– ಕಲ್ಯಾಣ್ ಸಿಂಗ್ ಪಾರ್ಥಿವ ಶರೀರದ ಮೇಲೆ ಹಾಕಲಾಗಿದ್ದ ಧ್ವಜ
ಲಕ್ನೋ: ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟ ಹಾಕಿರೋದನ್ನು ಕಾಂಗ್ರೆಸ್ ಮತ್ತು ಟಿಎಂಸಿ ಖಂಡಿಸಿದ್ದು, ಕಮಲ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಲ್ಯಾಣ್ ಸಿಂಗ್ ಶನಿವಾರ ರಾತ್ರಿ ನಿಧನರಾಗಿದ್ದರು. ಭಾನುವಾರ ಲಕ್ನೋ ನಗರದ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಇರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರದ ಮೇಲೆ ಗೌರವ ಪೂರ್ವಕಗಾಗಿ ರಾಷ್ಟ್ರಧ್ವಜ ಹಾಕಲಾಗಿತ್ತು. ಇದರ ಮೇಲೆಯೇ ಬಿಜೆಪಿ ಧ್ವಜ ಹಾಕಿರೋದು ವಿವಾದಕಕ್ಕೆ ಕಾರಣವಾಗಿದೆ. ರಾಷ್ಟ್ರಧ್ವಜಕ್ಕೆ ಬಿಜೆಪಿ ಅವಮಾನಿಸಿದೆ. ಮಾತೃಭೂಮಿಗೆ ಗೌರವ ತೋರುವ ಹೊಸ ಆಯಾಮ ಎಂದು ಟಿಎಂಸಿ ಖಾರವಾಗಿ ಟೀಕಿಸಿದೆ.
Advertisement
ಬಿಜೆಪಿಗರು ಯಾವ ಪರಿಸ್ಥಿತಿಯಲ್ಲೂ ಪಕ್ಷದ ಹಾಗೂ ಮೋದಿಯ 'ಬ್ರಾಂಡಿಂಗ್' ಮಾಡುವ ಅವಕಾಶ ಬಿಡರು, ಶವವಾದರೂ ಸರಿಯೇ!
ಕಲ್ಯಾಣ್ ಸಿಂಗ್ರ ಮೃತದೇಹಕ್ಕೆ ಹೊದಿಸಿದ್ದ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜ ಹಾಕುವ ಮೂಲಕ ರಾಷ್ಟ್ರಧ್ವಜದ ಮೇಲಿರುವ ತಮ್ಮ ಸುಪ್ತದ್ವೇಷ ಹೊರಹಾಕಿ ಅವಮಾನಿಸಿದ್ದಾರೆ @JPNadda.
ಬಿಜೆಪಿಯ ನಕಲಿ ದೇಶಭಕ್ತಿ ಅನಾವರಣಗೊಂಡಿದೆ. pic.twitter.com/hiKARwfDgs
— Karnataka Congress (@INCKarnataka) August 22, 2021
Advertisement
ನಕಲಿ ದೇಶಭಕ್ತಿ ಅನಾವರಣ ಎಂದ ಕಾಂಗ್ರೆಸ್: ಬಿಜೆಪಿಗರು ಯಾವ ಪರಿಸ್ಥಿತಿಯಲ್ಲೂ ಪಕ್ಷದ ಹಾಗೂ ಮೋದಿಯ ‘ಬ್ರಾಂಡಿಂಗ್’ ಮಾಡುವ ಅವಕಾಶ ಬಿಡರು, ಶವವಾದರೂ ಸರಿಯೇ! ಕಲ್ಯಾಣ್ ಸಿಂಗ್ರ ಮೃತದೇಹಕ್ಕೆ ಹೊದಿಸಿದ್ದ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜ ಹಾಕುವ ಮೂಲಕ ರಾಷ್ಟ್ರಧ್ವಜದ ಮೇಲಿರುವ ತಮ್ಮ ಸುಪ್ತದ್ವೇಷ ಹೊರಹಾಕಿ ಜೆ.ಪಿ.ನಡ್ಡಾ ಅವಮಾನಿಸಿದ್ದಾರೆ. ಬಿಜೆಪಿಯ ನಕಲಿ ದೇಶಭಕ್ತಿ ಅನಾವರಣಗೊಂಡಿದೆ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!
Advertisement
Insult to national flag-new way to respect motherland? pic.twitter.com/GebqQGxHjf
— Sukhendu Sekhar Ray (@Sukhendusekhar) August 22, 2021
Advertisement
ಭಾರತದ ತ್ರಿವರ್ಣ ಧ್ವಜದ ಮೇಲೆ ರಾಜಕೀಯ ಪಕ್ಷವೊಂದರ ಬಾವುಟ ಇರಿಸೋದು ಸರಿಯೇ? ಈ ಫೋಟೋ ನೋಡಿದ ಮೇಲೆ ಯಾವುದೋ ಒಂದು ಪಕ್ಷದ ಧ್ವಜ ರಾಷ್ಟ್ರ ಧ್ವಜಕ್ಕಿಂತ ದೊಡ್ಡದು ಆಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ ಎಂದು ಯುಥ್ ಕಾಂಗ್ರೆಸ್ ಅಧಕ್ಷ ಬಿ.ವಿ.ಶ್ರೀನಿವಾಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೋವಿಡ್ ಕಾಲಘಟ್ಟದಲ್ಲಿ ಹೊಸ ಮನ್ವಂತರ – ಇಂದಿನಿಂದ ರಾಜ್ಯದಲ್ಲಿ ಶಾಲೆ-ಕಾಲೇಜು ಓಪನ್