ಬೆಂಗಳೂರು: ಸ್ಯಾಂಡಲ್ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಫ್ಯಾಮಿಲಿ ಜೊತೆಗೆ ಅದ್ದೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದು, ಪ್ರೀತಿಯ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.
- Advertisement 2
ಉಪೇಂದ್ರ ಅವರ ಮನೆಯಲ್ಲಿ ಪ್ರತಿ ಹಬ್ಬವನ್ನು ಬಹಳ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಉಪೇಂದ್ರ ಅವರು ಪತ್ನಿ ಪ್ರಿಯಾಂಕಾ ಮತ್ತು ಮಕ್ಕಳಾದ ಐಶ್ವರ್ಯ, ಆಯುಷ್ ಜೊತೆ ಅದ್ದೂರಿಯಾಗಿ ಆಚರಿಸಿದ್ದು, ಹಬ್ಬದ ದಿನ ಫ್ಯಾಮಿಲಿ ಜೊತೆ ಕೆಲವೊಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಈ ಕ್ಯೂಟ್ ಫೋಟೋಗಳನ್ನು ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಗಳ ಫೋಟೋ ಹಂಚಿಕೊಂಡು ಅಭಿಮಾನಿಗಳಿ ಶಾಕ್ ಕೊಟ್ಟ ಸತೀಶ್ ನಿನಾಸಂ
- Advertisement 3
- Advertisement 4
ಫೋಟೋದಲ್ಲಿ ಉಪೇಂದ್ರ ಹಳದಿ ಬಣ್ಣದ ಶೇರ್ವಾನಿ ತೊಟ್ಟಿದ್ದರೆ, ಪ್ರಿಯಾಂಕಾ ಕೇಸರಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ. ಇನ್ನೂ ಐಶ್ವರ್ಯ ಹಾಗೂ ಆಯುಷ್ ಕೂಡ ಸಾಂಪ್ರದಾಯಿಕ ಉಡುಗೆ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಇಷ್ಟೇ ಅಲ್ಲದೇ ದೀಪಗಳಿಂದ ಅಲಂಕರಿಸಿದ ಟೇಬಲ್ ಮೇಲೆ ಎಳ್ಳು, ಬೆಲ್ಲ, ಕಬ್ಬು ಹಾಗೂ ಒಂದು ತಂಟೆಯಲ್ಲಿ ಹಣ್ಣನ್ನು ತುಂಬಿ ಉಪೇಂದ್ರ ಅವರು ಫ್ಯಾಮಿಲಿ ಸಮೇತ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.
View this post on Instagram
ಪ್ರಿಯಾಂಕಾ ಅವರು ಮೂಲತಃ ಬೆಂಗಾಲಿ ಮೂಲದವರಾದರೂ ಕರುನಾಡಿನ ಪ್ರತಿಹಬ್ಬವನ್ನು ಬಹಳ ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಈ ಬಾರಿ ಸಂಕ್ರಾಂತಿ ಹಬ್ಬದಂದು ಇಡೀ ಮನೆಯನ್ನು ಹೂವಿನಿಂದ ಅಲಂಕರಿಸಿದ್ದರು. ವಿಶೇಷವೆಂದರೆ ದೇವರ ಮನೆಯ ಬಾಗಿಲಿಗೆ ಕಬ್ಬಿನಿಂದ ಅಲಂಕಾರ ಮಾಡಿದ್ದರು. ಇದನ್ನೂ ಓದಿ: ಧನ್ವೀರ್ ಮೂರನೇ ಸಿನಿಮಾ ಟೈಟಲ್ ‘ವಾಮನ’ – ಫಸ್ಟ್ ಲುಕ್ ರಿಲೀಸ್