ಆಮ್‌ಸ್ಟೆಲ್‌ವೀನ್: FIH ಪುರುಷರ ಹಾಕಿ ವಿಶ್ವಕಪ್ (FIH Hockey World Cup) ಟೂರ್ನಿಯ ಪೂಲ್-ಇ (Pool E) ಸುತ್ತಿನಲ್ಲಿ ಭಾರತಕ್ಕೆ ಭಾರೀ ಹಿನ್ನಡೆಯಾಗಿದೆ.
ಶನಿವಾರ ಆಮ್‌ಸ್ಟೆಲ್‌ವೀನ್‌ನ ವ್ಯಾಗ್ನರ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೆದರ್‌ಲ್ಯಾಂಡ್ (Netherlands) ತಂಡ ಭಾರತವನ್ನು 3-1 ಗೋಲುಗಳಿಂದ ಮಣಿಸಿದೆ. ಈ ಸೋಲಿನಿಂದ ಭಾರತದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.
The Indian Men’s Team fought hard, but the Netherlands take home a 3–1 win in the Round 2 clash in Pool E at the FIH Hockey World Cup Belgium & Netherlands 2026. 🏑
We regroup, refocus and go again against Argentina on Monday. 🇮🇳💪#HockeyIndia #IndiaKaGame #HWC2026 #INDvsNED pic.twitter.com/3d60tVv57c
— Hockey India (@TheHockeyIndia) August 22, 2026
ಪಂದ್ಯದಲ್ಲಿ ಭಾರತಕ್ಕೆ (Team India) ಒಟ್ಟು 7 ಪೆನಾಲ್ಟಿ ಕಾರ್ನರ್‌ಗಳು ಲಭಿಸಿದ್ರೆ, ನೆದರ್‌ಲ್ಯಾಂಡ್‌ಗೆ 4 ಪೆನಾಲ್ಟಿ ಕಾರ್ನರ್‌ಗಳು ಸಿಕ್ಕಿತ್ತು. ಅವಕಾಶಗಳಿದ್ದರೂ ಅವುಗಳನ್ನು ಗೋಲುಗಳಾಗಿ ಪರಿವರ್ತಿಸುವಲ್ಲಿ ಭಾರತ ವಿಫಲವಾಯಿತು. ಮತ್ತೊಂದೆಡೆ, ನೆದರ್‌ಲ್ಯಾಂಡ್ ನಿರ್ಣಾಯಕ ಕ್ಷಣಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಪಂದ್ಯವನ್ನ ತನ್ನದಾಗಿಸಿಕೊಂಡಿತು.
ಆರಂಭದಿಂದಲೇ ಆಕ್ರಮಣಕಾರಿ ಆಟ
ಪಂದ್ಯದ ಆರಂಭದಿಂದಲೇ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದವು. ಮೊದಲ 2 ಸುತ್ತುಗಳಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ಮೊದಲ ಸುತ್ತಿನ 13ನೇ ನಿಮಿಷದಲ್ಲಿ ನೆದರ್‌ಲ್ಯಾಂಡ್‌ಗೆ ಪೆನಾಲ್ಟಿ ಕಾರ್ನರ್ ಅವಕಾಶ ದೊರೆತರೂ, ಭಾರತದ ಮನ್‌ಪ್ರೀತ್ ಸಿಂಗ್ ಅದನ್ನು ಸಮರ್ಥವಾಗಿ ತಡೆದು ತಂಡವನ್ನು ರಕ್ಷಿಸಿದರು. ಮೊದಲ ಕ್ವಾರ್ಟರ್ ಅಂತ್ಯಕ್ಕೆ ಸ್ಕೋರ್ 0-0 ಆಗಿತ್ತು. ಹಾಫ್‌ಟೈಮ್‌ವರೆಗೂ ಭಾರತಕ್ಕೆ ಗೋಲು ಬರಲಿಲ್ಲ

