ಧಾರವಾಡ: ಜಿಲ್ಲೆಯಲ್ಲಿ ಆರಂಭವಾಗಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಕ್ಯಾಂಪಸ್‍ಗೆ ಇದೇ ತಿಂಗಳ 28ರಂದು ಶಂಕು ಸ್ಥಾಪನೆ ನಡೆಯಲಿದೆ.
ವಿದ್ಯಾಕಾಶಿ ಎಂದೇ ಹೆಸರು ಪಡೆದ ಧಾರವಾಡಕ್ಕೀಗ (Dharwad) ಮತ್ತೊಂದು ಹೆಮ್ಮೆಯ ಗರಿ ಬರಲಿದೆ. ಈಗಾಗಲೇ ಧಾರವಾಡದಲ್ಲಿ ಕರ್ನಾಟಕ ವಿವಿ, ಕಾನೂನು ವಿವಿ, ಕೃಷಿ ವಿವಿ ಇವೆ. ಇದರ ಜೊತೆಗೆ ಐಐಟಿ ಹಾಗೂ ಐಐಐಟಿ ಕೂಡಾ ಬಂದಿವೆ. ಈಗ ಫಾರೆನ್ಸಿಕ್ ಯುನಿವರ್ಸಿಟಿ (Forensic University) ಕ್ಯಾಂಪಸ್ ಧಾರವಾಡದಲ್ಲಿ ಆರಂಭವಾಗಲಿದೆ.
ಗುಜರಾತಿನಲ್ಲಿ (Gujarat) ಫಾರೆನ್ಸಿಕ್ ವಿಶ್ವವಿದ್ಯಾಲಯ ಇದೆ. ಇದರ ಕ್ಯಾಂಪಸ್ ಇದೇ ಮೊದಲು ಬಾರಿಗೆ ದಕ್ಷಿಣ ಭಾರತದಲ್ಲಿ ಆರಂಭ ಆಗುತ್ತಿದ್ದು, ಅದು ಧಾರವಾಡದಲ್ಲಿ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಫಾರೆನ್ಸಿಕ್ ಕ್ಯಾಂಪಸ್‍ಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ ವಿವಿ ಕ್ಯಾಂಪಸ್‍ನಲ್ಲಿ 800 ಎಕರೆ ವಿಸ್ತಾರವಾದ ಪ್ರದೇಶದಲ್ಲಿದೆ. ಹೀಗಾಗಿ ಇದೇ ಕವಿವಿ ಕ್ಯಾಂಪಸ್ ಮಾಡಬೇಕೋ ಅಥವಾ ಕೃಷಿ ವಿವಿಯಲ್ಲಿ ಮಾಡಬೇಕೋ ಎನ್ನುವುದರ ಬಗ್ಗೆ ಚರ್ಚೆ ನಡೆದಿವೆ. ಅಲ್ಲದೇ ಇದೇ ಜನವರಿ 28ಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ (Amit Shah) ಧಾರವಾಡಕ್ಕೆ ಆಗಮಿಸಲಿದ್ದು, ನೂತನವಾಗಿ ಆರಂಭವಾಗುತ್ತಿರುವ ಫಾರೆನ್ಸಿಕ್ ವಿವಿ ಕ್ಯಾಂಪಸ್ ಕಟ್ಟಡದ ಶಂಕುಸ್ಥಾಪನೆಯನ್ನು ಅವರಿಂದಲೇ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಈಗಾಗಲೇ ಕವಿವಿ ಕ್ಯಾಂಪಸ್‍ನಲ್ಲೇ ಹೊಸದಾಗಿ ನಿರ್ಮಾಣ ಆಗುತ್ತಿರುವ ಫಾರೆನ್ಸಿಕ್ ವಿವಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಯತ್ನದಿಂದ ಧಾರವಾಡಕ್ಕೆ ಬಂದಿದೆ. ಸದ್ಯ ಇಡೀ ದೇಶದಲ್ಲಿ ಕೇವಲ 7 ವಿವಿಗಳಿದ್ದು, ಅದರ ಸಾಲಿಗೆ ಧಾರವಾಡ ಕೂಡ ಸೇರ್ಪಡೆ ಆಗಲಿದ್ದು, 8ನೇ ಕ್ಯಾಂಪಸ್ ಆಗಿ ಹೊರಹೊಮ್ಮಲಿದೆ.
