– ರಾಹುಲ್ ಗಾಂಧಿ ಅಬ್ನಾರ್ಮಲ್ ಎಂದ ಬಿಜೆಪಿ ಶಾಸಕ
ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ನಾಗರಹಾವಿಗೆ ಹೋಲಿಸುತ್ತಾರೆ. ಹಾಗಿದ್ರೆ ಸೋನಿಯಾ ಗಾಂಧಿ (Sonia Gandhi) ವಿಷಕನ್ಯೆನಾ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಪ್ರಶ್ನಿಸಿದರು.
Advertisement
ಮೋದಿ ವಿಷದ ಹಾವು ಎಂಬ ಖರ್ಗೆಯವರ (Mallikarjun Kharge) ಹೇಳಿಕೆ ಕುರಿತಾಗಿ ಕೊಪ್ಪಳದ (Koppal) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾಂಗ್ರೆಸ್ (Congress) ಅಧ್ಯಕ್ಷರಾಗಿ ದೇಶದ ಪ್ರಧಾನಿಯನ್ನು ಹೇಗೆ ಮಾತನಾಡಿಸಬೇಕು ಎಂಬುದು ಗೊತ್ತಿಲ್ಲ. ಇವತ್ತು ಮೋದಿಯವರನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಅಮೆರಿಕಾ (America) ಒಂದು ಕಾಲದಲ್ಲಿ ಭಾರತೀಯರಿಗೆ ವೀಸಾ ಕೊಡುತ್ತಿರಲಿಲ್ಲ. ಆದರೆ ಇವತ್ತು ನಮ್ಮ ಪ್ರಧಾನ ಮಂತ್ರಿಯನ್ನು ಕೆಂಪು ಹಾಸಿಗೆ ಮೂಲಕ ಸ್ವಾಗತ ಮಾಡಿ ಹೆಗಲ ಮೇಲೆ ಕೈ ಹಾಕಿಕೊಂಡು ಹೋಗುವಂತಹ ವಿಶ್ವ ನಾಯಕರಾಗಿದ್ದಾರೆ. ಅಂತಹವರನ್ನು ನಾಗರ ಹಾವಿಗೆ ಹೋಲಿಸಿದ್ದಾರೆ. ಸೋನಿಯಾ ಗಾಂಧಿ ಚೀನಾ (China) ಮತ್ತು ಪಾಕಿಸ್ತಾನದ (Pakistan) ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನದಿಂದ ಎಲ್ಲರೂ ಬಂದು ಮೋದಿಯವರನ್ನು ಇಳಿಸಬೇಕು ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಖರ್ಗೆಯವರ ಹೇಳಿಕೆಯಿಂದ ನಮ್ಮ ದೇಶದ ಪ್ರಧಾನಿಯನ್ನು ಅಪಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಮ್ಮೂರಲ್ಲಿ ಬಿಜೆಪಿಯವರೇ ಗಲಾಟೆ ಮಾಡಿಸಿದ್ದಾರೆ: ಸಿದ್ದರಾಮಯ್ಯ
Advertisement
Advertisement
ರಾಹುಲ್ ಗಾಂಧಿ (Rahul Gandhi) ಬಂದಲ್ಲೆಲ್ಲಾ ಕಾಂಗ್ರೆಸ್ ದಬದಬಾ ಎಂದು ಬೀಳುತ್ತವೆ. ರಾಹುಲ್ ಗಾಂಧಿ ವಿಜಯಪುರಕ್ಕೆ ಬಂದ ದಿನವೇ ನಾನು ಗೆದ್ದುಬಿಟ್ಟೆ. ಅವರೇ ನಮ್ಮ ಸ್ಟಾರ್ ಪ್ರಚಾರಕರು. ಬಾಬಾ ಸಾಹೆಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಅವರ ಶವ ಸಂಸ್ಕಾರಕ್ಕೆ ಜಾಗ ಕೊಡದೆ ಕಾಂಗ್ರೆಸ್ ತಮ್ಮ ಕುಟುಂಬದವರಿಗೆ ಸಮಾಧಿ ಕಟ್ಟಿದ್ದಾರೆ. ದೆಹಲಿಯಲ್ಲಿ ಕಾಣೋದು ಕೇವಲ ಎರಡೇ ಗೋರಿ. ಒಂದು ಆದಿಲ್ ಶಾಹಿ ಗೋರಿ ಮತ್ತೊಂದು ಗಾಂಧಿ ಗೋರಿ. ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ ಅಬ್ನಾರ್ಮಲ್ ಆದರೆ, ಇಲ್ಲಿ ಟಿಕ್ಕ ರಾಯರೆಡ್ಡಿ ಹುಚ್ಚ. ಅವರು ನಮ್ಮ ಸಮಾಜಕ್ಕೆ ಸಿಗುವ ಮೀಸಲಾತಿಯನ್ನು ವಿರೋಧ ಮಾಡಿದ್ದಾರೆ. ಅದಕ್ಕಾಗಿ ನಾವು ಅವರನ್ನು ವಿರೋಧಿಸುತ್ತೇವೆ. ನಡುರಾತ್ರಿ ಎದ್ದು ಕೇಳಿದರೂ ರಾಹುಲ್ ಗಾಂಧಿ ಹತ್ತು ಲಕ್ಷ ಕೊಡುತ್ತೇನೆ ಎಂದಿದ್ರು ಅಂತಾ ರಾಯರೆಡ್ಡಿ ಹೇಳುತ್ತಾರೆಂದು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಪ್ರೀತಂ ಗೌಡ ಹೇಳಿಕೆ ಖಂಡನೀಯ – ಸ್ವಪಕ್ಷದ ಶಾಸಕನ ವಿರುದ್ಧ ಅಶ್ವಥ್ ನಾರಾಯಣ್ ಗರಂ
Advertisement
ಕೊರೊನಾ ವ್ಯಾಕ್ಸಿನ್ ಹಾಕಿದ್ರೆ ಮಕ್ಕಳಾಗಲ್ಲ ಎಂದಿದ್ದು ಕಾಂಗ್ರೆಸ್‌ನವರೇ. ಆದರೆ ಮೊದಲು ಓಡಿ ವ್ಯಾಕ್ಸಿನ್ ಹಾಕಿಸಿಕೊಂಡರು. ಜನರ ಜೀವ ಹೋದರೂ ಪರವಾಗಿಲ್ಲ, ಮೋದಿಯವರ ಹೆಸರು ಕೆಡಿಸಬೇಕು ಎನ್ನುತ್ತಾರೆ. ನಾವು ಹಿಂದೂ-ಮುಸ್ಲಿಂ ಎಂದು ದ್ವೇಷ ಮಾಡಿಲ್ಲ. ಆದ್ದರಿಂದ ಪಾಕಿಸ್ತಾನಕ್ಕೂ ವ್ಯಾಕ್ಸಿನ್ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿ 130 ಸೀಟ್ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಡಿಸ್ಚಾರ್ಜ್
ಲಿಂಗಾಯತರ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ನೈತಿಕತೆಯೇ ಇಲ್ಲ. ಸಿದ್ದರಾಮಯ್ಯನವರು (Siddaramaiah) ಲಿಂಗಾಯತರು ಭ್ರಷ್ಟರು ಎಂದು ಹೇಳಿದ್ದಾರೆ. ಹಾಗಾದರೆ ಇಡೀ ಸಮುದಾಯವೇ ಭ್ರಷ್ಟರಾ? ಎಲ್ಲಾ ಸಮುದಾಯದ ಮೀಸಲಾತಿಗೆ ಹೋರಾಡಿದ ವ್ಯಕ್ತಿ ನಾನು. ಒಂದು ಸಮುದಾಯದಿಂದ ಆರಂಭವಾದ ಹೋರಾಟಕ್ಕೆ ಎಲ್ಲ ಸಮುದಾಯಕ್ಕೂ ಮೀಸಲಾತಿ ನೀಡಿದ್ದು ಬಿಜೆಪಿ (BJP) ಸರ್ಕಾರ. ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಈ ಸಮುದಾಯದ ಮೀಸಲಾತಿಯನ್ನು ರದ್ದು ಮಾಡುತ್ತೇನೆ ಎಂದು ಡಿಕೆಶಿ ಹೇಳುತ್ತಾರೆ. ನಿಮಗೆ ಧಮ್ ಇದ್ರೆ ಲಿಂಗಾಯತರೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿ ಎಂದು ಸವಾಲೆಸೆದರು. ಇದನ್ನೂ ಓದಿ: ಮೋದಿ ರೋಡ್ ಶೋಗೆ ಸಿದ್ಧವಾಗಿದೆ ಸ್ಪೆಷಲ್ ಬುಲೆಟ್ ಪ್ರೂಫ್ ವಾಹನ