ಕೂದಲು ಸೌಂದರ್ಯದ ಸಂಕೇತ. ಆದರೆ ಇಂದಿನ ಯುಗದಲ್ಲಿ ಕೂದಲನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಒಂದು ಸವಾಲಾಗಿದೆ. ಇಂದಿನ ಯುಗದಲ್ಲಿ ಮಾಲಿನ್ಯ, ಟೆನ್ಶನ್, ನಿಯಮಿತವಾಗಿ ಆಹಾರ ಸೇವಿಸದೇ ಇರುವುದು ಈ ಎಲ್ಲಾ ಕಾರಣದಿಂದಾಗಿ ನಿಮ್ಮ ಕೂದಲು ಉದುರುವುದು ಹೆಚ್ಚಾಗಬಹುದು. ನಿಮ್ಮ ಕೂದಲಿನ ಅಂದಕ್ಕೆ ಒಂದಿಷ್ಟು ಟಿಪ್ಸ್‍ಗಳನ್ನು ನೀಡುತ್ತೇವೆ. ಇದನ್ನು ನಿಯಮಿತವಾಗಿ ಪಾಲಿಸಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಿ.
ಆರೋಗ್ಯಕರ ಆಹಾರವನ್ನು ಸೇವಿಸಿ:
ಪ್ರತಿನಿತ್ಯ ಆರೋಗ್ಯಕರ ಆಹಾರವನ್ನು ಸೇವಿಸಿಸುವುದರಿಂದ ಪೌಷ್ಟಿಕಾಂಶದ ಕೊರತೆಗಳು, ಹಾರ್ಮೋನ್‍ಗಳ ಅಸಮತೋಲನ, ಥೈರಾಯ್ಡ್, ರಕ್ತ ಹೀನತೆ ಮತ್ತು ಇತರ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ವಿಟಮಿನ್-ಸಮೃದ್ಧ ಆಹಾರವು ಪೌಷ್ಟಿಕಾಂಶದ ಅಂತರವನ್ನು ತುಂಬಲು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ನೀವು ಆರೋಗ್ಯಕರ ಕೂದಲನ್ನು ಹೊಂದಲು ಸಹಾಯವಾಗುತ್ತದೆ. ನಿಮ್ಮ ದೇಹದ ಆರೋಗ್ಯವನ್ನು ನೀವು ನಿರ್ಲಕ್ಷಿಸುವುದರಿಂದ ನಿಮ್ಮ ಕೂದಲು ಉದುರುವುದು ಹೆಚ್ಚುತ್ತದೆ. ಇದರಿಂದಾಗಿ ಸಾಧ್ಯವಾದಷ್ಟು ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇದನ್ನೂ ಓದಿ: ನಾಲಿಗೆಗೆ ಕಹಿ ನೀಡುವ ಬೇವು ಆರೋಗ್ಯಕ್ಕೆ ಒಳ್ಳೆಯದು
Advertisement
Advertisement
ಅಂದಗೊಳಿಸುವತ್ತ ಗಮನ ಕೊಡಿ:
ನಿಯಮಿತವಾಗಿ ಹೇರ್ ಕಟ್ ಮಾಡಿಸಿ. ಜೊತೆಗೆ ಸ್ಪ್ಲಿಟ್ ಹೇರ್‌ಗಳನ್ನು ತೆಗೆಯಬೇಕು. ನಿಮ್ಮ ಕೂದಲಿಗೆ ಅಗಲವಾದ ಹಲ್ಲಿನ ಬಾಚಣಿಗೆಗಳನ್ನು ಬಳಸಿ. ಸ್ಕಾರ್ಫ್, ಕ್ಯಾಪ್‍ಗಳು ಅಥವಾ ಛತ್ರಿಗಳಿಂದ ನಿಮ್ಮ ಕೂದಲನ್ನು ಸೂರ್ಯನಿಂದ ರಕ್ಷಿಸಿ. ನಿಮ್ಮ ಕೂದಲನ್ನು ಸೌಮ್ಯವಾದ ಶ್ಯಾಂಪೂವಿನಿಂದ ತೊಳೆಯಬೇಕು. ತಲೆ ಸ್ನಾನ ಮಾಡುವಾಗ ತುಂಬಾ ಬಿಸಿಯಾದ ನೀರನ್ನು ಬಳಸಬಾರದು. ಜೊತೆಗೆ ನೈಸರ್ಗಿಕವಾಗಿ ಮತ್ತು ನಿಧಾನವಾಗಿ ಒಣಗಿಸಬೇಕು. ಇದನ್ನೂ ಓದಿ: ಸರ್ವ ರೋಗಕ್ಕೂ ದಾಸವಾಳದಲ್ಲಿದೆ ಮದ್ದು
Advertisement
Advertisement
ಕೂದಲ ಸಂರಕ್ಷಣೆ ಸಾಂಪ್ರದಾಯಿಕ ಕೆಲವು ಟಿಪ್ಸ್:
