ವಾಷಿಂಗ್ಟನ್/ನವದೆಹಲಿ: ಉತ್ತರಧ್ರುವದಲ್ಲಿ ವಿಮಾನ ಹಾರಿಸಿ ವಿಶೇಷ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಪೈಲಟ್ ಅಮೆರಿಕದ ಏವಿಯೇಷನ್ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದಾರೆ.
First Indian female pilot gets place in US-based Aviation Museum for record-breaking flight over North Pole
Read @ANI Story | https://t.co/XjfH1Fg73C#IndianAirlines #aviation #ZoyaAgarwal #Pilot pic.twitter.com/pZeiTDO0qh
— ANI Digital (@ani_digital) August 19, 2022
Advertisement
ಏರ್ ಇಂಡಿಯಾದ ಹಿರಿಯ ಪೈಲಟ್ (ಬೋಯಿಂಗ್-777 ವಿಮಾನ) ಕ್ಯಾಪ್ಟನ್ ಜೋಯಾ ಅಗರ್ವಾಲ್ ಅವರು, ಉತ್ತರ ಧ್ರುವ (ಉತ್ತರ ಗೋಳಾರ್ಧದಲ್ಲಿ ಭೂಮಿಯ ತಿರುಗುವಿಕೆಯ ಅಕ್ಷವು ಅದರ ಮೇಲ್ಮೈಯನ್ನು ಸಂಧಿಸುವ ಬಿಂದು)ದ ಮೇಲೆ ವಿಮಾನ ಹಾರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. 16,000 ಕಿಮೀ ಕ್ರಮಿಸಿ ದಾಖಲೆ ನಿರ್ಮಿಸಿದ್ದು, SFO ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಗಳಿಸಿದ್ದಾರೆ. ಇದನ್ನೂ ಓದಿ: 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ
Advertisement
Advertisement
ಜೋಯಾ ಅಗರ್ವಾಲ್ ನೇತೃತ್ವದ ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡವು 2021 ರಲ್ಲಿ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿರುವ ಸ್ಯಾನ್ ಫ್ರಾನ್ಸಿಸ್ (SFO) ನಿಂದ ಭಾರತದ ಬೆಂಗಳೂರು ನಗರಕ್ಕೆ ವಿಶ್ವದ ಅತಿ ಉದ್ದದ ವಿಮಾನ ಮಾರ್ಗವನ್ನು ಕ್ರಮಿಸಿತ್ತು. ಏರ್‌ಇಂಡಿಯಾ ಮಹಿಳೆಯರ ಈ ಸಾಧನೆಯಿಂದ ಪ್ರಭಾವಿತವಾದ ಯುಎಸ್ ಮೂಲದ ಏವಿಯೇಷನ್ ತನ್ನ ಮ್ಯೂಸಿಯಂನಲ್ಲಿ ಸ್ಥಾನ ನೀಡಿದೆ. ಇದನ್ನೂ ಓದಿ: ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವೀಡಿಯೋ ಲೀಕ್ – ಮುಚ್ಚಿಡಲು ಏನೂ ಇಲ್ಲವೆಂದ ಮರಿನ್
Advertisement
ಈ ಸಂತಸವನ್ನು ಹಂಚಿಕೊಂಡಿರುವ ಕ್ಯಾಪ್ಟನ್ ಜೋಯಾ ಅಗರ್ವಾಲ್, ಯುಎಸ್‌ನ ಮ್ಯೂಸಿಯಂನಲ್ಲಿ ನಾನೊಬ್ಬಳೇ ಅಲ್ಲಿರುವ ಏಕೈಕ ಜೀವಂತ ವಸ್ತು. ಅದನ್ನು ಕಂಡು ನನಗೆ ಆಶ್ಚರ್ಯವಾಯಿತು. ಸದ್ಯ ಯುಸ್‌ನ ಪ್ರತಿಷ್ಟಿತ ವಾಯುಯಾನ ಮ್ಯೂಸಿಯಂನ ಭಾಗವಾಗಿದ್ದೇನೆ. ನಾನು ಅದಕ್ಕೆ ಪ್ರಾಮಾಣಿಕಳಾಗಿರುತ್ತೇನೆ ಎಂದು ಹೇಳಿದ್ದಾರೆ.