ಫಿಶ್ ಐಟಂಗಳು ಎಲ್ಲರಿಗೂ ತುಂಬಾ ಫೆವರೇಟ್ ಆಹಾರವಾಗಿದೆ. ಫಿಶ್ ತಿಂದರೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮೀನು ಸೇವಿಸಿದರೆ ಮೆದುಳು ಚುರುಕಾಗುತ್ತದೆ. ಮನೆಯಲ್ಲಿ ಮಾಡಿ ಫಿಶ್ ಫ್ರೈ ತಿನ್ನುವುದರಿಂದ ರುಚಿಯೂ ಹೆಚ್ಚಾಗಿರುತ್ತದೆ. ಆದ್ದರಿಂದ ನಿಮಗಾಗಿ ಫಿಶ್ ಫ್ರೈ ಮಾಡುವ ವಿಧಾನ ಇಲ್ಲಿದೆ…
Advertisement
ಬೇಕಾಗುವ ಸಾಮಾಗ್ರಿಗಳು
1. ಖಾರದ ಪುಡಿ – 1 ಚಮಚ
2. ಕಾಳು ಮೆಣಸಿನ ಪುಡಿ – ಕಾಲು ಚಮಚ
3. ಅರಿಶಿಣ – ಚಿಟಿಕೆ
4. ಉಪ್ಪು – ರುಚಿಗೆ ತಕ್ಕಷ್ಟು
5. ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
6. ನಿಂಬೆ ಹಣ್ಣು – 1
7. ಎಣ್ಣೆ – 4-5 ಚಮಚ
8. ಫಿಶ್ – 6-8 ಪೀಸ್‍ಗಳು
(ಖಾರ ಜಾಸ್ತಿ ಬೇಕಾದವರು ಖಾರದ ಪುಡಿ ಜಾಸ್ತಿ ಬಳಸಬಹುದು)
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್‍ಗೆ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಹೋಳು ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ. 2 ರಿಂದ 3 ಚಮಚದಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ. (ತುಂಬಾ ತೆಳ್ಳಗೆ ಮಿಶ್ರಣ ಬೇಡ)
* ಮಿಶ್ರಣಕ್ಕೆ ತೊಳೆದ ಮೀನಿನ ಪೀಸ್‍ಗಳನ್ನು ಸೇರಿಸಿ. ಫಿಶ್‍ಪೀಸ್‍ಗೆ ಮಿಶ್ರಣವನ್ನು ಸಮಪ್ರಮಾಣದಲ್ಲಿ ಕೋಟ್ ಮಾಡಿ ಲೇಪಿಸಿ.
* ಸುಮಾರು ಅರ್ಧ ಗಂಟೆಗಳ ಕಾಲ ಮುಚ್ಚಿಡಿ.
* ಈಗ ಒಂದು ಫ್ರೈಯಿಂಗ್ ಪ್ಯಾನ್‍ಗೆ 2-3 ಚಮಚ ಎಣ್ಣೆ ಹಾಕಿ, ಕಾದ ಬಳಿಕ ಫಿಶ್ ಪೀಸ್‍ಗಳನ್ನು ಹಾಕಿ ಎರಡೂ ಬದಿ ಚೆನ್ನಾಗಿ ಫ್ರೈ ಮಾಡಿ. (ಬೇಕಿದ್ದಲ್ಲಿ ಮಾತ್ರ ಮತ್ತೆ ಎಣ್ಣೆ ಬಳಸಿ)
* ಈಗ ಫ್ರೈ ಆದ ಫಿಶ್ ಪೀಸ್‍ಗೆ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ.. ಈರುಳ್ಳಿ, ನಿಂಬೆಹಣ್ಣಿನ ಸ್ಲೈಸ್ ಜೊತೆಗೆ ಸವಿಯಿರಿ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv