್ಮೆ ರೈತರು ಪ್ರತಿಭಟನೆ ನಡೆಸುತ್ತಿದ್ದ ಜಾಗದಲ್ಲೇ ಸದಸ್ಯನನ್ನ ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಮನೋಜ್ ಪಾಸ್ವಾನ್ ಹಲ್ಲೆಗೊಳಗಾದವನಾಗಿದ್ದಾನೆ. ಈತ ಹೈನುಗಾರಿಕೆ ನಡೆಸುವ ರೈತ ರಿಕ್ಷಾದಲ್ಲಿ ಕೋಳಿಗಳನ್ನು ಸಾಗಿಸುತ್ತಿದ್ದನು. ಈ ವೇಳೆ ಉಚಿತವಾಗಿ ಕೋಳಿಯೊಂದನ್ನು ನೀಡುವಂತೆ ನಿಹಾಂಗ್ ಸಮುದಾಯದ ವ್ಯಕ್ತಿ ಕೇಳಿದ್ದಾನೆ. ಆಗ ಮನೋಜ್ ಪಾಸ್ವಾನ್ ಕೋಳಿ ನೀಡಲು ನಿರಾಕರಿಸಿದ್ದಾನೆ. ಆಗ ಈತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ
ಹಲ್ಲೆಗೊಳಗಾದ ಮನೋಜ್ ಪಾಸ್ವಾನ್ ಮಾತನಾಡಿ, ಅಲ್ಲೊಬ್ಬ ಸರ್ದಾರ್‌ಜೀ ಇದ್ದನು. ಅವನು ನಿಹಾಂಗ್ ಬಾಬಾ ನನ್ನ ಬಳಿ ಉಚಿತವಾಗಿ ಕೋಳಿ ನೀಡುವಂತೆ ಕೇಳಿದ. ಕೋಳಿ ಕೊಟ್ಟೆರೆ ನನ್ನ ಮೇಲೆ ಕೋಳಿ ಕಳ್ಳತನದ ಆರೋಪ ಬರುತ್ತದೆ ಎಂದು ನಾನು ನಿರಾಕರಿಸಿದೆ. ಜೇಬಿನಲ್ಲಿದ್ದ ಚೀಟಿ ತೆಗೆದು ತೋರಿಸುವಾಗ ನನ್ನ ಬಳಿ ಬೀಡಿ ಇರುವುದು ನಿಹಾಂಗ್ ಬಾಬಾನಿಗೆ ತಿಳಿಯಿತ್ತು. ಪ್ರತಿಭಟನೆ ಸ್ಥಳದಲ್ಲಿ ಬೀಡಿ ಸೇದುತ್ತೀಯಾ ಎಂದು ಹೇಳಿ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್