ಡಿಜೆ ಹಳ್ಳಿಯ ದರ್ಗಾದಲ್ಲಿ ಬೆಂಕಿ ಅವಘಡ

Advertisements

ಬೆಂಗಳೂರು: ಡಿ.ಜೆ ಹಳ್ಳಿಯ ದರ್ಗಾದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.

Advertisements

ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ಆಕಸ್ಮಿಕವಾಗಿ ದರ್ಗಾದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ದರ್ಗಾದಲ್ಲಿದ್ದ ಪೂಜೆ ಸಾಮಗ್ರಿಗಳಿಗೆ ಬೆಂಕಿಗೆ ಹೊತ್ತಿಕೊಂಡಿದೆ. ಈ ವೇಳೆ ಯಾರಿಗೂ ಯಾವುದೇ ರೀತಿಯ ಪ್ರಾಣಪಾಯವಾಗಿಲ್ಲ. ಇದನ್ನೂ ಓದಿ: ಹಿಂದುಳಿದ ವರ್ಗದ ಯುವಕರು ಮೃತಪಟ್ಟಾಗ ಸಿಎಂ ಆಗಿದ್ದ ಸಿದ್ದರಾಮಯ್ಯ ಬರಲೇ ಇಲ್ಲ: ಸುನೀಲ್ ಕುಮಾರ್

Advertisements

ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.

ಕಾರಣವೇನು?
ಬ್ರೆಜರ್ ಟೌನ್ ಬಳಿಯ ಟ್ಯಾನಿ ರಸ್ತೆಯಲ್ಲಿರೋ ಮಸ್ತಾನಿ ದರ್ಗಾ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಆದರೆ ಈ ಕುರಿತು ಸಂಪೂರ್ಣ ಮಾಹಿತಿ ತಿಳಿದುಬಂದಿಲ್ಲ.

Advertisements

Live Tv

Advertisements
Exit mobile version