ತಾಯಂದಿರು ಮತ್ತು ಅಜ್ಜಿಯರು ಕೂದಲಿನ ಸಂರಕ್ಷಣೆಗೆ ಬಳಸುತ್ತಿದ್ದ ಕೆಲ ಟಿಪ್ಸ್‍ಗಳನ್ನು ನೀವೂ ಅಳವಡಿಸಿಕೊಳ್ಳಿ. ಪ್ರತಿನಿತ್ಯ ನಿಮ್ಮ ಕೂದಲಿಗೆ ಎಣ್ಣೆಯ ಮಸಾಜ್ ಮಾಡುವುದು, ವಾರಕ್ಕೊಮ್ಮೆ ಬೇವು ಅಥವಾ ಕರಿಬೇವಿನ ಎಲೆಗಳ ಹೇರ್ ಮಾಸ್ಕ್‍ಗಳನ್ನು ಬಳಸಬೇಕು. ಆವಕಾಡೊ, ಮೊಸರು, ಬಾಳೆಹಣ್ಣುಗಳನ್ನು ಬಳಸುವುದು. ಮೆಂತೆ, ಜೇನುತುಪ್ಪ, ಶಿಗೆಕಾಯಿ, ಮೊಟ್ಟೆ, ನೆಲ್ಲಿ ಕಾಯಿಗಳನ್ನು ತಲೆಗೆ ಬಳಸುವುದರಿಂದ ನಿಮ್ಮ ಕೂದಲಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತೀರಿ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
ನಿಮ್ಮ ಕೂದಲಿಗೆ ಸರಿಹೊಂದುವ ಶ್ಯಾಂಪು, ಕಂಡಿಷನರ್ ಬಳಸಿ:
ಕೂದಲಿಗೆ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಳ್ಳದ ಶ್ಯಾಂಪುಗಳು ಮತ್ತು ಕಂಡಿಷನರ್‍ಗಳನ್ನು ಆರಿಸಿ. ನಿಮ್ಮ ಕೂದಲನ್ನು ತೊಳೆಯುವಾಗ ಮತ್ತು ಕಂಡೀಷನಿಂಗ್ ಬಳಸುವಾಗ ಉತ್ತಮ ಉತ್ಪನ್ನಗಳಿಗಾಗಿ ನಿಮ್ಮ ಕೇಶ ವಿನ್ಯಾಸಕರನ್ನು ಸಂಪರ್ಕಿಸಿ ಮತ್ತು ಅವುಗಳನ್ನು ಮಿತವಾಗಿ ಬಳಸಿ. ನಿಮ್ಮ ಕೂದಲಿಗೆ ಹೊಂದಾಣಿಕೆಯಾಗದ ಶ್ಯಾಪೂ ಮತ್ತು ಕಂಡೀಶನರ್‌ಗಳನ್ನು ಬಳಸುವುದರಿಂದ ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಕೂದಲಿನ ಹೊಳಪನ್ನು ಮಂದಗೊಳಿಸುತ್ತದೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ
ನಿಮ್ಮ ಒತ್ತಡವನ್ನು ನಿರ್ವಹಿಸಿ:
ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವೆಂದರೆ ಒತ್ತಡವಾಗಿದೆ. ಇದರಿಂದಾಗಿ ಧ್ಯಾನ, ವ್ಯಾಯಾಮ ಮತ್ತು ಪ್ರಾಣಾಯಾಮಗಳನ್ನು ನಿಯಮಿತವಾಗಿ ಮಾಡಿ. ನೀವು ಸಂತೋಷದಿಂದ ಇದ್ದರೆ ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ನಿಯಮಿತ ವ್ಯಾಯಾಮವು ಸುಧಾರಿತ ರಕ್ತ ಪರಿಚಲನೆ, ಸುಧಾರಿತ ಮನಸ್ಥಿತಿ, ಹೆಚ್ಚಿದ ಶಕ್ತಿ ಮತ್ತು ಸುಧಾರಿತ ನಿದ್ರೆ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಈ ಎಲ್ಲಾ ಅಂಶಗಳು ನಿಮ್ಮ ಕೂದಲಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