ಗಂಟಲು ಕೆರೆತಕ್ಕೆ ಸವಿಯಿರಿ ಬೆಚ್ಚಗಿನ ಪುದೀನಾ ಟೀ

Public TV
1 Min Read
Peppermint Tea 2

ಚಳಿಗಾಲದಲ್ಲಿ ಜ್ವರ, ನೆಗಡಿ, ಗಂಟಲು ಕೆರೆತ ಹೆಚ್ಚಿನವರಲ್ಲಿ ಸರ್ವೇಸಾಮಾನ್ಯ. ಹವಾಮಾನ ಬದಲಾವಣೆ ವೇಳಗೆ ಆರೋಗ್ಯದಲ್ಲಾಗುವ ಏರುಪೇರು ಕಿರಿಕಿರಿಯುಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ನೀವು ಬೆಚ್ಚಗಿನ ಗಿಡಮೂಲಿಕೆಗಳ ಚಹಾ ಕುಡಿಯುವುದು ಉತ್ತಮ. ನಾವಿಂದು ಪುದೀನಾ ಚಹಾ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಮೆಂಥಾಲ್ ಒಳಗೊಂಡ ಪುದೀನಾ ನೆಗಡಿ, ಗಂಟಲು ನೋವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಬೆಚ್ಚಗಿನ ಪುದೀನಾ ಚಹಾ ಸೇವನೆ ಈ ಚಳಿಗಾಲದಲ್ಲಿ ಆರಾಮದಾಯಕ ಅನುಭವ ನೀಡುತ್ತದೆ.

Peppermint Tea

ಬೇಕಾಗುವ ಪದಾರ್ಥಗಳು:
ನೀರು – 3 ಕಪ್
ದಾಲ್ಚಿನ್ನಿ ಚಕ್ಕೆ – 1 ಇಂಚು
ಲವಂಗ – 2
ನಿಂಬೆಹಣ್ಣು – 1
ತಾಜಾ ಪುದೀನಾ ಎಲೆಗಳು – 1 ಕಪ್
ಜೇನು ತುಪ್ಪ – ಸ್ವಾದಕ್ಕನುಸಾರ (ಐಚ್ಛಿಕ) ಇದನ್ನೂ ಓದಿ: ಮನೆಯಲ್ಲೇ ಮಾಡಿ ನೋಡಿ ನ್ಯಾಚುರಲ್ ಆಪಲ್ ಜೆಲ್ಲಿ

Peppermint Tea 1

ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿಕೊಳ್ಳಿ.
* ಉರಿಯನ್ನು ಕಡಿಮೆ ಮಾಡಿ, ಅದಕ್ಕೆ ದಾಲ್ಚಿನ್ನಿ, ಲವಂಗ ಸೇರಿಸಿ 1 ನಿಮಿಷ ಕುದಿಸಿಕೊಳ್ಳಿ.
* ನಂತರ ಪುದೀನಾ ಎಲೆಗಳನ್ನು ಸೇರಿಸಿ 1-2 ನಿಮಿಷ ಕುದಿಸಿ.
* ಈಗ ಉರಿಯನ್ನು ಆಫ್ ಮಾಡಿ, ಅದನ್ನು ಕಪ್‌ಗಳಿಗೆ ಸೋಸಿಕೊಳ್ಳಿ.
* ಬಳಿಕ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಸೇರಿಸಿ.
* ಇದೀಗ ಪುದೀನಾ ಚಹಾ ಬಿಸಿಬಿಸಿಯಾಗಿ ಸವಿಯಲು ಸಿದ್ಧ. ಇದನ್ನೂ ಓದಿ: ಕಾಶ್ಮೀರಿ ಪಿಂಕ್ ಚಹಾ ಟ್ರೈ ಮಾಡಿದ್ದೀರಾ?

Share This Article