ಹೈದರಾಬಾದ್: ಫುಡ್ ಪ್ರಿಯರಿಗೆ ಹೈದರಾಬಾದ್ ರೆಸ್ಟೋರೆಂಟ್‍ವೊಂದು ಹೊಸ ಚಾಲೆಂಜ್ ನೀಡಿದೆ. ಹೌದು, 30 ನಿಮಿಷದಲ್ಲಿ ಯಾರಾದರೂ ‘ಬಾಹುಬಲಿ ಥಾಲಿ’ ತಿಂದು ಮುಗಿಸಿದರೆ, ಅವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ನಗರದ ಪ್ರಸಿದ್ಧ ರೆಸ್ಟೋರೆಂಟ್‍ಗಳಲ್ಲಿ ಒಂದಾದ ‘ನಾಯ್ಡು ಗರಿ ಕುಂದಾ ಬಿರಿಯಾನಿ’ಯು ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಗೆ 30 ಕ್ಕೂ ಹೆಚ್ಚು ಐಟಂ ಇರುವ ಬಾಹುಬಲಿ ಥಾಲಿಯನ್ನು ನೀಡುತ್ತದೆ. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಮಾಡುವಂತಿಲ್ಲ
ಈ ಕುರಿತಂತೆ ಪ್ರತಿಕ್ರಿಯಿಸಿರುವ ರೆಸ್ಟೋರೆಂಟ್‍ನ ಸಿಬ್ಬಂದಿ ಕೀರ್ತಿ ಅವರು, ಬಾಹುಬಲಿ ಥಾಲಿ ಇಲ್ಲಿ ಬಹಳ ಫೇಮಸ್ ಆಗಿದ್ದು, ನಾವು ಥಾಲಿಯಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಸ್ಟಾರ್ಟರ್‌ಗಳು, ಮಾಂಸಾಹಾರಿ ಬಿರಿಯಾನಿ, ಫ್ರೈಡ್ ರೈಸ್ ಮತ್ತು ಕೂಲ್ ಡ್ರಿಂಕ್ಸ್‌ಗಳನ್ನು ಒಳಗೊಂಡಂತೆ 30ಕ್ಕೂ ಹೆಚ್ಚು ಐಟಂಗಳನ್ನು ಜೋಡಿಸಿ ನೀಡುತ್ತೇವೆ. ಇದರ ಹಿಂದಿನ ಉದ್ದೇಶವೆಂದರೆ ಕೆಲವರು ಕಡಿಮೆ ಫುಡ್ ಐಟಂಗಳನ್ನು ಮಾತ್ರ ಇಷ್ಟಪಡುತ್ತಾರೆ. ಆದರೆ ರೆಸ್ಟೋರೆಂಟ್‍ಗೆ ಬರುವ ಪ್ರತಿಯೊಬ್ಬರು ಎಲ್ಲಾ ಫುಡ್‍ಗಳನ್ನು ಟೆಸ್ಟ್ ಮಾಡಬೇಕು ಎಂಬುವುದೇ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಿಪ್‍ಸ್ಟಿಕ್, ಕಾಸ್ಟ್ಲಿ ಮೊಬೈಲ್ ತಗೋತಿರಾ, ಫೀಸ್ ಕಟ್ಟೋಕೆ ಆಗಲ್ವಾ?- ವಿವಿ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು
ಈ ರೆಸ್ಟೋರೆಂಟ್‍ನಲ್ಲಿ ಒಂದು ಥಾಲಿಯ ಬೆಲೆ 1,800 ರೂ. ಎಂದು ಅಂದಾಜಿಸಲಾಗಿದೆ. ಕುಕಟ್‍ಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿ (ಕೆಪಿಎಚ್‍ಬಿ) ಶಾಖೆಯಲಿ ಹೊಸದಾಗಿ ತೆರೆಯಲಾಗಿರುವ ಈ ರೆಸ್ಟೋರೆಂಟ್‍ನಲ್ಲಿ ಬಾಹುಬಾಲಿ ಥಾಲಿ ಚಾಲೆಂಜ್ ಅನ್ನು ಇಲ್ಲಿಯವರೆಗೂ ಸುಮಾರು 3,000 ಕ್ಕೂ ಹೆಚ್ಚು ಗ್ರಾಹಕರು ಪ್ರಯತ್ನಿಸಿದ್ದು, ಅವರಲ್ಲಿ ಇಬ್ಬರು ಮಾತ್ರ ತಲಾ 1 ಲಕ್ಷ ನಗದು ಬಹುಮಾನವನ್ನು ಗೆದ್ದಿದ್ದಾರೆ.