ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡ(ಕಿಡ್ನಿ)ಯನ್ನು ಮಾನವನಿಗೆ ಕಸಿ ಮಾಡಲಾಗಿದೆ. ಕಿಡ್ನಿ ಅಳವಡಿಸಿದ ರೋಗಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಆಗಿಲ್ಲ ಎಂದು ನ್ಯೂಯಾರ್ಕ್ ವೈದ್ಯರು ಹೇಳಿದ್ದಾರೆ.
ನ್ಯೂಯಾರ್ಕ್ ಲಾಂಗ್‍ಒನ್ ಹೆಲ್ತ್(ಎನ್‍ವೈಎಲ್) ಸಂಸ್ಥೆಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಿದುಳು ನಿಷ್ಕ್ರಿಯವಾಗಿ ಜೀವರಕ್ಷಕ ಸಾಧನದ ಮೇಲೆ ಜೀವಂತವಿರುವ ಮಹಿಳೆಗೆ ವಂಶವಾಹಿ ಪರಿವರ್ತಿಸಲಾದ ಹಂದಿ ಕಿಡ್ನಿ ಕಸಿ ಮಾಡಲಾಗಿದೆ. ಇದರಿಂದ ಹಂದಿಯ ಕಿಡ್ನಿಯನ್ನು ಮಾನವ ದೇಹ ತಕ್ಷಣಕ್ಕೆ ತಿರಸ್ಕರಿಸುವುದಿಲ್ಲ ಎಂಬುದು ಗೊತ್ತಾಗಿದೆ ಎಂದು ಎನ್‍ವೈಎಲ್ ಸಂಸ್ಥೆ ತಿಳಿಸಿವೆ.
Advertisement
Advertisement
ಕಿಡ್ನಿ ಕಸಿಯಾದ ಮೇಲೆ ಮೂರು ದಿನ ಅದನ್ನು ಆಕೆಯ ದೇಹದ ಹೊರಗೆ ನಿರ್ವಹಿಸಲಾಯಿತು. ಆಕೆಗೆ ಮೂತ್ರ ಮಾಡಲು ಯಾವುದೇ ಕಷ್ಟವಾಗಿಲ್ಲ ಎಂಬುದನ್ನು ನಾವು ಖಚಿತ ಮಾಡಿಕೊಂಡೆವು. ಈ ಪ್ರಯೋಗಾತ್ಮಕ ಚಿಕಿತ್ಸೆ ನಡೆಸುವುದಕ್ಕೂ ಮುದಲು ಮಿದುಳು ನಿಷ್ಕ್ರಿಯವಾದ ಮಹಿಳೆಯ ಕುಟುಂಬಸ್ಥರಿಂದ ಒಪ್ಪಿಗೆ ಪಡೆದುಕೊಂಡಿದ್ದೇವೆ ಎಂದು ಎನ್‍ವೈಎಲ್ ವಿವರಿಸಿದೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ
Advertisement
Advertisement
ಪ್ರಯೋಗ: ಮುದುಳು ನಿಷ್ಕ್ರಿಯವಾದ ಮಹಿಳೆಯ ಮೂತ್ರಪಿಂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಂದಿ ಕಿಡ್ನಿ ಅಳವಡಿಸಿದ ನಂತರ ಕಾರ್ಯ ಸಹಜವಾಗಿ ನಡೆಸಲು ಆರಂಭವಾಯಿತ್ತು ಎಂದು ನ್ಯೂಯಾರ್ಕ್ ಲಾಂಗ್‍ಒನ್ ಹೆಲ್ತ್ ಸಂಶೋಧನಾ ತಂಡದ ಮುಖ್ಯಸ್ಥ ಡಾ. ರಾಬರ್ಟ್ ಮಾಂಟ್ಗೊಮೆರಿ ಹೇಳಿದ್ದಾರೆ. ದನ್ನೂ ಓದಿ: 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದ : ಸಿದ್ದರಾಮಯ್ಯ
ಮಾನವರಿಗೆ ಪ್ರಾಣಿಗಳ ಅಂಗಗಳನ್ನು ಜೋಡಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಆದರೆ ಕಸಿ ಮಾಡಿದ ತಕ್ಷಣ ಮಾನವ ದೇಹ ಸ್ಪಂದನೆ ನೀಡುತ್ತಿದೆ. ರಾಬರ್ಟ್ ಅವರ ತಂಡ ಈ ನಿಟ್ಟಿನಲ್ಲಿ ಮೊದಲ ಹಂತದ ಯಶಸ್ಸುಗಳಿಸಿದೆ. ಈ ಪ್ರಯೋಗವನ್ನು ಥೇರಪ್ಯೂಟಿಕ್ಸ್ ಕಾಪ್ರ್ಸ್ ರಿವಿವಿಕಾರ್ ಯುನಿಟ್ ಮಾಡಿದೆ.