ಬಳ್ಳಾರಿ: ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಶಾಲೆ (School) ಪಕ್ಕದ ಹಳ್ಳದಲ್ಲಿದ್ದ ಎರಡು ಮೊಸಳೆಗಳನ್ನು (Crocodile) ಅರಣ್ಯ ಇಲಾಖೆ ಸೆರೆ ಹಿಡಿದಿದೆ.
ಕಳೆದ ಮೂರು ದಿನಗಳ ಹಿಂದೆ ನಿಟ್ಟೂರಿನ ಸಾಮ್ರಾಟ ಹಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆಯ ಹಳ್ಳದಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಶಾಲೆಗೆ ಹೋಗಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದರು. ಇದನ್ನೂ ಓದಿ: ಟ್ರೋಲ್‌ಗಳಿಗೆ ನಾನು ತಲೆ ಕೆಡಿಸಿಕೊಳ್ಳೊಲ್ಲ, ಮಧು ಬಂಗಾರಪ್ಪ ಮಧು ಬಂಗಾರಪ್ಪನೇ: ಟ್ರೋಲರ್‌ಗಳ ವಿರುದ್ಧ ಕಿಡಿ
- Advertisement
ಮೊಸಳೆ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ (Forest Department) ಅಧಿಕಾರಿಗಳ ಗಮನಕ್ಕೆ ತಂದಿದದ್ದರು. ವೇಷಗಾರ ಮಲ್ಲಯ್ಯ ಸಹಾಯದಿಂದ ಅರಣ್ಯ ಇಲಾಖೆ ಮೊಸಳೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.