ಭೋಪಾಲ್: ಅತ್ತೆಯ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಲು ಸೊಸೆ ಕೆಂಡದ ಮೇಲೆ ನಡೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಕಿ ಮೇಲೆ ಮಹಿಳೆ ನಡೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಛಿಂದ್ವಾಡದ ಮಾವೂ ವ್ಯಾಪ್ತಿಯ ರಾಮಾಕೋನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ 17ರಂದು ಅತ್ತೆ ಜೊತೆ ಮಹಿಳೆ ಬಾಬಾ ದರಬಾರ್ ಗೆ ಬಂದಿದ್ದಳು. ಈ ವೇಳೆ ಬಾಬಾ ಸೊಸೆಯ ಮೇಲೆ ಅನುಮಾನ ವ್ಯಕ್ತಪಡಿಸಿ, ಸುಳ್ಳು ಎಂದು ದೃಢಪಡಿಸಲು ಸೂಚಿಸಿದ್ದನು. ಇದಕ್ಕೂ ಮೊದಲು ಮಹಿಳೆ ಅತ್ತೆ ಬಂದು ಬಾಬಾನ ಮುಂದೆ ಸೊಸೆಯ ಬಗ್ಗೆ ಕಿವಿ ಓದಿದ್ದಳು ಎಂದು ವರದಿಯಾಗಿದೆ.
Advertisement
Advertisement
ನಿಮ್ಮ ಸೊಸೆ ಪತಿಗೆ ಆಹಾರದಲ್ಲಿ ಏನೋ ಸೇರಿಸಿ ಆತನನ್ನ ವಶ ಮಾಡಿಕೊಂಡಿದ್ದಾಳೆ. ಈ ಆರೋಪ ಸತ್ಯ ಆಗಿದ್ರೆ ಆಕೆ ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಾಳೆ ಎಂದು ಬಾಬಾ ಹೇಳಿದ್ದನು. ಅಲ್ಲಿಯೇ ಕುಳಿತಿದ್ದ ಮಹಿಳೆ ಬಾಬಾ ಮತ್ತು ಅತ್ತೆ ಇಬ್ಬರು ಆರೋಪಗಳು ಸುಳ್ಳು ಎಂದು ಬೆಂಕಿ ಮೇಲೆ ನಡೆದಿದ್ದಾರೆ. ಇದನ್ನೂ ಓದಿ: ನಾನೇ ಮಾಡಿದೇ, ನಾನೇ ಕಟ್ಟಿದೆ ಅಂತ ಪ್ರತಾಪ್ ಸಿಂಹ ಹೇಳೋದು ತಪ್ಪು: ವಿಶ್ವನಾಥ್
Advertisement
Advertisement
ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಪತಿ, ನಮ್ಮ ಮನೆಯವರು ಮೌಢ್ಯಕ್ಕೆ ಒಳಗಾಗಿರೋದು ಮಾತ್ರ ಸತ್ಯ. ಆದ್ರೆ ಈ ಘಟನೆ ಬಳಿಕ ನಮ್ಮ ತಾಯಿಗೆ ಪತ್ನಿಯ ಮೇಲಿದ್ದ ಎಲ್ಲ ಅನುಮಾನಗಳು ನಿವಾರಣೆ ಆಗಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟ – ಕಾಂಗ್ರೆಸ್, ಟಿಎಂಸಿ ಪ್ರಶ್ನೆ