ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮುಖಾಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಕೇಂದ್ರ ಸಚಿವ ಅಮಿತ್ ಶಾ (Amitshah) ಅವರನ್ನು ಭೇಟಿಯಾಗಿದ್ದಾರೆ.
ಇಂದು ಬೆಳಗ್ಗೆ ಅಮಿತ್ ಶಾ ಜೊತೆಗೆ ಬಿಜೆಪಿ (BJP) ನಾಯಕರ ಸಭೆ ಹಿನ್ನೆಲೆಯಲ್ಲಿ ಬೆಳಗ್ಗೆಯೇ ರಮೇಶ್ ಜಾರಕಿಹೊಳಿಯವರು ಸಿಎಂ ಅವರನ್ನು ಭೇಟಿಯಾದ್ರು. ಸಿಎಂ ಅವರ ಆರ್ ಟಿ ನಗರದ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ರು. ಈ ಮೂಲಕ ಸಚಿವ ಸ್ಥಾನ ಪಡೆಯುವ ನಿಟ್ಟಿನಲ್ಲಿ ರಮೇಶ್ ಅಂತಿಮ ಕಸರತ್ತು ನಡೆಸಿದ್ದರು.
Advertisement
Advertisement
ಅಮಿತ್ ಶಾ ಭೇಟಿಗೆಂದು ಸಿಎಂ ಹಾಗೂ ಕಾರಜೋಳ ತಾಜ್ ವೆಸ್ಟೆಂಡ್‍ಗೆ ತೆರಳುತ್ತಿದ್ದಂತೆಯೇ ಅವರ ಜೊತೆಯೇ ರಮೇಶ್ ಜಾರಕಿಹೊಳಿ (Ramesh Jarakiholi) ಕೂಡ ಹೊರಟಿದ್ದರು. ಶಾ ಭೇಟಿಗೂ ಮುನ್ನ ತಮ್ಮ ಸರ್ಕಾರಿ ನಿವಾಸಕ್ಕೆ ಸಿಎಂ ಬೊಮ್ಮಾಯಿ ತೆರಳಿದಾಗ ಅಲ್ಲಿಯೂ ರಮೇಶ್ ಜಾರಕಿಹೊಳಿ ಜೊತೆಯೇ ತೆರಳಿದ್ದರು. ಇದನ್ನೂ ಓದಿ: ಈಗಷ್ಟೇ ಮದುವೆಯಾಗಿದೆ, ಮಕ್ಕಳಾಗಿಲ್ಲ ಅಂದ್ರೆ ಹೇಗೆ ಅಂದಿದ್ಯಾಕೆ ಈಶ್ವರಪ್ಪ..?
Advertisement
Advertisement
ಸಚಿವ ಸ್ಥಾನ ಪಡೆಯಲೇಬೇಕೆಂಬ ಪಣತೊಟ್ಟ ಗೋಕಾಕ್ ಸಾಹುಕಾರ್ ಬೆಳಗ್ಗೆಯಿಂದ ಆರ್ ಟಿ ನಗರ ನಿವಾಸ, ಬಳಿಕ ರೇಸ್‍ಕೋರ್ಸ್ ನಿವಾಸ ಹೀಗೆ ಸಿಎಂ ಹಿಂದೆ ಹಿಂದೆ ಸುತ್ತಿ ಕೊನೆಗೆ ಖಾಸಗಿ ಹೊಟೇಲಿಗೆ ಸಿಎಂ ಜೊತೆ ಹೋಗಿ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದರು. ಇದನ್ನೂ ಓದಿ: ಟಿಕೆಟ್‍ಗಾಗಿ ಕಾಂಗ್ರೆಸ್ ಕಾರ್ಯಕರ್ತರ ಸಮರ- ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭುಗಿಲೆದ್ದ ಆಕ್ರೋಶ
ಅಮಿತ್ ಶಾ ಜೊತೆ ಭೇಟಿಗೂ ಮುನ್ನ ಸಿಎಂ ತಮ್ಮ ರೇಸ್‍ಕೋರ್ಸ್ ನಿವಾಸದಲ್ಲಿ ನಾಯಕರೆಲ್ಲರೂ ಸೇರಿ ಪ್ರತ್ಯೇಕ ಸಭೆ ನಡೆಸಿದ್ದರು. ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ (Arun Singh), ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ (Nalin kumar Kateel), ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಕೆ. ಗೋಪಾಲಯ್ಯ ಉಪಸ್ಥಿತರಿದ್ದರು.