Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಉಪನ್ಯಾಸಕರಿಲ್ಲದೇ ಪಾಠ ನಡೆಯುತ್ತಿಲ್ಲ- ಖಾಲಿ ಇರೋ ಹುದ್ದೆ ಶೀಘ್ರ ಭರ್ತಿ ಮಾಡಿ: ಎಬಿವಿಪಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಉಪನ್ಯಾಸಕರಿಲ್ಲದೇ ಪಾಠ ನಡೆಯುತ್ತಿಲ್ಲ- ಖಾಲಿ ಇರೋ ಹುದ್ದೆ ಶೀಘ್ರ ಭರ್ತಿ ಮಾಡಿ: ಎಬಿವಿಪಿ

Bengaluru City

ಉಪನ್ಯಾಸಕರಿಲ್ಲದೇ ಪಾಠ ನಡೆಯುತ್ತಿಲ್ಲ- ಖಾಲಿ ಇರೋ ಹುದ್ದೆ ಶೀಘ್ರ ಭರ್ತಿ ಮಾಡಿ: ಎಬಿವಿಪಿ

Public TV
Last updated: September 23, 2025 12:51 pm
Public TV
Share
2 Min Read
ABVP 1 1
SHARE
  • ಶೀಘ್ರವೇ ನೇಮಕಾತಿ ಆಗಿಲ್ಲ ಅಂದರೆ ರಾಜ್ಯಾದ್ಯಂತ ಹೋರಾಟ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (First Grade Colleges) ಖಾಲಿ ಇರೋ ಉಪನ್ಯಾಸಕರ ಹುದ್ದೆ (Lecture Post) ಶೀಘ್ರ ನೇಮಕಾತಿ ಮಾಡಬೇಕು ಅಂತ ಎಬಿವಿಪಿ (ABVP) ಸಂಘಟನೆ ಸರ್ಕಾರವನ್ನ ಆಗ್ರಹಿಸಿದೆ.

ಈ‌ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರೋ ಎಬಿವಿಪಿ ಶೀಘ್ರವೇ ನೇಮಕಾತಿ ಆಗಿಲ್ಲ ಅಂದರೆ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆ ಕೊಟ್ಟಿದೆ.

ರಾಜ್ಯದ 430ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೆ ಕಳೆದ ಒಂದೂವರೆ ತಿಂಗಳಿನಿಂದ ಪಾಠ ಪ್ರವಚನಗಳು ನಡೆದಿಲ್ಲದಿರುವುದು ಘನ ಸರ್ಕಾರಕ್ಕೆ ತಿಳಿಯದಿರುವ ವಿಚಾರವೇನಲ್ಲ,ಪದವಿ ವಿದ್ಯಾರ್ಥಿಗಳಿಗೆ ಸರಿಯಾದ ಪ್ರಮಾಣದಲ್ಲಿ ತರಗತಿಗಳು ನಡೆಯದೇ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುವುದು ಎಂಬ ಅರಿವಿದ್ದರೂ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳದಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಅತೀವ ಬೇಸರ ತರಿಸಿದೆ.  ಇದನ್ನೂ ಓದಿ:  ಸಿನಿಮಾ ಟಿಕೆಟ್ ದರ ಗರಿಷ್ಠ 200 ರೂ.- ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ

ಈಗಾಗಲೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ತನ್ನ ಮಧ್ಯಂತರ ಆದೇಶವನ್ನು ನೀಡಿ, ತತಕ್ಷಣ ಉಪನ್ಯಾಸಕರನ್ನು ನೇಮಕಾತಿ ಮಾಡಲು ಸೂಚಿಸಿದರೂ ಕೂಡ ಇದುವರೆಗೂ ಉಪನ್ಯಾಸಕರ ನೇಮಕಾತಿ ಸಂಬಂಧಿಸಿದಂತೆ ಯಾವುದೇ ರೀತಿಯ ಬೆಳವಣಿಗೆಗಳು ಕಂಡುಬಂದಿರುವುದಿಲ್ಲ. ಇದು ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಈ ಕೂಡಲೇ ಉಪನ್ಯಾಸಕರ ಸಮಸ್ಯೆಯನ್ನು ಬಗೆಹರಿಸುವ ಪರಿಹಾರದ ಸೂತ್ರ ಒಂದನ್ನು ರೂಪಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರನ್ನು ಒದಗಿಸಲು ಆಗ್ರಹಿಸಿ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯಾದ್ಯಂತ ತೀವ್ರ ಸ್ವರೂಪದ ಶಾಂತಿಯುತ ಹೋರಾಟ ಹಾಗೂ ಪ್ರತಿಭಟನಾ ಜಾಥಾಗಳು ನಡೆದಿವೆ. ಆದರೆ ವಿಧಾನಸೌಧದ ಗದ್ದುಗೆದಾರರು ತುಷ್ಟಿಕರಣ,ಸಾಮಾಜಿಕ ವಿಭಜನೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಗ್ನರಗಿರುವ ಕಾರಣ ನ್ಯಾಯಯುತವಾದ ವಿದ್ಯಾರ್ಥಿಗಳ ಕೂಗು ಕೇಳಿದಂತಿಲ್ಲ.ಆದ್ದರಿಂದ ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರನ್ನು ತ್ವರಿತವಾಗಿ ನೇಮಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.

ಒಂದು ವೇಳೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ತೀವ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಎಬಿವಿಪಿ ನೀಡಿದೆ.

Share This Article
Facebook Whatsapp Whatsapp Telegram

Cinema news

Vijay trisha
ಡಿವೋರ್ಸ್ ಕೇಸ್ ಮಧ್ಯೆ ಒಂದೇ ಬಣ್ಣದ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಶಾ
Cinema Latest National Top Stories
Samantha Ruth Prabhu
ಶಿವಮೊಗ್ಗ | ಹೊಸನಗರದಲ್ಲಿ ಹೋಳಿಯಾಡಿದ ಸಮಂತಾ
Cinema Latest Shivamogga South cinema Top Stories
Rashmika Vijay 4
ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಆರತಕ್ಷತೆಗೆ ʻತುಳಸಿʼ ಮ್ಯಾಜಿಕ್‌
Cinema Latest Main Post
Love Mocktail
Toxic ಪೋಸ್ಟ್‌ಪೋನ್‌ ಬಳಿಕ ಲವ್ ಮಾಕ್ಟೇಲ್-3 ರಿಲೀಸ್ ಡೇಟ್ ಬದಲು
Cinema Latest Sandalwood Top Stories

You Might Also Like

Man Hammers Boy To Death Drinks Blood Tries To Eat Flesh Say Villagers
Crime

ಮಧ್ಯಪ್ರದೇಶ | ಬಾಲಕನನ್ನು ಸುತ್ತಿಗೆಯಿಂದ ಹೊಡೆದು ಕೊಂದು ರಕ್ತ ಕುಡಿದ ರಾಕ್ಷಸ!

Public TV
By Public TV
2 minutes ago
Squadron Leader Anuj L and Flight Lieutenant Purvesh Duragkar died in the SU 30 crash
Latest

ಅಸ್ಸಾಂನಲ್ಲಿ ಸುಖೋಯ್ Su-30 ವಿಮಾನ ಪತನ – ಇಬ್ಬರು ವಾಯುಪಡೆಯ ಪೈಲಟ್‌ಗಳು ಹುತಾತ್ಮ

Public TV
By Public TV
7 minutes ago
STILL.jpg
Latest

Karnataka Budget Live Updates

Public TV
By Public TV
11 minutes ago
siddaramaiah budget
Bengaluru City

ಇಂದು ರಾಜ್ಯ ಬಜೆಟ್‌ ಮಂಡನೆ; ಬಸ್‌ ನಿಲ್ದಾಣಗಳಲ್ಲಿ ಬಜೆಟ್‌ ನೇರಪ್ರಸಾರ- ವೀಕ್ಷಣೆಗೆ ಅವಕಾಶ

Public TV
By Public TV
43 minutes ago
modi trump crude oil
Latest

ರಷ್ಯಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ವಿನಾಯಿತಿ ಕೊಟ್ಟ ಅಮೆರಿಕ

Public TV
By Public TV
2 hours ago
Gadag Accident
Crime

ಕಾರು – ಬೈಕ್ ಅಪಘಾತ; ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?