ಕೊಪ್ಪಳ: ಹರಿಯುತ್ತಿದ್ದ ನೀರಿನ ರಭಸಕ್ಕೆ ಹಳ್ಳದಲ್ಲಿ ನಾಲ್ವರು ಮಹಿಳೆಯರು (Women) ಕೊಚ್ಚಿಹೋಗಿರುವ ಘಟನೆ ಕೊಪ್ಪಳದ (Koppal) ಸಂಕನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಗಿರಿಜಾ ಮಾಲಿಪಾಟೀಲ್(32), ಭುವನೇಶ್ವರಿ ಪೊಲೀಸ್ ಪಾಟೀಲ್(40), ಪವಿತ್ರಾ ಪೊಲೀಸ್ ಪಾಟೀಲ್(45) ಹಾಗೂ ವೀಣಾ ಮಾಲಿಪಾಟೀಲ್(19) ಮಹಿಳೆಯರು ನೀರಿಗೆ ಸಿಕ್ಕಿ ಕೊಚ್ಚಿಹೋಗಿದ್ದಾರೆ. ಕೆಲಸಕ್ಕೆ ಹೋಗಿ ಮರಳಿ ಗ್ರಾಮಕ್ಕೆ ಬರುವಾಗ ಘಟನೆ ನಡೆದಿದೆ. ಇದನ್ನೂ ಓದಿ: ನಮೀಬಿಯಾದಿಂದ ಬಂದ ಚೀತಾ `ಆಶಾ’ ಗರ್ಭಿಣಿಯಾಗಿದ್ಯಾ – ಅಧಿಕಾರಿಗಳು ಹೇಳೋದೇನು?
Advertisement
Advertisement
ಸಂಕನೂರು ಗ್ರಾಮದ ಹೊರವಲಯದ ಹಳ್ಳದಲ್ಲಿ ನೀರನ ರಭಸವನ್ನೂ ಲೆಕ್ಕಿಸದೇ ಹಳ್ಳಕ್ಕೆ ಇಳಿಯಲು ಮುಂದಾಗಿದ್ದಾರೆ. ನೀರಿಗೆ ಇಳಿಯುತ್ತಿದ್ದಂತೆ ಪವಿತ್ರಾ, ವೀಣಾ ಕೊಚ್ಚಿಕೊಂಡು ಹೋಗಿದ್ದಾರೆ. ಗಿರಿಜಾ, ಭುವನೇಶ್ವರಿ ಕೆಲಹೊತ್ತು ಹಳ್ಳದಲ್ಲಿನ ಗಿಡಗಳನ್ನು ಹಿಡಿದುಕೊಂಡಿದ್ದರು. ಇನ್ನೇನು ಗ್ರಾಮಸ್ಥರು ರಕ್ಷಿಸಲು ಮುಂದಾಗುತ್ತಿದ್ದಂತೆ ಆಯತಪ್ಪಿ, ಅವರೂ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಯಲಬುರ್ಗಾ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.