ಚೆನ್ನೈ: ಆಪಲ್ (Apple) ಇಂಕ್ ತಮಿಳುನಾಡಿನಲ್ಲಿ ಐಫೋನ್-15ರ (iPhone 15) ಉತ್ಪಾದನೆ ಪ್ರಾರಂಭಿಸಿದೆ. ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ (Foxconn Technology Group) ಘಟಕವು ಶ್ರೀಪೆರಂಬದೂರಿನಲ್ಲಿರುವ ಉತ್ಪಾದನೆಗೆ ಬೇಕಾದ ಎಲ್ಲ ಸಿದ್ಧತೆ ಆರಂಭಿಸಿದೆ.
ಈ ಮೂಲಕ ಭಾರತ ಮತ್ತು ಚೀನಾದಲ್ಲಿನ ಮುಖ್ಯ ಉತ್ಪಾದನಾ ನೆಲೆಯ ಅಂತರವನ್ನ ಮತ್ತಷ್ಟು ಕಡಿಮೆಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಹೊಸ ಐಫೋನ್ ಬಿಡುಗಡೆ ದಿನಾಂಕವನ್ನ ಸೆಪ್ಟೆಂಬರ್ 12 ರಂದು ಘೋಷಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಬೆಂಗಳೂರು ಬಳಿ ಭಾರೀ ಮೊತ್ತಕ್ಕೆ ಜಾಗ ಖರೀದಿಸಿದ ಆಪಲ್ ಐಫೋನ್ ತಯಾರಕ ಫಾಕ್ಸ್‌ಕಾನ್
Advertisement
Advertisement
ಚೀನಾದ (China) ಘಟಕಗಳು ಹೊಸ ಸಾಧನಗಳ ಪೂರೈಕೆ ಆರಂಭಿಸಿದ್ದು, ಇದಾದ ಒಂದು ವಾರಗಳ ಬಳಿಕ ಈ ಬೆಳವಣಿಗೆ ಕಂಡುಬಂದಿದೆ. ಆಪಲ್ ಕಂಪನಿಯು ಭಾರತದಲ್ಲಿ ತಯಾರಾಗುವ ಹೊಸ ಐಫೋನ್‌ಗಳ (iPhones) ವಾಲ್ಯೂಮ್ ಅನ್ನು ತ್ವರಿತವಾಗಿ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
Advertisement
ಐಫೋನ್ 14 ಉತ್ಪಾದನೆಗೂ ಮುನ್ನ ಆಪಲ್ ಭಾರತದಲ್ಲಿ ತನ್ನ ಐಫೋನ್‌ಗಳನ್ನ ಒಂದು ಭಾಗವನ್ನು ಜೋಡಣೆ ಮಾತ್ರ ಮಾಡುತ್ತಿತ್ತು. ಚೀನಾಕ್ಕೆ ಹೋಲಿಸಿದರೆ ಉತ್ಪಾದನೆ 6 ರಿಂದ 9 ತಿಂಗಳವರೆಗೆ ಹಿಂದುಳಿದಿತ್ತು. ಕಳೆದ ಒಂದು ವರ್ಷದಿಂದ ಈ ವಿಳಂಬವನ್ನ ಕಡಿಮೆಗೊಳಿಸಲಾಗಿದೆ. ಮಾರ್ಚ್ ಅಂತ್ಯದಲ್ಲಿ ಆಪಲ್ 7% ಐಫೋನ್ ಉತ್ಪನ್ನಗಳನ್ನ ಭಾರತದಲ್ಲೇ ಉತ್ಪಾದಿಸಿದೆ. ಈ ವರ್ಷ ಈ ಅಂತರವನ್ನು ಪೂರ್ತಿಯಾಗಿ ತೊಡೆದು ಹಾಕುವ ಗುರಿಯನ್ನು ಕಂಪನಿ ಹೊಂದಿದೆ. ಇದು ಭಾರತದ ಐಫೋನ್ 15 ಉತ್ಪಾದನೆಯ ಪ್ರಮಾಣವು ಹೆಚ್ಚಾಗಿ ಆಮದು ಮಾಡಿಕೊಳ್ಳುವ ಬಿಡಿಭಾಗಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಜೊತೆಗೆ ಚೆನ್ನೈನ ಹೊರಗಿರುವ ಫಾಕ್ಸ್‌ಕಾನ್ ಕಾರ್ಖಾನೆಯಲ್ಲಿನ ಉತ್ಪಾದನಾ ಮಾರ್ಗಗಳ ಸುಗಮ ತಯಾರಿಯನ್ನೂ ಅವಲಂಬಿಸಿರುತ್ತದೆ.
Advertisement
ಹೊಸ ಐಫೋನ್ ಬಿಡುಗಡೆ ದಿನಾಂಕವನ್ನು ಸೆಪ್ಟೆಂಬರ್ 12 ರಂದು ಘೋಷಿಸುವ ಸಾಧ್ಯತೆಯಿದೆ. ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಾಧನಕ್ಕೆ ಸಂಬಂಧಿಸಿದಂತೆ ಮೊದಲ ಅಪ್‌ಡೇಟ್ ಸಿಗಲಿದೆ. ನವೀಕೃತ ಕ್ಯಾಮೆರಾ ಸಿಸ್ಟಮ್, ಪ್ರೊ ಮಾದರಿಗಳಲ್ಲಿ ಸುಧಾರಿತ 3-ನ್ಯಾನೊಮೀಟರ್ ಎ16 ಪ್ರೊಸೆಸರ್ ಇರಲಿದೆ. ಭಾರತದಲ್ಲಿನ ಇತರ ಆಪಲ್ ಪೂರೈಕೆದಾರರಾದ ಪೆಗಾಟ್ರಾನ್ ಕಾರ್ಪ್ ಮತ್ತು ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಂಡಿರುವ ವಿಸ್ಟ್ರಾನ್ ಕಾರ್ಪ್ ಘಟಕವೂ ಶೀಘ್ರದಲ್ಲೇ ಐಫೋನ್ 15ರ ಜೋಡಣೆ ಆರಂಭಿಸಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಟಿಕ್‌ಟಾಕ್ ಬ್ಯಾನ್ ಮಾಡಿದ ನ್ಯೂಯಾರ್ಕ್ ಆಡಳಿತ
ಆಪಲ್ ಭಾರತ ದೇಶದಾದ್ಯಂತ ಹೂಡಿಕೆ ಮಾಡಲು ಹಾಗೂ ಹೂಡಿಕೆ ಹೆಚ್ಚಿಸಲು ಬದ್ಧವಾಗಿದೆ ಎಂದು ಸಿಇಒ ಟಿಮ್ ಕುಕ್ ಅವರು ಏಪ್ರಿಲ್‌ನಲ್ಲಿ ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ಮೋದಿ ಭೇಟಿ ಬಳಿಕ ಹೇಳಿದ್ದರು.
Web Stories