ವಾಷಿಂಗ್ಟನ್: ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಲಾದ ಬೇಬಿ ಶಾರ್ಕ್ ವೀಡಿಯೋವನ್ನು ಇಲ್ಲಿಯವರೆಗೆ ಬರೋಬ್ಬರಿ 100 ಕೋಟಿಗೂ ಹೆಚ್ಚು ಬಾರಿ ನೋಡಲಾಗಿದೆ.
ಜೂನ್ 18, 2016ರಲ್ಲಿ ಮಾಡಲಾದ ಪಿಂಕ್‍ಫಾಂಗ್ ಬೇಬಿ ಶಾರ್ಕ್ ಯೂಟ್ಯೂಬ್‍ನಲ್ಲಿ ಅತೀ ಹೆಚ್ಚು ವೀಕ್ಷಣೆ ಗಳಿಸಿದ ಮೊದಲ ವೀಡಿಯೋ ಆಗಿದೆ. ಯೂಟ್ಯೂಬ್ ಪ್ಲಾಟ್ಫಾರ್ಮ್‍ನಲ್ಲಿ ಇಂತಹ ಸಾಧನೆ ಮಾಡಿರುವ ಮೊದಲ ವೀಡಿಯೋ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದನ್ನೂ ಓದಿ: ರಿಯಲ್ ಸ್ಟಾರ್ ಉಪ್ಪಿ ಮನೆಯಲ್ಲಿ ಸಂಕ್ರಾತಿ ಸಡಗರ
Advertisement
ಈ ವೀಡಿಯೋದಲ್ಲಿ ಇಬ್ಬರು ಮಕ್ಕಳು ಬೇಬಿ ಶಾರ್ಕ್ ಹಾಡಿಗೆ ಪ್ರದರ್ಶನ ನೀಡುವುದನ್ನು ಕಾಣಬಹುದು. ಹಾಗೆಯೇ ಹಿಂದುಗಡೆ ಆನಿಮೇಟೆಡ್ ಶಾರ್ಕ್‍ಗಳನ್ನು ನೋಡಬಹುದು. ಈ ಹಾಡು ಬಿಲ್ಬೋರ್ಡ್ ಹಾಟ್ 100 ರಲ್ಲಿ 32ನೇ ಸ್ಥಾನದಲ್ಲಿದೆ. ಪಿಂಕ್ ಫಾಂಗ್ ಕಂಪನಿಯ ಹಾಡಿಗೆ ಪ್ರಪಂಚದಾದ್ಯಂತ ತಲೆದೂಗದವರೇ ಇಲ್ಲ ಎನಿಸುತ್ತದೆ.
Advertisement
Advertisement
2020ರ ನವೆಂಬರ್‍ನಲ್ಲಿಯೇ ಈ ಹಾಡು 7.04 ಶತಕೋಟಿ ವೀಕ್ಷಣೆಗಳನ್ನು ಗಳಿಸಿ ದಾಖಲೆ ಬರೆದಿತ್ತು. ಇದನ್ನೂ ಓದಿ: 8 ಪ್ರಯಾಣಿಕರ ವಾಹನದಲ್ಲಿ 6 ಏರ್‌ಬ್ಯಾಗ್ ಕಡ್ಡಾಯ
Advertisement
ಯೂಟ್ಯೂಬ್‍ನಲ್ಲಿ ಎರಡನೇ ಅತೀ ಹೆಚ್ಚು ವೀಕ್ಷಣೆಗೆ ಒಳಗಾದ ವೀಡಿಯೋ ಪಾಪ್ ತಾರೆಗಳಾದ ಲೂಯಿಸ್ ಫೋನ್ಸಿ ಹಾಗೂ ಡ್ಯಾಡಿ ಯಾಂಕಿ ಹಾಡಿರುವ ಡೆಸ್ಪಾಸಿಟೋ. ಸದ್ಯ ಈ ಹಾಡು ಇಲ್ಲಿಯವರೆಗೆ 77 ಕೋಟಿ ವೀಕ್ಷಣೆಗಳನ್ನು ಗಳಿಸಿದೆ.