ಅಹಮದಾಬಾದ್: ಗುಜರಾತ್ ಆಮ್ ಆದ್ಮಿ ಪಕ್ಷದ(AAP) ಐವರು ಶಾಸಕರು ಬಿಜೆಪಿ(BJP) ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.
ಐದು ಆಪ್ ಶಾಸಕರ ಪೈಕಿ ಮೂವರು ಈ ಹಿಂದೆ ಬಿಜೆಪಿ ಪಕ್ಷದಲ್ಲಿದ್ದರು. ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಆಪ್ ಸೇರಿದ್ದರು. ಈ ಪೈಕಿ ಭೂಪೇಂದ್ರಭಾಯಿ ಭಯಾನಿ ಈ ವಾರ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.
Advertisement
ಬಿಜೆಪಿ ಸೇರ್ಪಡೆ ಕುರಿತ ಪ್ರಶ್ನೆಗೆ, ನಾನು ಬಿಜೆಪಿಗೆ ಸೇರಿಲ್ಲ. ನಾನು ಬಿಜೆಪಿಗೆ ಸೇರಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಜನರ ಜೊತೆ ಕೇಳಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಉತ್ತರಿಸಿದ್ದಾರೆ.
Advertisement
Advertisement
ವಿರೋಧ ಪಕ್ಷಗಳು ಕಡಿಮೆ ಸ್ಥಾನವನ್ನು ಪಡೆದಿವೆ. ಶಾಸಕನಾಗಿ ವಿರೋಧ ಪಕ್ಷದ ಬೆಂಚಿನಲ್ಲಿ ಕೂರುವುದರಿಂದ ತನಗೆ ಮತ ಹಾಕಿದ ಜನರಿಗೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ನನ್ನ ಕ್ಷೇತ್ರ ರೈತರ ಪ್ರಾಬಲ್ಯವಿರುವ ಪ್ರದೇಶದಲ್ಲಿದೆ. ಅವರ ನೀರಾವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾನು ಪರಿಹರಿಸಬೇಕಾಗಿದೆ. ಈ ಪ್ರದೇಶದಲ್ಲಿ ಅನೇಕ ವ್ಯಾಪಾರಸ್ಥರಿದ್ದಾರೆ. ನಾನು ಅವರನ್ನೂ ನೋಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಚ್ಚಾ ತೈಲಕ್ಕೆ ಜಿ7 ದೇಶಗಳಿಂದ ದರ ಮಿತಿ – ಭಾರತದ ನಿರ್ಧಾರವನ್ನು ಸ್ವಾಗತಿಸಿದ ರಷ್ಯಾ
Advertisement
ಗುಜರಾತ್ ಜನರು ನರೇಂದ್ರ ಮೋದಿ ಮತ್ತು ಬಿಜೆಪಿಗೆ ದಾಖಲೆಯ ಜನಾದೇಶವನ್ನು ನೀಡಿದ್ದಾರೆ. ನಾನು ಅದನ್ನು ಗೌರವಿಸುತ್ತೇನೆ. ಮೊದಲು ನಾನು ಬಿಜೆಪಿಯೊಂದಿಗೆ ಇದ್ದೆ ಮತ್ತು ಈಗಲೂ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ ಎಂದರು.
ಗುಜರಾತ್ ಚುನಾವಣೆಯಲ್ಲಿ(Gujarat Election) ಬಿಜೆಪಿ 156, ಕಾಂಗ್ರೆಸ್ 17, ಆಪ್ 5 ಸ್ಥಾನಗಳನ್ನು ಗೆದ್ದುಕೊಂಡಿದೆ. ಮೂವರು ಪಕ್ಷೇತರ, ಒಬ್ಬರು ಸಮಾಜವಾದಿ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ.