ಮಡೆನೂರು ಮನುಗೆ ಹೇರಿದ್ದ ಅಸಹಕಾರ ತೆರವು – ಫಿಲ್ಮ್ ಚೇಂಬರ್ ವಾರ್ನಿಂಗ್

Public TV
1 Min Read
madenuru manu actor

ಕಾಮಿಡಿ ನಟ ಮಡೆನೂರು ಮನು (Madenuru Manu) ಅತ್ಯಾಚಾರ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಆಚೆ ಬಂದಿದ್ದಾರೆ. ಜೈಲು ಸೇರಿದ ಮೇಲೆ ಅವರ ಮೇಲೆ ಸಾಕಷ್ಟು ಆರೋಪ ಕೇಳಿ ಬಂದಿದ್ದವು. ಸ್ಯಾಂಡಲ್‍ವುಡ್‍ನ ನಟರ ಸಾವಿನ ಬಗ್ಗೆ ಮಾತನಾಡಿದ ಆಡಿಯೋ ವೈರಲ್ ಆಗಿತ್ತು. ಹಿನ್ನೆಲೆ ಫಿಲ್ಮ್ ಚೇಂಬರ್‌ಗೆ (Film Chamber) ಅವರ ಅಭಿಮಾನಿಗಳು ದೂರು ನೀಡಿದ್ರು. ಕಾಮಿಡಿ ನಟನನ್ನ ಶಾಶ್ವತವಾಗಿ ಬ್ಯಾನ್ ಮಾಡುವಂತೆ ಒತ್ತಾಯಿಸಲಾಗಿತ್ತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಬಂದ ಹಿನ್ನೆಲೆ ಕಾಮಿಡಿ ನಟ ಮಡೆನೂರು ಮನು ಅವರಿಗೆ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಅಸಹಕಾರ ತೋರುವಂತೆ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿತ್ತು. ಇದೀಗ ತಮ್ಮ ತಪ್ಪಿನ ಅರಿವಾಗಿ ನಟರಿಗೆ ಕ್ಷಮೆ ಕೋರಿ ಪತ್ರ ಬರೆದಿದ್ದ ಕಾಮಿಡಿ ನಟ ಇದೀಗ ಫಿಲ್ಮ್ ಚೇಂಬರ್‌ಗೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: BBK 12 | ಈ ಬಾರಿ ಬಿಗ್‌ ಬಾಸ್‌ನಲ್ಲಿ ವಿವಾದಿತರಿಗೆ ನೋ ಎಂಟ್ರಿ?

ತಮ್ಮ ಮೇಲೆ ಹೇರಿದ್ದ ಅಸಹಕಾರವನ್ನ ತೆರುವುಗೊಳಿಸಿ, ಮುಂದಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ, ಕಿರುತೆರೆಯಲ್ಲಿ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೋರಿ ಫಿಲ್ಮ್ ಚೇಂಬರ್‌ಗೆ ಮನವಿ ಮಾಡಿದ್ದಾರೆ ಕಾಮಿಡಿ ನಟ ಮನು. ಕಾಮಿಡಿ ನಟನ ಮನವಿಯನ್ನ ಸ್ವೀಕರಿಸಿದ ಫಿಲ್ಮ್ ಚೇಂಬರ್ ಎಚ್ಚರಿಕೆ ಕೊಟ್ಟು ಮುಂದೆ ಈ ರೀತಿಯಾದ ತಪ್ಪು ಮರುಕಳಿಸಬಾರು ಎಂದು ಹೇಳಿದೆ.

ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ತೊಡಗಿಕೊಳ್ಳಬಹುದು ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇನೆ ಎಂದು ಮನು ಕೂಡಾ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: BBK 12 | ʻಬಿಗ್‌ ಬಾಸ್‌ʼ ಬಿಗ್ ಅಪ್‌ಡೇಟ್ – 12ನೇ ಸೀಸನ್‌ಗೂ ಕಿಚ್ಚನ ನಿರೂಪಣೆ ಫಿಕ್ಸ್‌

Share This Article