ಬೆಂಗಳೂರು: ರಾಜ್ಯದಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಜಟಾಪಟಿಗಳು ನಡೆಯುತ್ತಲೇ ಇವೆ. ಆದರೆ ಇವುಗಳ ಮಧ್ಯೆ ರಾಜ್ಯ ರಾಜಧಾನಿಯ ಅವ್ಯವಸ್ಥೆಗಳನ್ನು ಎಲ್ಲರೂ ಮರೆತೇ ಬಿಟ್ಟಿದ್ದಾರೆ.
ನಿತ್ಯ ಸಾವಿರಾರು ಜನ ಓಡಾಡುವ ಕೆಂಗೇರಿ-ಮೈಸೂರು ರಸ್ತೆಯಲ್ಲಿ ಗುಂಡಿಗಳ ಸರಮಾಲೆ ಕಂಡುಬಂದಿರುವ ವೀಡಿಯೋ ವೈರಲ್ ಆಗಿದೆ. ಆದರೆ ಈ ರಸ್ತೆಗಳನ್ನು ಮುಚ್ಚಲು ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಮಧ್ಯೆ ಹಗ್ಗಜಗ್ಗಾಟ ಆರಂಭವಾಗಿದೆ. ಇದನ್ನೂ ಓದಿ: ಚಡ್ಡಿ, ಪಠ್ಯ, ಧರ್ಮ ದಂಗಲ್ ಮಧ್ಯೆ ಬೆಂಗಳೂರು ಅನಾಥ – ಜನಸಾಮಾನ್ಯರಿಗೆ ಗುಂಡಿ ರಸ್ತೆ
Advertisement
Advertisement
ಕೆಂಗೇರಿ ಹಾಗೂ ಮೈಸೂರು ರಸ್ತೆ ನಮ್ಮ ಸುಪರ್ದಿಗೆ ಬರುವುದಿಲ್ಲ, ಬದಲಿಗೆ ಅದು ಬಿಎಂಆರ್‌ಸಿಎಲ್ ಸುಪರ್ದಿಯಲ್ಲಿದೆ ಎಂದು ಬಿಬಿಎಂಪಿ ಹೇಳಿದೆ.
Advertisement
ಮೆಟ್ರೋ ಕಾಮಗಾರಿ ಹಿನ್ನೆಲೆ ಕೆಂಗೇರಿ-ಮೈಸೂರು ರಸ್ತೆಯನ್ನು ಬಿಎಂಆರ್‌ಸಿಎಲ್ ಸುಪರ್ದಿಗೆ ನೀಡಲಾಗಿತ್ತು. ಆ ರಸ್ತೆಯನ್ನು ಇನ್ನೂ ಬಿಬಿಎಂಪಿ ಸುಪರ್ದಿಗೆ ನೀಡಿಲ್ಲ. ಮೆಟ್ರೋ ಕಾಮಗಾರಿ ವೇಳೆ ಅವರು ರಸ್ತೆಯನ್ನು ಅವ್ಯವಸ್ಥೆ ಮಾಡಿ ಇಟ್ಟಿದ್ದಾರೆ. ಅವರೇ ಈಗ ಆ ರಸ್ತೆಯನ್ನು ಸರಿಪಡಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಇದನ್ನೂ ಓದಿ: 105 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆದ NHAI
Advertisement
ರಸ್ತೆ ಅವ್ಯವಸ್ಥೆ ಬಗ್ಗೆ ಇಲ್ಲಿಯವರೆಗೆ ಮಾತನಾಡಿರದ ಪಾಲಿಕೆ ಮಾಧ್ಯಮದ ಕಣ್ಣಿಗೆ ಬೀಳುತ್ತಿದ್ದಂತೆ ತಮ್ಮ ತಪ್ಪೇ ಇಲ್ಲದಂತೆ ತೋರ್ಪಡಿಸುತ್ತಿದೆ. ಇದೀಗ ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಕಿತ್ತಾಟದಿಂದ ವಾಹನ ಸವಾರರು ಹೈರಾಣಾಗಿದ್ದಾರೆ.