ಸಾರ್ವಜನಿಕ ಸ್ಥಳದಲ್ಲಿ ನಮಾಜ್‌ – 1,700 ಮುಸ್ಲಿಂ ಮುಖಂಡರ ವಿರುದ್ಧ ಕೇಸ್‌

Public TV
1 Min Read
namaz
ಸಾಂದರ್ಭಿಕ ಚಿತ್ರ

ಲಕ್ನೋ: ಉತ್ತರ ಪ್ರದೇಶದ (Uttar Pradesh) ಕಾಸ್ಪುರ ಹಾಗೂ ಅಲೀಗಢ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅಲ್ವಿದಾ ಹಾಗೂ ಈದ್- ಉಲ್-ಫಿತ್ (Eid namaz) ಅಂಗವಾಗಿ ನಮಾಜ್‌ ಮಾಡಿದ 1,700 ಮಂದಿ ಅಪರಿಚಿತರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿಷೇಧಾಜ್ಞೆ ನಡುವೆಯೂ ಏಪ್ರಿಲ್‌ 22ರಂದು ನಗರದ ಬೆನಜಬಾರ್‌ನಲ್ಲಿರುವ ಜಜ್ಮೌ ಈದ್ಗಾ, ಬಾಬುಪುರ್ವಾ ಈದ್ಗಾ ಮತ್ತು ಬದಿ ಈದ್ಗಾದ ಹೊರಭಾಗದ ರಸ್ತೆಯಲ್ಲಿ ನಮಾಜ್ ಮಾಡಲಾಗಿತ್ತು. ಹಾಗಾಗಿ ಜಜ್ಮೌ ಪೊಲೀಸ್ ಠಾಣೆಯಲ್ಲಿ 200, ಬೇಗಂಪುರವಾ ಪೊಲೀಸ್ ಠಾಣೆಯಲ್ಲಿ 40 ರಿಂದ 50 ಹಾಗೂ ಬೆನಜ್‌ಹಬರ್‌ ಪೊಲೀಸ್ ಠಾಣೆಯಲ್ಲಿ ಸುಮಾರು 1,500 ಮಂದಿ ವಿರುದ್ಧ ಎಫ್‌ಐಆರ್‌ (FIR) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ನಾಗರಹಾವು ಆದ್ರೆ ಸೋನಿಯಾ ಗಾಂಧಿ ವಿಷಕನ್ಯೆನಾ – ಯತ್ನಾಳ್ ಪ್ರಶ್ನೆ

Mumbai Police

ಇದಕ್ಕೆ ಪ್ರತಿಕ್ರಿಯಿಸಿರುವ ಬೇಗಂಪುರವಾ ಪೊಲೀಸ್‌ ಠಾಣೆ ಉಸ್ತುವಾರಿ ಬ್ರಿಜೇಶ್‌ ಕುಮಾರ್‌, ಈದ್ ಹಬ್ಬಕ್ಕೂ ಮುನ್ನ ಶಾಂತಿ ಸಮಿತಿ ಸಭೆ ನಡೆಸಲಾಗಿತ್ತು. ಸಾರ್ವಜನಿಕ ಸ್ಥಳಗಳು, ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ನಮಾಜ್‌ ಮಾಡದಂತೆ ಸೂಚಿಸಲಾಗಿತ್ತು. ಇದರ ಹೊರತಾಗಿಯೂ ಅಂದು ರಸ್ತೆಯಲ್ಲೇ ಜಮಾಯಿಸಿ ನಮಾಜ್‌ ಮಾಡಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: Breaking -ನಟಿ ಜಿಯಾ ಖಾನ್ ಸಾವಿನ ಪ್ರಕರಣ : ಸ್ನೇಹಿತ ಸೂರಜ್ ಪಾಂಚೋಲಿ ನಿರಪರಾಧಿ

ಈ ಹಿನ್ನೆಲೆಯಲ್ಲಿ ಈದ್ಗಾ ಸಮಿತಿ ಸದಸ್ಯರೂ ಸೇರಿದಂತೆ 1,700 ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 186 (ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು), 188 (ಸೆಕ್ಷನ್ -144 ಉಲ್ಲಂಘಿಸಿ ಗುಂಪುಗೂಡುವುದು), 283 (ಜನಸಂದಣಿ ರಸ್ತೆ ತಡೆಯುವುದು), 341 (ಅಡಚಣೆ ಉಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕ ಓಂವೀರ್ ಸಿಂಗ್ ತಿಳಿಸಿದ್ದಾರೆ.

Share This Article