ಮಂಗಳೂರು: ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ (Fishing Boat) ಬೆಂಕಿಗಾಹುತಿಯಾಗಿರುವ ಘಟನೆ ಮಂಗಳೂರಿನ (Mangaluru) ಬೆಂಗ್ರೆಯ (Bengre) ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.
ಮಂಗಳವಾರ ಮುಂಜಾನೆ ಬೋಟ್‌ನಲ್ಲಿ ಏಕಾಏಕಿ ಬೆಂಕಿ (Fire) ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಡೀಸೆಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೋಟ್ ಹೊತ್ತಿ ಉರಿದಿದೆ. ಬೆಂಕಿ ಆವರಿಸಿ ಕೋಟ್ಯಂತರ ಮೌಲ್ಯದ ವಸ್ತುಗಳು ನಾಶವಾಗಿದೆ.
Advertisement
Advertisement
ಒಂದು ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಂಗರು ಹಾಕಿದ್ದ ಇನ್ನಷ್ಟು ಬೋಟ್‌ಗಳಿಗೆ ಬೆಂಕಿ ಹರಡುವ ಮುನ್ನ ಸ್ಥಳೀಯ ಮೀನುಗಾರರು ಎಚ್ಚೆತ್ತುಕೊಂಡಿದ್ದಾರೆ. ಬೆಂಕಿ ತಗುಲಿದ ಬೋಟ್ ಅನ್ನು ಬಂದರಿನಿಂದ ನದಿ ಕಡೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ದಂಪತಿ ಸಾವು- ಅನಾಥವಾದ ವೃದ್ಧಾಶ್ರಮ
Advertisement
Advertisement
ಬೆಂಕಿಗೆ ಆಹುತಿಯಾದ ಮೀನಿಗಾರಿಕಾ ಬೋಟ್ ಅರುಣ್ ಎಂಬವರಿಗೆ ಸೇರಿದ್ದಾಗಿದೆ. ಸ್ಥಳಕ್ಕೆ ಆಗಮಿಸಿದ ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ನಾಳೆ CWRC ಸಭೆ – ಈ ಬಾರಿ ತಮಿಳುನಾಡು ಬೇಡಿಕೆಯಿಟ್ಟ ನೀರಿನ ಪ್ರಮಾಣ ಎಷ್ಟು ಗೊತ್ತಾ?
Web Stories