ಮೈಸೂರು: ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.
ಮೈಸೂರಿನ ಯರಗನಹಳ್ಳಿಯ (Yaraganahalli) ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ (Gas Leak) ಮನೆಯೊಳಗೆ ಮಲಗಿದ್ದ ನಾಲ್ವರು ಮೃತಪಟ್ಟಿದ್ದಾರೆ. ಕುಮಾರಸ್ವಾಮಿ (45), ಅವರ ಪತ್ನಿ ಮಂಜುಳಾ (39) ಹಾಗೂ ಇವರ ಮಕ್ಕಳಾದ ಅರ್ಚನಾ (19) ಮತ್ತು ಸ್ವಾತಿ (17) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತ ಕುಮಾರಸ್ವಾಮಿ ದಂಪತಿ ಮನೆಯಲ್ಲಿ ಬಟ್ಟೆ ಐರನ್ ಮಾಡುವ ಕೆಲಸ ಮಾಡುತ್ತಿದ್ದರು. ಈ ಕಾರಣಕ್ಕಾಗಿ ಮೂರು ಸಿಲಿಂಡರ್ ಇಟ್ಟುಕೊಂಡಿದ್ದರು. ಅದರಲ್ಲಿ ಒಂದು ಸಿಲಿಂಡರ್ ಸೋರಿಕೆಯಾಗಿ ಈ ಸಾವುಗಳು ಸಂಭವಿಸಿವೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ಅಪಘಾತ – ಭಾರತ ಮೂಲದ ಮೂವರು ವಿದ್ಯಾರ್ಥಿಗಳು ಬಲಿ
ಮೃತ ಕುಮಾರಸ್ವಾಮಿ ಮೂಲತಃ ಕಡೂರು ತಾಲೂಕಿನ ಸಖರಾಯಪಟ್ಟಣದವರು. ಅಲ್ಲಿಯೆ ಸೋಮವಾರ ಇದ್ದ ಸಂಬಂಧಿಗಳ ಮದುವೆಗೆ ಕುಟುಂಬ ಸಮೇತರಾಗಿ ಹೋಗಿ ಸೋಮವಾರ ರಾತ್ರಿ ವಾಪಸ್ ಆಗಿದ್ದರು. ಸೋಮವಾರ ರಾತ್ರಿ ಮನೆಯೊಳಗೆ ಮಲಗಿದ ಈ ಕುಟುಂಬ ಮತ್ತೆ ಮೇಲೆ ಎದ್ದಿಲ್ಲ. ನಿನ್ನೆ ಇವರ ಸಂಬಂಧಿಕರು ಹಲವು ಬಾರಿ ಇವರಿಗೆ ಕರೆ ಮಾಡಿದ್ದಾರೆ. ಆಗ ಕರೆ ಸ್ವೀಕಾರ ಆಗಿಲ್ಲ. ಇವತ್ತು ಬೆಳಗ್ಗೆಯೂ ಕರೆ ಮಾಡಿದ್ದಾಗ ಕರೆ ಸ್ವೀಕಾರ ಮಾಡದ ಕಾರಣ ಅನುಮಾನಗೊಂಡು ಅಕ್ಕಪಕ್ಕದ ಮನೆಯವರಿಗೆ ದೂರವಾಣಿ ಕರೆ ಮಾಡಿ ಮನೆಗೆ ಹೋಗಿ ನೋಡಿ ಎದ್ದಿದ್ದಾರೆ. ಆಗ ಪಕ್ಕದ ಮನೆಯವರು ಮನೆಗೆ ಬಂದು ಕಿಟಿಕಿ ಮೂಲಕ ನೋಡಿದ್ದಾಗ ಮೃತಪಟ್ಟಿರುವ ವಿಚಾರ ಗೊತ್ತಾಗಿದೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ರೇಸ್‌ನಲ್ಲಿ ನಾನಿಲ್ಲ, ಸಾಮರ್ಥ್ಯ ಇರುವವರಿಗೆ ಕೊಡಲಿ: ಸತೀಶ್ ಜಾರಕಿಹೊಳಿ
10*20 ಸೈಜಿನ ಈ ಮನೆಯಲ್ಲಿ ಗಾಳಿಗೆ ಯಾವುದೇ ರೀತಿಯಾದಂತ ವ್ಯವಸ್ಥೆ ಇಲ್ಲ. ಇಂತಹ ಸ್ಥಿತಿಯಲ್ಲಿ ಗ್ಯಾಸ್ ಲಿಕ್ ಆಗಿದೆ. ಲಿಕ್ ಆದ ಗ್ಯಾಸ್ ಅನ್ನೆ ಸೇವಿಸಿದ ಪರಿಣಾಮ ಈ ಸಾವುಗಳು ಉಂಟಾಗಿವೆ ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: ಅಂಜಲಿ ಹತ್ಯೆಯ ರಹಸ್ಯ ಬಿಚ್ಚಿಟ್ಟ ಹಂತಕ ವಿಶ್ವ
ಗ್ಯಾಸ್ ಸೋರಿಕೆಯಿಂದ ಸ್ಪೋಟ ಉಂಟಾಗಿ ಸಾವು ಸಂಭವಿಸಿದ್ದು ನೋಡಿದ್ದೇವು. ಆದರೆ, ಗ್ಯಾಸ್ ಲೀಕ್‌ನಿಂದ ನಾಲ್ವರು ಮೃತಪಟ್ಟಿರೋದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ಹೀಗಾಗಿಯೆ ಬಳಕೆ ಮಾಡದೇ ಇರೋ ಸಮಯದಲ್ಲಿ ಗ್ಯಾಸ್ ಅನ್ನು ಆಫ್ ಮಾಡಿ ಅಂತಾ ಗ್ಯಾಸ್ ಸಂಸ್ಥೆಗಳು ಸದಾ ಜನರಿಗೆ ಜಾಗೃತಿ ಮೂಡಿಸುತ್ತಿರುತ್ತವೆ. ಇದನ್ನೂ ಓದಿ: ಮೇ 13ರಿಂದ ನಾಪತ್ತೆಯಾಗಿದ್ದ ಸಂಸದ ಶವವಾಗಿ ಪತ್ತೆ- ಮೂವರ ಬಂಧನ