ಚಾಮರಾಜನಗರ: ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಗ್ರಾ.ಪಂ. ಸದಸ್ಯರೊಬ್ಬರ ಕಳ್ಳಬೇಟೆ ಬಯಲು ಮಾಡಿ ಅಪಾರ ಪ್ರಮಾಣದ ಸ್ಫೋಟಕ, ದಂತ, ಹುಲಿ ಹಲ್ಲು ವಶಪಡಿಸಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದ ರಂಗಸ್ವಾಮಿ(45) ಎಂಬವರ ಮನೆ ಮೇಲೆ ತಮಿಳುನಾಡು ಅರಣ್ಯ ಇಲಾಖೆ ನೀಡಿದ ಮಾಹಿತಿ ಮೇರೆಗೆ ಪುಣಜನೂರು ವಲಯ ಅರಣ್ಯಾಧಿಕಾರಿ ಕಾಂತರಾಜು ಮತ್ತು ಕೆ.ಗುಡಿ ಆರ್.ಎಫ್.ಒ ಶಾಂತಪ್ಪ ಪೂಜಾರ್ ಜಂಟಿ ಕಾರ್ಯಾಚರಣೆ ನಡೆಸಿ ದಂತದ ಚೂರುಗಳು, ತಲಾ ಒಂದು ಚಿರತೆ ಮತ್ತು ಹುಲಿ ಹಲ್ಲು, 5-6 ಜಿಂಕೆ ಕೊಂಬುಗಳು, ಅಪಾರ ಪ್ರಮಾಣದ ಉರುಳು, 4-5 ನಾಡ ಬಂದೂಕಿಗೆ ಬಳಸುವ ಟ್ರಿಗರ್ ಗಳು, ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ
Advertisement
Advertisement
ರಂಗಸ್ವಾಮಿ ಪುಣಜನೂರು ಗ್ರಾ.ಪಂಚಾಯಿತ್ ನ ಹಾಲಿ ಸದಸ್ಯನಾಗಿದ್ದು, ಕಳ್ಳಬೇಟೆ ಬಯಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ. ಅರಣ್ಯಾಧಿಕಾರಿಗಳು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.