ವಿಜಯನಗರ: ಕಲುಷಿತ ನೀರು ಸೇವಿಸಿ ನವ ಜಾತ ಶಿಶು ಸೇರಿ ಐವರು ಸಾವನ್ನಪ್ಪಿದ್ದಾರೆ. ಶುದ್ಧ ನೀರು ಕೊಡದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶಕ್ಕೆ ಒಳಗಾದ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಟಿ ತುಂಬಿಗೇರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುರೇಶ್(30), ಮಹಾಂತೇಶ್(45)ಗೌರಮ್ಮ(60), ಹನುಮಂತಪ್ಪ(38),8 ತಿಂಗಳ ಗಂಡು ಮಗು ಸಾವನ್ನಪ್ಪಿದವರು. ಗ್ರಾಮದ ಐವತ್ತಕ್ಕೂ ಹೆಚ್ಚು ಜನರು ಭೇದಿಯಿಂದ ಬಳಲುತ್ತಿದ್ದು, ಒಂದೇ ದಿನ ಇಬ್ಬರ ಸಾವಾಗಿದೆ. ಕಳೆದ ವಾರ ಮೂವರು ಸಾವನ್ನಪ್ಪಿದ್ದು, ಸರಣಿ ಸಾವಿನಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಇದನ್ನೂ ಓದಿ: ಶಾಂತಿ ಮಾತುಕತೆ ಯಶಸ್ವಿ – 5 ವರ್ಷದ ಬಳಿಕ ಮೋದಿ-ಜಿನ್‌ಪಿಂಗ್ ದ್ವಿಪಕ್ಷೀಯ ಸಭೆ
Advertisement
Advertisement
ವಾಂತಿ ಭೇದಿಯಿಂದ ನರಳಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಎಂದು ಗ್ರಾಮಸ್ಥರ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಗರ್ಭಿಣಿ ನಿಂಗಮ್ಮ ಎನ್ನುವವರಿಗೆ ಕೂಡ ವಾಂತಿಭೇದಿ ಕಾಣಿಸಿಕೊಂಡಿದ್ದು, ಹೆರಿಗೆ ವೇಳೆ ಗಂಡು ಮಗು ಕೂಡ ಸಾವನ್ನಪ್ಪಿದೆ. ಇದಕ್ಕೆ ಗ್ರಾಮಕ್ಕೆ ಸರಬರಾಜು ಆಗುವ ನಲ್ಲಿಯಲ್ಲಿ ಕಲುಷಿತ ನೀರು ಬಂದು ವಾಂತಿ ಭೇದಿಯಾಗುತ್ತಿದೆ ಎಂದು ಗ್ರಾಮಸ್ಥರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: THAAD ಎಂದರೇನು? ಇಸ್ರೇಲ್‌ಗೆ ಅಮೆರಿಕ ಇದನ್ನೂ ಏಕೆ ಕಳುಹಿಸಿದೆ?
Advertisement
ಇಷ್ಟೇಲ್ಲ ಆದರೂ ಕೂಡ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ತೋರಿದ ಆರೋಗ್ಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬೆಂಗಳೂರು ಕಟ್ಟಡ ದುರಂತ- ಸಾವಿನ ಸಂಖ್ಯೆ ಐದಕ್ಕೆ ಏರಿಕೆ, ಓರ್ವ ಕಾರ್ಮಿಕನ ರಕ್ಷಣೆ
Advertisement