ಬಿಗ್ ಬಾಸ್ (Bigg Boss) ಮನೆಯ ಆಟ ಸಾಕಷ್ಟು ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಈ ಸೀಸನ್ 95 ದಿನಗಳನ್ನು ಪೂರೈಸಿ, ಗ್ರ್ಯಾಂಡ್ ಫಿನಾಲೆಯತ್ತ ಲಗ್ಗೆ ಇಡುತ್ತಿದೆ. ಇದೀಗ ರಾಕೇಶ್ ಅಡಿಗ (Rakesh Adiga) ಎರಡನೇ ಬಾರಿ ಕಳಪೆ ಹಣೆಪಟ್ಟಿ ಪಡೆದು ಜೈಲಿಗೆ ಹೋಗಿದ್ದಾರೆ. ಮನೆಯ ಸದಸ್ಯರು ಈ ವಾರ ಅವರಿಗೆ ಕಳಪೆ ಹಣೆಪಟ್ಟಿ ಕಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ 13ನೇ ವಾರ ಸರಣಿ ಟಾಸ್ಕ್‌ಗಳನ್ನು ‘ಬಿಗ್ ಬಾಸ್’ ನೀಡಿದ್ದರು. ಟಾಸ್ಕ್‌ಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿತ್ತು. ಟಾಸ್ಕ್‌ಗಳನ್ನು ಎಷ್ಟು ಬೇಗ ಮುಗಿಸುತ್ತಾರೆ ಎಂಬ ಆಧಾರದ ಮೇಲೆ ಸ್ಪರ್ಧಿಗಳಿಗೆ ಪಾಯಿಂಟ್‌ಗಳನ್ನು ನೀಡಲಾಗಿತ್ತು. ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ಯವರ್ಧನ್ ಗುರೂಜಿ (Aryardhan Guruji) ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದಿದ್ದಾರೆ. ಇನ್ನೂ, ಒಂದು ಆಟವನ್ನ ಸಂಪೂರ್ಣವಾಗಿ ಮುಗಿಸದೆ ಗಿವಪ್ ಮಾಡಿದ ರಾಕೇಶ್ ಅಡಿಗ ‘ಕಳಪೆ’ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ
ಟಾಸ್ಕ್ ವೊಂದರಲ್ಲಿ ರಾಕಿ ಗಿವಪ್ ಮಾಡಿದ್ದರು. ಇದನ್ನ ಆಧರಿಸಿ ಮನೆಮಂದಿ ಕಳಪೆ ಹಣೆಪಟ್ಟಿ ನೀಡಿದ್ದರು. ಈ ವಾರ ಟಾಸ್ಕ್‌ಗಳನ್ನು ಚೆನ್ನಾಗಿ ಆಡಿದ ಗುರೂಜಿ ಪರವಾಗಿ ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ಅಮೂಲ್ಯ ಗೌಡ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಅರುಣ್ ಸಾಗರ್ ವೋಟ್ ಮಾಡಿದರು. ಹೀಗಾಗಿ ಈ ವಾರದ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಆರ್ಯವರ್ಧನ್ ಗುರೂಜಿ ಪಾಲಾಯಿತು.
ಇನ್ನೂ ಈ ವಾರ ಡಬಲ್ ಎಲಿಮಿನೇಷನ್ ಆಗಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ ಇಬ್ಬರು ಸ್ಪರ್ಧಿಗಳಿಗೆ ಈ ವಾರ ಮನೆ ಆಟ ಕೊನೆಯಾಗಲಿದೆ. ನವೀನರು ಹಾಗೂ ಪ್ರವೀಣರು ಎಂಬ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯುವುದು ನಿಕ್ಕಿಯಾಗಿದೆ. ಸದ್ಯ ಮನೆಯಲ್ಲಿ ಎಂಟು ಜನರು ಇರುವುದರಿಂದ ಈ ವಾರ ಅನಿವಾರ್ಯವಾಗಿ ಡಬಲ್ ಎಲಿಮಿನೇಷನ್ ನಡೆಯಬೇಕಾಗುತ್ತದೆ.
ಮೊದಲ ದಿನ ಬಿಗ್ ಬಾಸ್ ಮನೆಗೆ ಬಂದವರು 9 ನವೀನರು 9 ಹಳೆಯ ಸ್ಪರ್ಧಿಗಳು. ಈಗ ಮನೆಯಲ್ಲಿ ಇರುವುದು ಎಂಟು ಜನರು ಮಾತ್ರ. ಉಳಿದಿರುವುದು ಎರಡೇ ವಾರ. ಹಾಗಾಗಿ ಈ ವಾರ ಇಬ್ಬರು ಮನೆಯಿಂದ ಹೊರ ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಫಿನಾಲೆಯ ವೇದಿಕೆಯ ಮೇಲೆ ಐದು ಜನರಿಗೆ ಮಾತ್ರ ಅವಕಾಶ ಇರುವುದರಿಂದ ಈ ವಾರ ಇಬ್ಬರು ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವುದ ಕುತೂಹಲ.
ಸದ್ಯ ಮನೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ. ದಿವ್ಯಾ ಉರುಡುಗ, ಅರುಣ್ ಸಾಗರ್, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಉಳಿದುಕೊಂಡಿದ್ದಾರೆ. ಪ್ರತಿಯೊಬ್ಬರೂ ಚೆನ್ನಾಗಿ ಆಟವಾಡುತ್ತಿದ್ದಾರೆ. ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹಾಗಾಗಿ ಇವರಲ್ಲಿ ಯಾರು ಈ ವಾರ ಆಚೆ ಬರುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.