ಸಿಗಡಿ ಮಸಾಲೆ ಚಿಕನ್ ಫ್ರೈಗಿಂತಲೂ ಹೆಚ್ಚು ಜನಪ್ರಿಯ ಖಾದ್ಯವಾಗಿದ್ದು ಎಲ್ಲೆ ಮನ ಗೆಲ್ಲುತ್ತದೆ. ಇದರ ರುಚಿ ಪ್ರತ್ಯೇಕವಾಗಿದ್ದು ಅನ್ನ ಚಪಾತಿ ರೋಟಿ ಹೀಗೆ ಪ್ರತಿಯೊಂದಕ್ಕೂ ಸೈಡ್ಡಿಶ್ ಆಗಿ ಮ್ಯಾಚ್ ಆಗುತ್ತದೆ. ಇದನ್ನು ಸುಲಭವಾಗಿ ತಯಾರಿಸಬಹುದು.
Advertisement
ಬೇಕಾಗುವ ಸಾಮಗ್ರಿಗಳು:
* ಸಿಗಡಿ
* ಲಿಂಬೆ ರಸ – 3 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಬಿಳಿ ಕಾಳುಮೆಣಸು -1 ಚಮಚ
* ಮೊಸರು – 2ಕಪ್
* ಕೆಂಪು ಮೆಣಸು – 8
* ದನಿಯಾ – 2ಚಮಚ
* ಮೆಂತೆ ಬೀಜ – 1 ಚಮಚ
* ಜೀರಿಗೆ – 1 ಚಮಚ
* ಬೆಳ್ಳುಳ್ಳಿ-1
* ಹುಣಸೆಹಣ್ಣು ನೀರು – ಸ್ವಲ್ಪ
* ತುಪ್ಪ -2 ಚಮಚ
* ಅಡುಗೆ ಎಣ್ಣೆ – 2 ಚಮಚ
Advertisement
Advertisement
ಮಾಡುವ ವಿಧಾನ:
* ಉಪ್ಪು, ಬಿಳಿ ಕಾಳುಮೆಣಸು, ಲಿಂಬೆ ರಸವನ್ನು ಸಿಗಡಿಗೆ ಲೇಪಿಸಬೇಕು
* ಬಾಣಲೆಗೆ ನೆನೆದ ಸಿಗಡಿಯನ್ನು ಹಾಕಿ 3-4 ನಿಮಿಷಗಳಷ್ಟು ಕಾಲ ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು
* ಇದೇ ಸಮುದಲ್ಲಿ ಕೆಂಪು ಮೆಣಸು, ದನಿಯಾ, ಜೀರಿಗೆ, ಮೆಂತೆ ಬೀಜಗಳು, ಬೆಳ್ಳುಳ್ಳಿ ಮತ್ತು ಹುಣಸೆಹಣ್ಣು ಹಾಕಿ ರುಬ್ಬಿಕೊಳ್ಳಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
Advertisement
* ರುಬ್ಬಿದ ಮಸಾಲೆಯನ್ನು ಬಾಣಲೆಗೆ ಹಾಕಿ ಎಣ್ಣೆಯಲ್ಲಿ ಹಸಿ ಪರಿಮಳ ಹೋಗುವವರೆಗೆ ಬೇಯಿಸಿ.
* ನೆನೆಸಿದ ಸಿಗಡಿ, ತುಪ್ಪ, ಅಗತ್ಯವಿದ್ದಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಂಡು ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿದರೆ ರುಚಿಯಾದ ಸಿಗಡಿ ಮಸಾಲ ಅನ್ನದೊಂದಿಗೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