ನವದೆಹಲಿ: ಮಾಜಿ ರಾಷ್ಟಪತಿ ಪ್ರಣಬ್ ಮುಖರ್ಜಿ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದು, ಆದರೆ ಈ ಕುರಿತು ರಾಷ್ಟ್ರ ನಾಯಕರು ತಮ್ಮದೇ ಹೇಳಿಕೆ ನೀಡಿದ್ದಾರೆ.
ಜೂನ್ 7ರಂದು ಪ್ರಧಾನ ಕಚೇರಿ ನಾಗ್ಪುರದಲ್ಲಿ ಸ್ವಯಂಸೇವಕರಿಗೆ ನಡೆಸುವ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪ್ರಣಬ್ ಮುಖರ್ಜಿ ಅವರನ್ನು ಆರ್‌ಎಸ್‌ಎಸ್ ಆಹ್ವಾನಿಸಿದೆ. 25 ದಿನಗಳ ಶಿಕ್ಷಾ ವರ್ಗ ಜೂನ್ 7ರಂದು ಮುಕ್ತಾಯವಾಗಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಟಾಮ್ ವಡಕ್ಕನ್ ಕಾಂಗ್ರೆಸ್ ಹಾಗೂ ಆರ್ ಎಸ್‍ಎಸ್ ಸಿದ್ಧಾಂತಗಳಿಗೆ ಭಾರೀ ವ್ಯತ್ಯಾಸವಿದ್ದು, ಈ ಕುರಿತು ಸದ್ಯ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
Advertisement
Former Pres Pranab Mukherjee acceptance to attend RSS event in Nagpur sends a message to the country that on vital issues there should be dialogue&adversaries are not enemies. Questions raised on RSS-Hindutva is being answered by his acceptance of invitation: Rakesh Sinha, RSS pic.twitter.com/9PS0i2CQ7d
— ANI (@ANI) May 28, 2018
Advertisement
ಪ್ರಣಬ್ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಮುಖರ್ಜಿ ಅವರು ಕಾಂಗ್ರೆಸ್ ಪದವಿ ಬಳಿಕ ರಾಜಕೀಯ ತೊರೆದಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅವರ ವಯಕ್ತಿಕ ನಂಬಿಕೆ, ನಿಲುವಿಗೆ ಸಂಬಂಧಿಸಿದೆ. ಅವರು ಕಳೆದ 50 ವರ್ಷಗಳಿಂದ ತಮ್ಮ ರಾಜಕೀಯ ಜೀವನದ ತತ್ವ ಸಿದ್ಧಾಂತಗಳು ಹಾಗೂ ಸದ್ಯದ ಹೇಳಿಕೆಗಳಿಗೂ ಹೋಲಿಕೆ ಮಾಡಬಹುದು ಎಂದು ತಿಳಿಸಿದ್ದಾರೆ.
Advertisement
ಈ ಕುರಿತು ಪ್ರಣಬ್ ಅವರಿಗೆ ಪಾತ್ರ ಬರೆದಿರುವ ಕಾಂಗ್ರೆಸ್ ಹಿರಿಯ ನಾಯಕ ಸಿಕೆ ಜಾಫರ್ ಷರೀಫ್ ಅವರು, ದಶಕಗಳ ಕಾಲದ ಜಾತ್ಯತೀತ ರಾಜಕಾರಣ ಬಳಿಕ ತಾವು ತೆಗೆದುಕೊಂಡಿರುವ ನಿರ್ಧಾರ ಅಚ್ಚರಿಯನ್ನು ಉಂಟು ಮಾಡಿದ್ದು, ಲೋಕಸಭಾ ಚುನಾವಣೆ ವೇಳೆಯಲ್ಲಿ ಆರ್‌ಎಸ್‌ಎಸ್ ಆಹ್ವಾನ ಮನ್ನಿಸಿರುವುದು ಉತ್ತಮ ಎನಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
If former President Pranab Mukherjee joins, it is good. What is the problem if the former President visits RSS event. RSS is an organisation of the nation. There should not be any political untouchability in the country: Union Minister Nitin Gadkari pic.twitter.com/8QrilCljWa
— ANI (@ANI) May 29, 2018
ಮತ್ತೊಂದೆಡೆ ಮಾಜಿ ರಾಷ್ಟ್ರಪತಿಗಳ ನಿರ್ಧಾರವನ್ನು ಸಮರ್ಥಿಸಿರುವ ಹಿರಿಯ ನಾಯಕ ಎಚ್ ಆರ್ ಭಾರದ್ವಾಜ್ ಪ್ರಣಬ್‍ರ ತೀರ್ಮಾವನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಣಬ್ ಅವರ ನಡೆ ಉತ್ತಮ ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದು, ರಾಜಕೀಯ ಅಸ್ಪೃಶ್ಯತೆ ಸದ್ಯದ ಸ್ಥಿತಿಯಲ್ಲಿ ಅಪ್ರಸ್ತುತ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
This isn't surprising for those who know & understand the Sangh, because RSS has always invited prominent people of the society in its programmes. This time, we invited Dr Pranab Mukherjee & it's his greatness that he has accepted our invitation: Rashtriya Swayamsevak Sangh (RSS) pic.twitter.com/z9aSy2cOWS
— ANI (@ANI) May 29, 2018
Invitation card of the event for which Rashtriya Swayamsevak Sangh (RSS) has invited Former President of India Pranab Mukherjee, the event is scheduled for June 7 in Nagpur. #Maharashtra pic.twitter.com/Q6iNfellcK
— ANI (@ANI) May 29, 2018