ಎರಡನೇ ಕ್ವಾರ್ಟರ್ ಆರಂಭದಲ್ಲೇ ಭಾರತದ ರಕ್ಷಣಾ ವಿಭಾಗದ ಮೇಲೆ ನೆದರ್‌ಲ್ಯಾಂಡ್ ಒತ್ತಡ ಹೆಚ್ಚಿಸಿತು. 2ನೇ ಕ್ವಾರ್ಟರ್‌ನ ಮೊದಲ ಎರಡು ನಿಮಿಷಗಳಲ್ಲೇ ಚೆಂಡು ಸುಮಿತ್ ಅವರ ಕಾಲಿಗೆ ತಾಗಿದ್ದರಿಂದ ನೆದರ್‌ಲ್ಯಾಂಡ್‌ಗೆ ಮತ್ತೊಂದು ಪೆನಾಲ್ಟಿ ಕಾರ್ನರ್ ಸಿಕ್ಕಿತು. ಇದಾದ ಬಳಿಕ ನೆದರ್‌ಲ್ಯಾಂಡ್ಸ್ ಸತತ ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದು ಭಾರತದ ರಕ್ಷಣೆಯನ್ನು ಪರೀಕ್ಷಿಸಿತು. ಆದರೆ ಭಾರತೀಯ ಡಿಫೆನ್ಸ್ ಮತ್ತು ಗೋಲ್‌ಕೀಪರ್‌ಗಳು ಅದ್ಭುತವಾಗಿ ತಡೆದು ಗೋಲು ಹೊಡೆಯದಂತೆ ತಡೆಹಿಡಿದರು.
ಆರಂಭಿಕ 2 ಸುತ್ತು ಗೋಲೇ ಇಲ್ಲ; ಜಿದ್ದಾ ಜಿದ್ದಿ ಪೈಪೋಟಿ
ಭಾರತದ ಪರ ದಿಲ್‌ಪ್ರೀತ್ ಸಿಂಗ್ ಅವರಿಗೆ ಗೋಲು ಗಳಿಸುವ ಉತ್ತಮ ಅವಕಾಶವೊಂದು ಸಿಕ್ಕಿದ್ದರೂ, ಅದನ್ನು ಅವರು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೊದಲಾರ್ಧದ ಅಂತ್ಯಕ್ಕೆ ಸ್ಕೋರ್ 0-0 ಆಗಿಯೇ ಉಳಿಯಿತು. ಗಮನಾರ್ಹವೆಂದರೆ, ಮೊದಲಾರ್ಧದಲ್ಲಿ ಭಾರತಕ್ಕೆ ಒಂದೇ ಒಂದು ಪೆನಾಲ್ಟಿ ಕಾರ್ನರ್ ಸಿಗದಿದ್ದರೆ, ನೆದರ್‌ಲ್ಯಾಂಡ್ ಬರೋಬ್ಬರಿ 4 ಪೆನಾಲ್ಟಿ ಕಾರ್ನರ್‌ಗಳನ್ನ ಪಡೆದುಕೊಂಡಿತ್ತು.
ಸೆಮಿಫೈನಲ್ ಹಾದಿ ಕಠಿಣ
ದ್ವಿತೀಯಾರ್ಧದಲ್ಲಿ ನೆದರ್‌ಲ್ಯಾಂಡ್ ತನ್ನ ಆಕ್ರಮಣಕಾರಿ ಆಟ ತೀವ್ರಗೊಳಿಸಿ ಭಾರತದ ಮೇಲೆ ಒತ್ತಡ ಹೇರಿತು. ಅಂತಿಮವಾಗಿ 3-1 ಅಂತರದಲ್ಲಿ ಗೆದ್ದು ಸೆಮಿಫೈನಲ್ ಸ್ಥಾನವನ್ನ ಖಚಿತಪಡಿಸಿಕೊಂಡಿತು. ಭಾರತಕ್ಕೆ ಸೋಲು ಎದುರಾದ ಹಿನ್ನೆಲೆಯಲ್ಲಿ ಮುಂದಿನ ಹಂತಕ್ಕೇರುವ ಲೆಕ್ಕಾಚಾರಗಳು ಮತ್ತಷ್ಟು ಕಠಿಣವಾಗಿವೆ. ಉಳಿದ ಪಂದ್ಯಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವು ದಾಖಲಿಸುವುದು ಈಗ ಅತ್ಯಂತ ಮಹತ್ವದ್ದಾಗಿದೆ.

