ಪ್ರೇಮ್ ಅಡ್ಡದಲ್ಲಿ ಶಿವಣ್ಣ, ಕಿಚ್ಚನ ಕಾಳಗ ಶುರು- ನಿಜವಾದ ‘ವಿಲನ್’ ಯಾರು?

Public TV
1 Min Read
VILLAN COLLAGE

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಹಟ್ಟುಸಿರೋ ‘ದಿ-ವಿಲನ್’ ಚಿತ್ರ ಅಭಿಮಾನಿಗಳ ಮನದಲ್ಲಿ ಹಲ್‍ಚಲ್ ಎಬ್ಬಿಸಿದೆ. ಕರಿಯ, ಎಕ್ಸ್‍ಕ್ಯೂಸ್ ಮಿ, ಜೋಗಿ ಸಿಸಿಮಾಗಳಂತಹ ಸೂಪರ್ ಡೂಪರ್ ಹಿಟ್ ಕೊಟ್ಟಂತ ನಿರ್ದೇಶಕ ಪ್ರೇಮ್, ಶಿವಣ್ಣ ಹಾಗೂ ಕಿಚ್ಚ ಸುದೀಪ್‍ರನ್ನು ಹಾಕಿಕೊಂಡು ಏನ್ ಮಾಡುತ್ತಾರೆ ಎನ್ನುವ ಕುತೂಹಲ ಆಕಾಶ ಮುಟ್ಟಿದೆ.

ದಿನೇ ದಿನೇ ಒಂದಿಲ್ಲೊಂದು ಸೆನ್ಸೆಷನಲ್ ಸಮಾಚಾರ ‘ದಿ-ವಿಲನ್’ ತಂಡದಿಂದ ಹೊರಬರುತ್ತಿದೆ. ಬೆಂಗಳೂರು, ಚಿಕ್ಕಮಗಳೂರು, ಉತ್ತರ ಕರ್ನಾಟಕ ಹಾಗೂ ಲಂಡನ್‍ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದು ಈಗ ಕೊನೆಯ ಹಂತದ ಶೂಟಿಂಗ್‍ಗೆ ಚಿತ್ರತಂಡ ಅಣಿಯಾಗಿದೆ. ಆ ಕೊನೆಯ ಹಂತದ ರೋಚಕ ಚಿತ್ರೀಕರಣವೇ ವಿಲನ್ಸ್ ಕಾಳಗ ಎಂದು ಹೇಳಲಾಗಿದೆ.

VILLAN 2 1

`ದಿ-ವಿಲನ್’ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ನಲ್ಲಿ ಶಿವಣ್ಣ ಹಾಗೂ ಸುದೀಪ್ ನಡುವೆ ಕಾಳಗದ ದೃಶ್ಯವಿದೆ. ಈ ಸೀನ್‍ಗಾಗಿ ಅದ್ಧೂರಿಯಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿದೆ.

ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಸಾರಥ್ಯದಲ್ಲಿ ಈ ಫೈಟಿಂಗ್ ಸೀನ್ ಶೂಟಿಂಗ್ ನಡೆಯುತ್ತಿದೆ. ಡಿಫರೆಂಟ್ ಆಗಿ ವಿಲನ್‍ಗಳು ಈ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದು, ಅಸಲಿ ವಿಲನ್ ಯಾರು ಎನ್ನುವುದನ್ನು ಈ ದೃಶ್ಯ ಸಾಬೀತು ಮಾಡಲಿದೆ.

VILLAN 6 1

ಸಿ.ಆರ್. ಮನೋಹರ್ ನಿರ್ಮಾಣದಲ್ಲಿ ಬರೋಬ್ಬರಿ 6 ಭಾಷೆಯಲ್ಲಿ `ದಿ-ವಿಲನ್’ ಮೂಡಿಬರುತ್ತಿದೆ. ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದಲ್ಲಿ ಚಿತ್ರತಂಡ ಮಗ್ನವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕುತೂಹಲ ಮೂಡಿಸುವ ಟೀಸರ್ ಪ್ರೇಕ್ಷಕರ ಮುಂದೆ ಇಡಲಿದ್ದಾರೆ.

VILLAN 5

VILLAN 1

VILLAN 4

VILLAN 3

Share This Article