ಗಾಂಧಿನಗರ: ದೀಪಾವಳಿ (Deepavali) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ (Narendra Modi) ತವರೂರು ಗುಜರಾತ್‍ನಲ್ಲಿ (Gujarat) ಅ.21 ರಿಂದ 27ರ ವರೆಗೆ ಸಂಚಾರ ನಿಯಮ ಉಲ್ಲಂಘಿಸಿದರೂ (Traffic Violation) ಸಾರ್ವಜನಿಕರಿಗೆ ದಂಡ ಪ್ರಯೋಗಿಸದಂತೆ ಗುಜರಾತ್ ಸಿಎಂ ಭೊಪೇಂದ್ರ ಪಟೇಲ್ (Bhupendra Patel) ಸೂಚಿಸಿದ್ದಾರೆ.
Advertisement
ಅ.21 ರಿಂದ 27 ರವರೆಗೆ 7 ದಿನಗಳ ಕಾಲ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೂ ಪೊಲೀಸರು (Police) ದಂಡ (Fine) ಹಾಕಬೇಡಿ ಎಂದು ಸರ್ಕಾರ ಸೂಚಿಸಿದೆ. ಈ ಮೂಲಕ ಜನಪರ ಕಾಳಜಿ ವ್ಯಕ್ತಪಡಿಸಿದೆ. ಇದನ್ನೂ ಓದಿ: ಹಿಂದೂ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಇಸ್ಲಾಂಗೆ ಮತಾಂತರ – ಆರೋಪಿ ಪರವಾಗಿಯೇ ತೀರ್ಪು ಕೊಟ್ಟ ಕೋರ್ಟ್
Advertisement
Advertisement
ಈ ಬಗ್ಗೆ ಮಾತನಾಡಿರುವ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ (Harsh Sanghavi), ಪೊಲೀಸರು 7 ದಿನ ದಂಡ ವಿಧಿಸಲ್ಲ ಎಂದು ಸಾರ್ವಜನಿಕರು ಸಂಚಾರ ನಿಯಮವನ್ನು ಉಲ್ಲಂಘಿಸಬೇಡಿ. ಪೊಲೀಸರು ದಂಡ ವಿಧಿಸಲ್ಲ ಎಂದರೇ ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನು ಅನುಸರಿಸಬಾರದೆಂದಲ್ಲ. ನೀವು ತಪ್ಪು ಮಾಡಿದರೂ 7 ದಿನ ದಂಡ ಪಾವತಿಸದೆ ತೆರಳಲು ಪೊಲೀಸರು ಅವಕಾಶ ಕೊಡುತ್ತಾರೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಆಮೆ ಕರಿ ಸರಿಯಾಗಿ ಮಾಡಿಲ್ಲವೆಂದು ಪತ್ನಿಯನ್ನೇ ಕೊಂದು ಹಿತ್ತಲಲ್ಲಿ ಹೂತು ಹಾಕಿದ
Advertisement
ભારતીય સંસ્કૃતિનો સૌથી મોટો ઉજાસ ઉત્સવ એટલે દિવાળી. રંગોળીઓના રંગ, મિષ્ટાનોની ભરમાર અને દીવા તેમજ ફટાકડાનો ઉમંગ લઈને આ તહેવાર આવે છે. આ તહેવાર નિમિત્તે મૃદુ અને મક્કમ ગુજરાત સરકારના મુખ્ય મંત્રી શ્રી @Bhupendrapbjp જી નો વધુ એક પ્રજાલક્ષી નિર્ણય pic.twitter.com/V1omwopeWV
— Harsh Sanghavi (@sanghaviharsh) October 21, 2022
ಇದೀಗ ಗುಜರಾತ್ ಸರ್ಕಾರದ ಈ ನಿರ್ಧಾರಕ್ಕೆ ಪರ-ವಿರೋಧ ವ್ಯಕ್ತವಾಗುತ್ತಿದ್ದು, ಇದೆಲ್ಲ ಈ ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆಯ ಗಿಮಿಕ್ ಎಂಬ ಮಾತು ಕೇಳಿ ಬರುತ್ತಿದೆ.