ಈ ಫಾರೆನ್ಸಿಕ್ ವಿವಿ ಇಲ್ಲಿ ಬರುವುದರಿಂದ ನಮ್ಮ ರಾಜ್ಯಕ್ಕೆ ದೊಡ್ಡ ಲಾಭ ಆಗಲಿದೆ. ಅಪರಾಧ ಜಗತ್ತಿನ ಬಗ್ಗೆ ಮಾಹಿತಿ ಕಲೆ ಹಾಕಲು ಇದು ಸಹಾಯ ಆಗಲಿದೆ. ಪುಣೆ, ತ್ರಿಪುರಾ, ಸೇರಿ 7 ಕಡೆ ಈ ಕ್ಯಾಂಪಸ್‍ಗಳಿದ್ದು, ಫಾರೆನ್ಸಿಕ್ ವಿವಿ ಧಾರವಾಡಕ್ಕೆ ಬಂದರೆ ಕ್ರೈಂ ಬೇಗ ಪತ್ತೆ ಹಚ್ಚಲು ಸಹಾಯ ಆಗುತ್ತದೆ. ನಮ್ಮ ರಾಜ್ಯದ ಯುವಕರಿಗೆ ಅಪರಾಧ ಪ್ರಕರಣಗಳನ್ನು ಹೇಗೆ ಬೆನ್ನತ್ತಬೇಕು ಎಂಬ ಬಗ್ಗೆ ಅಧ್ಯಯನ ಮಾಡಲು ಸಹಾಯ ಆಗುತ್ತದೆ. ಪೊಲೀಸ್ ಇಲಾಖೆ, ಕಾನೂನು ತಜ್ಞರಿಗೆ ಕ್ಯಾಂಪಸ್ ಹೆಚ್ಚು ಸಹಕಾರಿ ಆಗಲಿದ್ದು, ನಮ್ಮ ರಾಜ್ಯದ ಮನೋವಿಜ್ಞಾನ ಶಾಸ್ತ್ರ, ಅಪರಾಧ ಶಾಸ್ತ್ರ, ಬಯೋ ಟೆಕ್ನಾಲಜಿ, ಸೈಕಾಲಜಿ ಹಾಗೂ ಭೌತಶಾಸ್ತ್ರದ ವಿಭಾಗದ ವಿದ್ಯಾರ್ಥಿಗಳಿಗೆ ಇದು ಅನಕೂಲವಾಗಲಿದೆ. ಇದನ್ನೂ ಓದಿ: ಕೋಲಾರದಲ್ಲಿ ಸ್ಪರ್ಧೆ- ಸಿದ್ದರಾಮಯ್ಯಗೆ ಸಿದ್ಧಗೊಂಡಿರುವ ಮನೆಯ ವಿಶೇಷತೆ ಏನು?
ಎಲ್ಲಕ್ಕಿಂತ ಹೆಚ್ಚಾಗಿ ಸೈಬರ್ ಕ್ರೈಂಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಆಗಲಿದೆ. ಡಿಎನ್‍ಎ ಪತ್ತೆ ಹಚ್ಚಲು ವಿವಿ ಸಹಾಯ ಮಾಡಲಿದೆ ಎಂದು ಹಿರಿಯ ಡಿಎನ್‍ಎ ತಜ್ಞ ಹಾಗೂ ಕವಿವಿ ವಿಶ್ರಾಂತ ಕುಲಪತಿ ಪ್ರಮೋದ್ ಘಾಯಿ ಹೇಳಿದ್ದಾರೆ. ಇದನ್ನೂ ಓದಿ: ಲೈಂಗಿಕ ಶೋಷಣೆ ಆರೋಪಕ್ಕೆ ಟ್ವಿಸ್ಟ್ – ಕುಸ್ತಿಪಟುಗಳ ವಿರುದ್ಧವೇ ಹೈಕೋರ್ಟ್‍ನಲ್ಲಿ ದೂರು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k