ಕೊನೆಗೂ ಕ್ಯಾಮೆರಾ ಕಣ್ಣಿಗೆ ಸಿಕ್ಕ ‘Bigg Boss Kannada’ ಶೋ ಡೈರೆಕ್ಟರ್

Public TV
2 Min Read
Bigg boss 3 1

ನ್ನಡದ ಬಿಗ್ ಬಾಸ್ ಶೋ (Bigg Boss Kannada) ನಿರ್ದೇಶಕರು ಈ ಬಾರಿ ಬದಲಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಶೋವನ್ನು ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಆಗಿದ್ದ ಪರಮೇಶ್ ಗುಂಡ್ಕಲ್ ಅವರೇ ನಿರ್ದೇಶನ ಮಾಡುತ್ತಿದ್ದರು. ಪ್ರೊಮೋದಿಂದ ಹಿಡಿದು, ಅಲ್ಲಿ ನಡೆಯುವ ಟಾಸ್ಕ್ ತನಕವೂ ಅವರ ನಿರ್ದೇಶನದಲ್ಲೇ (Director) ತಯಾರಾಗುತ್ತಿದ್ದವು. ಈ ಬಾರಿ ಆ ಎಲ್ಲ ಜವಾಬ್ದಾರಿಯನ್ನು ಬೇರೆಯವರು ವಯಿಸಿಕೊಂಡಿದ್ದಾರೆ.

Bigg boss 2 1

ಪರಮೇಶ್ ಗುಂಡ್ಕಲ್ ಅವರು ಜಿಯೋ ಸಿನಿಮಾದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಥಾನವನ್ನು ಪ್ರಶಾಂತ್ ನಾಯಕ್ ವಹಿಸಿಕೊಂಡಿದ್ದಾರೆ. ಆದರೆ, ಬಿಗ್ ಬಾಸ್ ಸೀಸನ್ 10 ಅನ್ನು ಪ್ರಕಾಶ್ (Prakash) ಎನ್ನುವವರು ನಿರ್ದೇಶನ ಮಾಡಲಿದ್ದಾರೆ. ಕಲರ್ಸ್ ವಾಹಿನಿಯ ಅನೇಕ ರಿಯಾಲಿಟಿ ಶೋಗಳಿಗೆ ಇವರೇ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

Bigg boss 1 1

ಕಲರ್ಸ್ ವಾಹಿನಿಯಲ್ಲಿ ಮೂಡಿ ಬರುತ್ತಿರುವ ರಾಜಾ ರಾಣಿ, ನಮ್ಮಮ್ಮ ಸೂಪರ್ ಸ್ಟಾರ್ ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ದೇಶನ ಮಾಡಿರುವ ಪ್ರಕಾಶ್, ಈ ಬಾರಿ ಬಿಗ್ ಬಾಸ್ ಶೋ ನಿರ್ದೇಶನ ಮಾಡಲು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಈವರೆಗೂ ಬಿಗ್ ಬಾಸ್ ಪ್ರೊಮೋಗಳೆಲ್ಲ ಇವರ ನಿರ್ದೇಶನದಲ್ಲೇ ಮೂಡಿ ಬಂದಿವೆ.

Bigg Boss 1

ಈ ಬಾರಿಯ ಬಿಗ್ ಬಾಸ್ ಹತ್ತು ಹಲವು ಕಾರಣಗಳಿಂದಾಗಿ ವಿಶೇಷ ಅನಿಸಿದೆ. ಕಾರ್ಯಕ್ರಮವು ಹೇಗೆ ವಿಭಿನ್ನವಾಗಿ ರೂಪಿತವಾಗುತ್ತಿದೆಯೋ, ಹಾಗೆಯೇ ಬಿಗ್ ಬಾಸ್ ಮನೆ ಕೂಡ ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹಲವು ವರ್ಷಗಳ ಕಾಲ ಬಿಗ್ ಬಾಸ್ ಮನೆಯನ್ನು ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಸಣ್ಣ ಮಟ್ಟದಲ್ಲಿ ಬದಲಾವಣೆ ಮಾಡಿಕೊಂಡು ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಈ ವರ್ಷ ಎಲ್ಲವೂ ಬದಲಾಗಿದೆ.

 

ಈ ಬಾರಿ ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ನಡೆಯುತ್ತಿಲ್ಲ. ಬದಲಾಗಿ ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ಮನೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಇದು ಭಾರತದಲ್ಲೇ ಅತೀ ದೊಡ್ಡ ಬಿಗ್ ಬಾಸ್ ಮನೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಈ ವಿಷಯದ ಕುರಿತು ಮಾತನಾಡಿ, ವಿಸ್ತೀರ್ಣದ ವಿಷಯದಲ್ಲಿ ಇದು ದೊಡ್ಡ ಮನೆ ಎಂದರು.

Web Stories

Share This Article