-ಮಿಸ್ ಮಾಡ್ಕೊಂಡ್ರಾ ಡೋಂಟ್ ವರಿ ನಾಳೆನೂ ಬನ್ನಿ, ಉಚಿತ ಪ್ರವೇಶ
ಬೆಂಗಳೂರು: ಪಬ್ಲಿಕ್ ಟಿವಿ ಆಯೋಜನೆಯ ಫುಡ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಸಿಲಿಕಾನ್ ಸಿಟಿಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಹಾರ ಮೇಳಕ್ಕೆ ಆಗಮಿಸಿದ ಸಾರ್ವಜನಿಕರು ಬಗೆ ಬಗೆಯ ಖಾದ್ಯಗಳನ್ನು ಸವಿದು ವೀಕೆಂಡ್ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದು ರಂಗೋಲಿ ಸ್ಪರ್ಧೆಯನ್ನ ಸಹ ಆಯೋಜಿಸಲಾಗಿತ್ತು. ಇಂದು ರಾತ್ರಿ 10.30ರವರೆಗೂ ಆಹಾರ ಮೇಳೆ ಓಪನ್ ಇರಲಿದ್ದು, ಭಾನುವಾರ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆವರೆಗೆ ನೀವು ಫುಡ್ ಫೆಸ್ಟಿವಲ್ ಗೆ ಭೇಟಿ ನೀಡಬಹುದು.
ಈ ಮೊದಲೇ ನೋಂದಣಿ ಮಾಡಿಕೊಂಡಿದ್ದ ಮಹಿಳೆಯರು ಇಂದು ಬೆಳಗ್ಗೆ ಗಣರಾಜ್ಯೋತ್ಸವ ಥೀಮ್ ನಲ್ಲಿ ಹಾಕಿದ ಬಣ್ಣ ಬಣ್ಣದ ರಂಗೋಲಿ ಎಲ್ಲರನ್ನು ಸೆಳೆದವು. ರಂಗೋಲಿ ಸ್ಪರ್ಧೆಯಲ್ಲಿ ಪ್ರತಿಮಾ ಉಡುಪ ಮೊದಲ ಸ್ಥಾನ ಪಡೆದು 8 ಗ್ರಾಂ ಚಿನ್ನ ಮತ್ತು ಗಿಫ್ಟ್ ತಮ್ಮದಾಗಿಸಿಕೊಂಡರು. ಎರಡನೇ ಬಹುಮಾನ ನಿಖಿತಾ ಆರಾಧ್ಯ (4ಗ್ರಾಂ ಚಿನ್ನ+ಗಿಫ್ಟ್) ಮತ್ತು ಮೂರನೇ ಬಹುಮಾನವನ್ನು ಸರಸ್ವತಿ (4 ಗ್ರಾಂ ಚಿನ್ನ+ ಗಿಫ್ಟ್) ಪಡೆದುಕೊಂಡರು. ಸಮಾಧಾನಕರ ಬಹುಮಾನವಾಗಿ ಪೂನಂ ಎಂಬವರು 10 ಗ್ರಾಂ ಬೆಳ್ಳಿ ಮತ್ತು ಸೀರೆಯನ್ನು ತಮ್ಮದಾಗಿಸಿಕೊಂಡರು. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳಿಗೆ 10 ಗ್ರಾಂ ಬೆಳ್ಳಿಯನ್ನು ಬಹುಮಾನವಾಗಿ ನೀಡಲಾಯ್ತು.
Advertisement
Advertisement
ನಟಿ ಆಶಿಕಾ ರಂಗನಾಥ್, ಗಾಯಕಿ ಅರ್ಚನಾ ಉಡುಪಾ, ಪಬ್ಲಿಕ್ ಟಿವಿ ಸಿಇಓ ಅರುಣ್, ಸಿಓಓ ಸಿಕೆ ಹರೀಶ್ ಕುಮಾರ್ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಉಪಾಧ್ಯಾಯಿನಿ ರೇಣುಕಾ ಎಲ್ಲರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಲ್ಲಿ ಕರ್ನಾಟಕ ಮತ್ತು ಭಾರತದ ವಿವಿಧ ಭಾಗದ ಸಾಂಪ್ರದಾಯಿಕ ಮತ್ತು ವಿಭಿನ್ನ ಆಹಾರಗಳು ಒಂದೇ ಸೂರಿನಡಿ ಲಭ್ಯವಿದೆ. ಸುಮಾರು 40ಕ್ಕೂ ಹೆಚ್ಚು ಮಳಿಗೆಗಳಲ್ಲಿ 200ಕ್ಕೂ ಹೆಚ್ಚು ಖಾದ್ಯಗಳ ಪ್ರದರ್ಶನ ನಡೆಯುತ್ತಿದೆ.
Advertisement
ಬಿಸಿ-ಬಿಸಿ ವಡೆ, ಗರಿ ಗರಿ ದೋಸೆ, ನೋಟದಲ್ಲೇ ಸೆಳೆಯೋ ಪುಳಿಯೋಗರೆ, ಪಲಾವ್, ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಎಣ್ಣೆಗಾಯಿ ಪಲ್ಯ, ಭಿನ್ನ ಭಿನ್ನ ಹೋಳಿಗೆಗಳು ನಿಮ್ಮನ್ನು ಫೆಸ್ಟೀವ್ ಮೂಡ್ ಗೆ ಕರೆದುಕೊಂಡು ಹೋಗುತ್ತಿವೆ. ಕೇವಲ ವೆಜ್ ಅಲ್ಲದೇ ನಾನ್ ವೆಜ್ ಆಹಾರ ಮೇಳದಲ್ಲಿ ಲಭ್ಯವಿದೆ. ಕೆಂಪ್ ಕೆಂಪಾಗಿರುವ ಫಿಶಸ್ ಗೆ ಬೇಡಿಕೆ ಹೆಚ್ಚಾಗಿದೆ. ಫಿಶ್ ಫಿಂಗರ್, ಹುರಿದ ಸಿಗಡಿ, ಮೀನಿನ ಕಟ್ಲೆಟ್, ರವಾ ಬಂಗಡೆ ನೋಡತ್ತಿದ್ದರೆ ಬಾಯಲ್ಲಿ ನೀರು ಬರೋದು ಸತ್ಯ. ದೊನ್ನೆ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಸಹ ಆಹಾರ ಪ್ರಿಯರನ್ನು ಸೆಳೆಯುತ್ತಿವೆ.
Advertisement
ಒಂದೇ ಸೂರಿನಡಿ ವಿವಿಧ ಸ್ಟಾಲ್ ಗಳನ್ನು ಹಾಕಿರೋದನ್ನು ನೋಡುವುದೇ ಚೆಂದ. ಬಗೆ ಬಗೆಯ ಖಾದ್ಯಗಳೆಂದ್ರೆ ನನಗೆ ತುಂಬಾನೇ ಇಷ್ಟ. ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲ ಸ್ಪರ್ಧಿಗಳು ಚೆಂದವಾಗಿ ಬಣ್ಣ ಬಣ್ಣಗಳಲ್ಲಿ ಗಣರಾಜ್ಯೋತ್ಸವ ಶುಭಾಶಯ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ವಿನ್ನರ್. ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನು ನಟಿ ಆಶಿಕಾ ರಂಗನಾಥ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ರಂಗೋಲಿ ಮರೆಯಾಗುತ್ತಿದೆ. ಈ ಕಲೆಯನ್ನು ಉಳಿಸಲು ಪಬ್ಲಿಕ್ ಒಳ್ಳೆ ವೇದಿಕೆ ಒದಗಿಸಿದೆ. ಮಹಿಳೆಯರ ಎರಡು ಮುಖ್ಯವಾದ ಕಲೆಗಳು ಅಡುಗೆ ಹಾಗೂ ರಂಗೋಲಿ. ಹಾಗಾಗಿ ಎರಡು ಕಲೆಗಳನ್ನು ನಾವು ಇಲ್ಲಿ ಕಾಣಬಹುದು. ಬೆಳಗ್ಗೆನೇ ಕಣ್ಣಿಗೆ ಮತ್ತು ಮೂಗಿಗೆ ರಸದೌತಣ ಸಿಗುತ್ತಿದೆ. ಪ್ರತಿಯೊಬ್ಬ ಸ್ಪರ್ಧಿಗಳು ತಮ್ಮದೇ ಶೈಲಿಯಲ್ಲಿ ರಂಗೋಲಿ ಸುಂದರವಾಗಿ ರಂಗೋಲಿ ಬಿಡಿಸಿದ್ದರು. ಎಲ್ಲ ರಂಗೋಲಿಗಳನ್ನು ನೋಡಿದ್ದು ತುಂಬಾನೇ ಖುಷಿ ನೀಡ್ತು ಎಂದು ಗಾಯಕಿ ಅರ್ಚನಾ ಉಡುಪ ಹೇಳಿದರು.
https://www.youtube.com/watch?v=sBuO2hOJK_Q
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv