InternationalLatestMain Post

ಹಿಂದೂ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಇಸ್ಲಾಂಗೆ ಮತಾಂತರ – ಆರೋಪಿ ಪರವಾಗಿಯೇ ತೀರ್ಪು ಕೊಟ್ಟ ಕೋರ್ಟ್

ಇಸ್ಲಾಮಾಬಾದ್: ಹಿಂದೂ ಬಾಲಕಿಯನ್ನು (Girl) ಅಪಹರಿಸಿ ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ(Pakistan) ಕರಾಚಿ ಕೋರ್ಟ್ (Court) ಅಪಹರಿಸಿದ ವ್ಯಕ್ತಿಯ ಪರವಾಗಿಯೇ ತೀರ್ಪು ನೀಡಿದೆ.

ಅಕ್ಟೋಬರ್ 13ರಂದು ಸಿಂಧ್‍ನ ಹೈದರಾಬಾದ್ ನಗರದಿಂದ ಶಮನ್ ಮ್ಯಾಕ್ಸಿ ಬಲೋಚ್ ಎಂಬ ವ್ಯಕ್ತಿ ಹಿಂದೂ ಬಾಲಕಿ ಚಂದಾ ಮಹಾರಾಜ್ (15)ಳನ್ನು ಅಹರಿಸಿ (Kidnap) ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದ.

Law

ಘಟನೆಗೆ ಸಂಬಂಧಿಸಿ ಆಕೆಯ ಮನೆಯವರು ಅಲ್ಲಿನ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕರಾಚಿ ಪೆÇಲೀಸರು ನಗರದ ಬಾಡಿಗೆ ಮನೆಯಲ್ಲಿ ಪತ್ತೆಹಚ್ಚಿ ಬಳಿಕ ಕರಾಚಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

YouTube video

ನ್ಯಾಯಾಲಯದಲ್ಲಿ ಆಕೆ ತನಾಗಾದ ಭಯನಾಕತೆಯನ್ನು ಇಂಚಿಚಾಗಿ ಬಿಚ್ಚಿಟ್ಟಿದ್ದಳು. ಕಿಡ್ನ್ಯಾಪ್ ಮಾಡಿದ ನಂತರ ಅವರು ಕರಾಚಿಗೆ ಕರೆದೊಯ್ದು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಯಿತು. ಇದಾದ ಬಳಿಕ ಆ ಆಘಾತದಿಂದ ಹೊರಬರುವ ಮೊದಲೇ ಅಲ್ಲಿನ ಪೊಲೀಸರು ಲೈಂಗಿಕವಾಗಿ ಹಾಗೂ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ವಿಚಾರವನ್ನು ತಿಳಿಸಿದ್ದಾಳೆ.

YouTube video

ಘಟನೆಗೆ ಸಂಬಂಧಿಸಿ ಚಂದಾಳನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ಕಳುಹಿಸಿದ್ದಾರೆ. ಆದರೆ ಈವರೆಗೆ ಆರೋಪಿ ಶಾಮನ್ ಮ್ಯಾಗ್ಸಿ ಬಲೋಚ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಕಳ್ಳತನಕ್ಕೆ ಬಂದ ಮನೆಯಲ್ಲೇ ಖದೀಮ ಆತ್ಮಹತ್ಯೆ

ನ್ಯಾಯಾಲಯದಲ್ಲಿ ಚಂದಾ ಪೋಷಕರನ್ನು ನೋಡಿದ ತಕ್ಷಣ ಅವರ ಬಳಿ ಓಡಿ ಹೋಗಿ ಅವರನ್ನು ತಬ್ಬಿಕೊಂಡು ಕಣ್ಣಿರಿಟ್ಟಿದ್ದಾಳೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಾದ ಬಳಿಕ ನ್ಯಾಯಾಲಯವು ತನ್ನ ನಿರ್ಧಾರವನ್ನು ಬದಲಾಯಿಸಿದೆ. ಅವಳನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಿದ್ದು, ಅಲ್ಲಿ ಚಂದಾಗೆ ವೈದ್ಯಕೀಯ ಟೆಸ್ಟ್ ಮಾಡಲು ಅನುಮತಿ ನೀಡಿದ್ದಾಳೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ – ಟ್ರಕ್‍ಗೆ ಗುದ್ದಿದ ಬಸ್ 14 ಸಾವು, 40 ಮಂದಿಗೆ ಗಾಯ

Live Tv

Leave a Reply

Your email address will not be published. Required fields are marked *

Back to top button