ಹೆಲ್ಸಿಂಕಿ: ಫಿನ್‌ಲ್ಯಾಂಡ್‌ನ ಮಹಿಳಾ ಪ್ರಧಾನಿ 36 ವರ್ಷದ ಸನ್ನಾ ಮರಿನ್ ತಮ್ಮ ಸೆಲೆಬ್ರಿಟಿ ಸ್ನೇಹಿತರೊಂದಿಗಿನ ಪಾರ್ಟಿಯಲ್ಲಿ ಮಾದಕ ನೃತ್ಯ ಮಾಡಿದ್ದು, ಈ ವೀಡಿಯೋ ಈಗ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.
ಸನ್ನಾ ಮರಿನ್ ಅವರ ಮಾದಕ ನೃತ್ಯದ ವೀಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಇದರಿಂದ ಅವರು ಮಾದಕ ವಸ್ತುಗಳನ್ನು ಬಳಕೆ ಮಾಡಿರುವುದಾಗಿ ಡ್ರಗ್ ಪರೀಕ್ಷೆಗೆ ಒಳಗಾಗುವಂತೆ ಇತರರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರಿಯತಮೆಯ ಮುತ್ತು ತಂದ ಆಪತ್ತು – ಜೈಲಿನಲ್ಲೇ ಪ್ರಿಯಕರ ಸಾವು
Advertisement
Finland’s Prime Minister @MarinSanna is in the headlines after a video of her partying was leaked today.
She has previously been criticized for attending too many music festivals & spending too much on partying instead of ruling.
The critics say it’s not fitting for a PM. pic.twitter.com/FbOhdTeEGw
— Visegrád 24 (@visegrad24) August 17, 2022
Advertisement
ಇತ್ತೀಚೆಗೆ ಪ್ರಧಾನಿ ಅವರು ಕೋವಿಡ್‌ಗೆ ತುತ್ತಾಗಿದ್ದರು. ಹೀಗಿದ್ದೂ ಅವರು ಕ್ವಾರಂಟೈನ್‌ನಲ್ಲಿ ಇರದೇ ಹೊರಗೆ ಸುತ್ತಾಡುತ್ತಿದ್ದರು ಎಂದು ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಮತ್ತೊಂದು ಖಾಸಗಿ ವೀಡಿಯೋ ಸೋರಿಕೆಯಾಗಿದೆ. ಸದ್ಯ ಖಾಸಗಿ ವೀಡಿಯೋ ಪ್ರಧಾನಿಯವರ ಮುಜುಗರಕ್ಕೆ ಕಾರಣವಾಗಿದೆ.
Advertisement
Advertisement
ವೀಡಿಯೋದಲ್ಲಿ ಕಂಡುಬಂದಿರುವ ಗಣ್ಯ ವ್ಯಕ್ತಿಗಳಲ್ಲಿ ಫಿನ್ನಿಷ್ ಗಾಯಕಿ ಅಲ್ಮಾ ಮತ್ತು ಅವರ ಸಹೋದರಿ ಅನ್ನಾ, ರಾಪರ್ ಪೆಟ್ರಿ ನೈಗಾರ್ಡ್, ಟಿವಿ ಹೋಸ್ಟ್ ಟಿನ್ನಿ ವಿಕ್ಸ್‌ಟ್ರೋಮ್, ರೇಡಿಯೊ ಹೋಸ್ಟ್ ಕರೋಲಿನಾ ಟುಮಿನೆನ್ ಮತ್ತು ಅವರದ್ದೇ ಆದ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಸಂಸದರು ಇದ್ದಾರೆ. ವಿಶೇಷವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಫಿನ್‌ಲ್ಯಾಂಡ್ NATO (ನ್ಯಾಟೋ)ಗೆ ಸೇರಲು ತಟಸ್ಥ ಧೋರಣೆ ತಾಳಿದ್ದು, ರಷ್ಯಾದೊಂದಿಗೆ ಸೆಣಸಾಡುತ್ತಿದೆ. ಈ ಹೊತ್ತಿನಲ್ಲಿ ಪ್ರಧಾನಿಯವರ ನಡವಳಿಕೆಯು ನಾಯಕರಿಗೆ ಶೋಭಾಯಮಾನವಲ್ಲ ಎಂಬ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿ: ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಬಾಂಧವ್ಯ ಬಯಸುತ್ತೆ: ಪಾಕ್ ಪ್ರಧಾನಿ
ಇತ್ತೀಚೆಗೆ ಸ್ಥಳೀಯ ಮಾಧ್ಯಮವೊಂದು ಮರಿನ್ ಅವರನ್ನು ಶಾಂತ ರಾಜಕಾರಣಿ ಎಂದು ಹೊಗಳಿತ್ತು. ಆದರೆ ಇತ್ತೀಚಿನ ಅವರ ನಡವಳಿಕೆಯಿಂದ ಎಲ್ಲೆಡೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಮರಿನ್, ಇದರಲ್ಲಿ ಮುಚ್ಚಿಡಲು ಏನೂ ಇಲ್ಲ. ನಾನು ಮಾದಕ ದ್ರವ್ಯವನ್ನೂ ಸೇವಿಸಿಲ್ಲ. ನೃತ್ಯ ಮಾಡಿದ್ದೇನೆ, ಹಾಡಿದ್ದೇನೆ. ಕಾನೂನು ಬದ್ಧ ಕೆಲಸಗಳನ್ನೇ ಪಾರ್ಟಿಯಲ್ಲಿ ಮಾಡಿದ್ದೇನೆ. ಆದರೆ ಹೆಚ್ಚು ಕುಡಿದಿರಲೂ ಇಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಮರಿನ್ 2019 ರಲ್ಲಿ ತಮ್ಮ 34ನೇ ಹರೆಯದಲ್ಲಿ ಪ್ರಧಾನಿಯಾಗಿದ್ದು ವಿಶ್ವದ ಅತ್ಯಂತ ಕಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ.